ರಾಜ್ಯ

ಬೆಂಗಳೂರು ವಲಯದಿಂದ ಪಿಪಿಇ ಮಾದರಿಯಲ್ಲಿ ಪ್ರಯಾಣಿಕ ರೈಲು ಓಡಿಸಲು 8 ಖಾಸಗಿ ಕಂಪನಿಗಳು ಉತ್ಸುಕ

Sumana Upadhyaya

ಬೆಂಗಳೂರು: ಖಾಸಗಿ ಸಾರ್ವಜನಿಕ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಪ್ರಯಾಣಿಕರ ರೈಲುಗಳನ್ನು ಸಂಚಾರ ಮಾಡಲು ಎಂಟು ಸಂಸ್ಥೆಗಳು ಮುಂದೆ ಬಂದಿವೆ. 

ಬೆಂಗಳೂರು ವಲಯದಲ್ಲಿ 12 ಸಮೂಹಗಳ ಪ್ರಯಾಣಿಕರ ರೈಲುಗಳನ್ನು ಸಂಚರಿಸಲು 102 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು ಎಂದು ರೈಲ್ವೆ ಸಚಿವಾಲಯ ಹೇಳಿದೆ.

ಬೆಂಗಳೂರು ವಲಯದಲ್ಲಿ (ಕ್ಲಸ್ಟರ್ 12) ಈ ಕೆಳಗಿನ ಮಾರ್ಗಗಳಲ್ಲಿ ಈ ರೈಲುಗಳ ಸಂಚಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಅವುಗಳು: ಮೈಸೂರು ಮತ್ತು ಭುವನೇಶ್ವರ(ಪ್ರತಿದಿನ), ಬೆಂಗಳೂರು ಮತ್ತು ಗುವಾಹಟಿ(ವಾರಕ್ಕೆ ಮೂರು ದಿನ), ಬೆಂಗಳೂರು ಮತ್ತು ದೆಹಲಿ(ಪ್ರತಿದಿನ), ಬೆಂಗಳೂರು ಮತ್ತು ಹೌರಾ ಧರ್ಮಾವರಂ ಮಾರ್ಗದ ಮೂಲಕ(ಪ್ರತಿದಿನ) ಬೆಂಗಳೂರು ಮತ್ತು ರಾಂಚಿ (ವಾರಕ್ಕೆ ಎರಡು).

ಖಾಸಗಿ ನಿರ್ವಾಹಕರ ಮೂಲಕ 151 ರೈಲುಗಳ ಸಂಚಾರಕ್ಕೆ ರೈಲ್ವೆ ಪ್ರಸ್ತಾವನೆ ಸಲ್ಲಿಸಿದೆ. ಭಾರತೀಯ ರೈಲ್ವೆ ಸಂಪರ್ಕ ಜಾಲದಲ್ಲಿ ಪ್ರಯಾಣಿಕರ ರೈಲು ಸಂಚಾರಕ್ಕೆ ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಇದು ಪ್ರಮುಖ ಅಭಿಯಾನವಾಗಿದೆ. ಇದರಲ್ಲಿ ಖಾಸಗಿ ವಲಯ 30 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. 

ಭಾರತೀಯ ರೈಲ್ವೆಯಲ್ಲಿ ಖಾಸಗಿ ವಲಯಗಳ ಕಾರ್ಯಾಚರಣೆ 2023ರ ಮಾರ್ಚ್ ತಿಂಗಳಲ್ಲಿ ಆರಂಭವಾಗಲಿದೆ.

SCROLL FOR NEXT