ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಅವರೊಂದಿಗೆ ನಟ ಅನಿರುದ್ಧ 
ರಾಜ್ಯ

ಉದ್ಯಾನ ನಗರಿಯ ಸ್ವಚ್ಛತೆಗೆ ನಟ ಅನಿರುದ್ಧ ಫ್ಲ್ಯಾನ್ ಹೀಗಿದೆ ನೋಡಿ!

 ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ನಾಡಿನ ಮನೆ ಮನೆ ಮಾತಾಗಿರುವ ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ, ಕೇವಲ ತೆರೆಯ ಮೇಲೆ ಸಮಾಜಮುಖಿ ಕಾರ್ಯಗಳ ಬಗ್ಗೆ ಹೇಳುವುದು ಮಾತ್ರವಲ್ಲದೆ, ನಿಜ ಜೀವನದಲ್ಲಿಯೂ ಇಂತಹ ಕಾರ್ಯಗಳಿಗೆ ಒತ್ತು ನೀಡುತ್ತಿದ್ದಾರೆ.

ಬೆಂಗಳೂರು: ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ನಾಡಿನ ಮನೆ ಮನೆ ಮಾತಾಗಿರುವ ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ, ಕೇವಲ ತೆರೆಯ ಮೇಲೆ ಸಮಾಜಮುಖಿ ಕಾರ್ಯಗಳ ಬಗ್ಗೆ ಹೇಳುವುದು ಮಾತ್ರವಲ್ಲದೆ, ನಿಜ ಜೀವನದಲ್ಲಿಯೂ ಇಂತಹ ಕಾರ್ಯಗಳಿಗೆ ಒತ್ತು ನೀಡುತ್ತಿದ್ದಾರೆ.

ಇತ್ತೀಚಿಗೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಅನಿರುದ್ಧ ಜಾಗೃತಿ ಮೂಡಿಸಿದ್ದರು.ಜಾಲತಾಣದಲ್ಲಿನ ಅವರ ಪೋಸ್ಟ್ ಗೆ ಬಿಬಿಎಂಪಿ ಅಧಿಕಾರಿಗಳು ತಕ್ಷಣಕ್ಕೆ ಪ್ರತಿಕ್ರಿಯಿಸಿ, ಎರಡು ಬಡಾವಣೆಗಳು ಸ್ವಚ್ಛವಾಗುವಂತೆ ಮಾಡಿದ್ದರು. 
ಇದೀಗ ಅನಿರುದ್ಧ್ ಬಿಬಿಎಂಪಿ ವಿಶೇಷ ಆಯುಕ್ತ  ರಣದೀಪ್ಅವರನ್ನು ಭೇಟಿಯಾಗಿ, ನಗರದ ಸ್ವಚ್ಛತೆಯ ಬಗ್ಗೆ  ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದಾರೆ.

ರಣದೀಪ್ ಅವರ  ಜೊತೆ ಚರ್ಚಿಸಿದ ಹಲವು ವಿಚಾರಗಳನ್ನು ಅನಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

1) ಸಲಹೆಗಾರರ ಮಂಡಳಿಯನ್ನು ಸ್ಥಾಪಿಸಿ ಆ ಮಂಡಳಿಯಲ್ಲಿ ಸಂಶೋಧಕರು, ಪಟ್ಟಣ ಯೋಜಕರು, ಸಮಾಜ ಸೇವಕರು, ಸಾಮಾಜಿಕ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಮಲ್ಟಿ ನ್ಯಾಷನಲ್ ಕಂಪನಿಗಳು, ಮತ್ತು ಇತರ ಗಣ್ಯರು ಇರುತ್ತಾರೆ.

2) ತೆರೆದ ಕಾಲುವೆಗಳನ್ನು ಮುಚ್ಚಿ ಗುಜರಾತ್  ಮಾದರಿಯ ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಫಲಕಗಳನ್ನ ಬಳಸುವುದು ಮತ್ತು ಎರಡೂ ಬದಿಯಲ್ಲಿ ಗೋಡೆಗಳನ್ನ ಕಟ್ಟಿ ಅವುಗಳ ಮೇಲೆ ವರ್ಟಿಕಲ್ ಗಾರ್ಡನಿಂಗ್ ಮಾಡುವುದು.

3) ಮುಚ್ಚಿರೋ ಕಸ ಸಂಗ್ರಹಿಸೋ ಆಧುನಿಕ ವಾಹನ, ಅಭಿವೃದ್ಧಿಗೊಂಡಿರೋ ದೇಶಗಳಲ್ಲಿ ಇರೋಹಾಗೆ
4) ಸ್ವಚ್ಛ ಮುಚ್ಚಿರೋ (ಒಣ ಮತ್ತು ಹಸಿ) ಕಸದ ಪೆಟ್ಟಿಗೆಗಳನ್ನ ಅಲ್ಲಲ್ಲಿ ಇರಿಸುವುದು, ಇವುಗಳು ಕಸ ಸಂಗ್ರಹಿಸೋ ಆಧುನಿಕ ವಾಹನಗಳಿಂದ ಎತ್ತಲಾಗುವುದು.

5) ಸಿಸಿಟಿವಿ ಗಳನ್ನು ಕಪ್ಪುಚುಕ್ಕೆ ಇರುವಂತಹ ಸ್ಥಳಗಳಲ್ಲಿ ಹಾಕುವುದು.

6) ಪೌರಕಾರ್ಮಿಕರಿಗೆ ಸುರಕ್ಷಿತ ಕ್ರಮಗಳನ್ನ, ಕೈಗವಸುಗಳನ್ನ ಮತ್ತು ಬೂಟುಗಳನ್ನು ಒದಗಿಸುವುದು.

7) ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.

8) 'ಆರ್ಯವರ್ಧನ್ ಯೋಜನೆ' - ಕಸ ಕೊಳ್ಳುವುದು. ಇದು ಆದಲ್ಲಿ ಜನಗಳಿಗೆ ಕಸದಲ್ಲಿ ಕಾಸು ಕಾಣುವುದು ಮತ್ತು ಅಲ್ಲಲ್ಲಿ ಹಾಕುವುದನ್ನು ನಿಲ್ಲಿಸಬಹುದು.

9) ಒಳ್ಳೆ ರಸ್ತೆಗಳು, ವೈಜ್ಞಾನಿಕ ಹಂಪ್ ಗಳು ಮತ್ತು ಎರಡೂ ಬದಿಯಲ್ಲಿ ಫುಟ್ ಪಾಥ್ ಗಳು

10) ರೋಟರಿ, ಲಯನ್ಸ್  ತರಹದ ಸಾಮಾಜಿಕ ಸಂಸ್ಥೆಗಳಿಗೆ ಮತ್ತು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಬಿ. ಬಿ.ಎಂ.ಪಿ ಯ ಜೊತೆಗೂಡಿ ಕೆಲಸ ಮಾಡಲು ಆಹ್ವಾನಿಸುವುದು.

11) ರಸ್ತೆಯಲ್ಲಿ ಕಸ ಹಾಕಿದವರಿಗೆ ಅತಿಯಾದ ದಂಡ ಮತ್ತು ಕಠಿಣ ಶಿಕ್ಷೆ ವಿಧಿಸುವುದು. ತಮ್ಮ ಸಹಭಾಗದಿಂದ, ಹಾರೈಕೆ, ಆಶೀರ್ವಾದದಿಂದ ಮುಂಬರುವ ದಿನಗಳಲ್ಲಿ ಸ್ವಚ್ಛ, ವೈಜ್ಞಾನಿಕ, ಶಕ್ತಿ ಉತ್ಪಾದನೆ ಮಾಡುವಂತಹ, ಹಸಿರು, ಸುರಕ್ಷಿತ ದೇಶ ನಾವು ನೋಡಬಹುದು. ಅಲ್ಲದೆ ತಮ್ಮಲ್ಲಿ ಕಳಕಳಿಯ ವಿನಂತಿ. ತಮ್ಮಲ್ಲಿ ಯಾರಾದರು ಸಂಶೋಧನೆ ಮಾಡಿದ್ದಾಗಲಿ ಅಥವಾ ಈ ಕ್ಷೆತ್ರದಲ್ಲಿ ಅನುಭವ ಇದ್ದಲ್ಲಿ ತಮ್ಮ ಅನಿಸಿಕೆಗಳನ್ನ, ಕಲ್ಪನೆಗಳನ್ನು ಇಲ್ಲಿ ಹಂಚಿಕೊಳ್ಳಿ ಎಂದು ಅನಿರುದ್ಧ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT