ರಾಜ್ಯ

ರಾಮನಗರ ಮಾವು ಸಂಸ್ಕರಣಾ ಘಟಕಕ್ಕೆ 15 ಎಕರೆ ಜಮೀನು: ಡಿಸಿಎಂ

Manjula VN

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿರುವ ಅತ್ಯಾಧುನಿಕ ಮಾವು ಸಂಸ್ಕರಣಾ ಘಟಕಕ್ಕೆ 15 ಎಕರೆ ಭೂಮಿಯನ್ನು ತೋಟಗಾರಿಕೆ ಇಲಾಖೆ ನೀಡಿದೆ ಎಂದು ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಹಿಂದೆ, ಭೂಮಿ ಹಸ್ತಾಂತರದ ಬಗ್ಗೆ ರೇಷ್ಮೆ ಮತ್ತು ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣ ಗೌಡ ಅವರ ಜತೆ ಚರ್ಚೆ ಮಾಡಲಾಗಿತ್ತು. ಆಗ ತಮ್ಮ ಪ್ರಸ್ತಾವನೆಗೆ ಒಪ್ಪಿದ್ದ ತೋಟಗಾರಿಕೆ ಸಚಿವರು ಅಗತ್ಯ ಪ್ರಮಾಣದ ಭೂಮಿ ನೀಡಲು ಒಪ್ಪಿಗೆ ಸೂಚಿಸಿದ್ದರು ಅದರಂತೆಯೇ ಭೂಮಿ ನೀಡುವ ಆದೇಶವವನ್ನು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಶುಕ್ರವಾರ ಹೊರಡಿಸಿದ್ದಾರೆಂದು ತಿಳಿಸಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಭೈರಾಪಟ್ಟಣ ಗ್ರಾಮದ ಬಳಿ ಇರುವ ತೋಟಗಾರಿಕಾ ಇಲಾಖೆ 50 ಎಕರೆ ಪ್ರದೇಶದಲ್ಲಿ 15 ಎಕರೆ ಪ್ರದೇಶವನ್ನು ಮಾವು ಸಂಸ್ಕರಣಾ ಘಟಕಕ್ಕೆ ನೀಡಲಾಗಿದೆ. ಆದಷ್ಟು ಬೇಗ ಕಾಮಗಾರಿಗೆ ಅಡಿಗಲ್ಲು ಹಾಕಿ ನಿಗದಿತ ಅವಧಿಯಲ್ಲೇ ಕಾಮಗಾರಿ ಪೂರ್ಣ ಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ.

SCROLL FOR NEXT