ರಾಜ್ಯ

ಲಾಕ್ ಡೌನ್ ಸಡಿಲಿಕೆ ನಂತರ ದೇಶೀಯ ವಿಮಾನಗಳಲ್ಲಿ ಪ್ರಯಾಣಿಕರ ಸಂಚಾರದಲ್ಲಿ ಹೆಚ್ಚಳ

Sumana Upadhyaya

ಬೆಂಗಳೂರು: ಕೊರೋನಾ ಲಾಕ್ ಡೌನ್ ಹೇರಿಕೆ ಸಡಿಲಗೊಂಡ ನಂತರ ಮತ್ತು ಹಬ್ಬಗಳ ಸಮಯವಾಗಿರುವುದರಿಂದ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ದೇಶೀಯ ವಿಮಾನಯಾನ ವಲಯದಲ್ಲಿ ಪ್ರಯಾಣಿಕರ ಸಂಚಾರದಲ್ಲಿ ಹೆಚ್ಚಳವಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ತಿಳಿಸಿದೆ.

ಕಳೆದ ತಿಂಗಳು ದೇಶಾದ್ಯಂತ ಸುಮಾರು 52.71 ಲಕ್ಷ ಪ್ರಯಾಣಿಕರು ವಿಮಾನಗಳಲ್ಲಿ ಸಂಚರಿಸಿದ್ದು ಸೆಪ್ಟೆಂಬರ್ ತಿಂಗಳಲ್ಲಿ 39.43 ಲಕ್ಷವಾಗಿತ್ತು. ಈ ತ್ರೈಮಾಸಿಕದಲ್ಲಿ ವಿಮಾನಯಾನ ವಲಯ ಕೊಂಚ ಸುಧಾರಿಸುತ್ತಿದೆ. ಆದರೆ ಕಳೆದ ವರ್ಷದ ಇದೇ ಸಮಯದ ಶೇಕಡಾ 57.2ರಷ್ಟು ಈ ವರ್ಷ ಕಡಿಮೆಯಾಗಿದೆ ಎಂದು ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್, ವಿಮಾನಗಳಲ್ಲಿ ಸಂಚರಿಸುವವರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ಕೊರೋನಾ ಲಸಿಕೆ ಬಂದರೆ ಮೊದಲಿನಂತೆ ಜನಜೀವನ ಆರಂಭವಾಗಬಹುದು. ದೇಶದ 9 ವಿಮಾನ ಸಂಸ್ಥೆಗಳಲ್ಲಿ ಒಟ್ಟಾರೆ ಪ್ರಯಾಣಿಕರ ಸಂಚಾರ ಅಕ್ಟೋಬರ್ ತಿಂಗಳಲ್ಲಿ ಶೇಕಡಾ 59.2ರಷ್ಟಾಗಿದ್ದು, ಸ್ಪೈಸ್ ಜೆಟ್ ನಲ್ಲಿ ಅಧಿಕ ಶೇಕಡಾ 74ರಷ್ಟು, ಸ್ಟಾರ್ ಏರ್ ನಲ್ಲಿ ಶೇಕಡಾ 71.6ರಷ್ಟು ಪವನ್ ಹನ್ಸ್ ನಲ್ಲಿ ಕಡಿಮೆ ಶೇಕಡಾ 21.9ರಷ್ಟು ಮಂದಿ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ.

ಇಂಡಿಗೊ 29.27 ಲಕ್ಷದೊಂದಿಗೆ ಪ್ರಯಾಣಿಕರ ಸಿಂಹ ಪಾಲನ್ನು ಹೊಂದಿದ್ದು, ಇದು ಒಟ್ಟಾರೆ ದೇಶೀಯ ದಟ್ಟಣೆಯ 55.5% ನಷ್ಟಿದೆ. ದೇಶೀಯ ವಿಮಾನ ಏರ್ ಇಂಡಿಯಾ ಕೇವಲ 4.94 ಲಕ್ಷ ಪ್ರಯಾಣಿಕರನ್ನು ಹಾರಿಸಿದ್ದರಿಂದ ಕೇವಲ 9.4% ಪಾಲನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆ ಅಂಕಿಅಂಶಗಳು 58.27% ನಕಾರಾತ್ಮಕ ಬೆಳವಣಿಗೆಯನ್ನು ಬಹಿರಂಗಪಡಿಸಿವೆ. 2020 ರ ಜನವರಿಯಿಂದ ಅಕ್ಟೋಬರ್ ವರೆಗೆ 4.93 ಕೋಟಿ ಪ್ರಯಾಣಿಕರು ಸಂಚರಿಸಿದ್ದರೆ, 2019 ರಲ್ಲಿ ಇದೇ ಅವಧಿಯಲ್ಲಿ 11.82 ಕೋಟಿ ಪ್ರಯಾಣಿಕರು ಸಂಚಾರ ನಡೆಸಿದ್ದರು.

SCROLL FOR NEXT