ರಾಜ್ಯ

ಅಸ್ತಿತ್ವದಲ್ಲಿರುವ ಮಂಡಳಿಗಳಿಗೆ ಮೊದಲು ಅನುದಾನ ನೀಡಿ: ಪಿಆರ್ ರಮೇಶ್ ಆಗ್ರಹ

Shilpa D

ಮಂಗಳೂರು: ವಿವಿಧ ಸಮುದಾಯಗಳ ಅಭಿವೃದ್ಧಿ ಮಂಡಳಿಗಳನ್ನು ರಚಿಸಿ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ, ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಎಂಎಲ್ ಸಿ ಪಿಆರ್ ರಮೇಶ್ ಖಂಡಿಸಿದ್ದಾರೆ.

ಮೊದಲು ಅಸ್ತಿತ್ವದಲ್ಲಿರುವ ವಿವಿಧ ಅಭಿವೃದ್ಧಿ ಮಂಡಳಿಗಳಿಗೆ ಮೊದಲು ಅನುದಾನ ನೀಡಿ, ನಂತರ ಹೊಸ ಮಂಡಳಿ ಸ್ಥಾಪನೆ ಮಾಡಿ ಎಂದು ರಮೇಶ್ ಆಗ್ರಹಿಸಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ಕೆಲವು ಸಮುದಾಯಗಳ ಅಭಿವೃದ್ಧಿ ಮಂಡಳಿ ರಚಿಸುತ್ತಿರುವುದು ದುರಾದೃಷ್ಟಕರ ಎಂದಿದ್ದಾರೆ.

ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮಂಡಳಿ ರಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಹಿಂದುಳಿದ ವರ್ಗಗಳಾದ ಸವಿತಾ ಸಮಾಜ, ಕುಂಬಾರ ಮತ್ತಿತರ ಸಮುದಾಯಗಳ ಅಭಿವೃದ್ಧಿಗೆ ದೀರ್ಘಾವದಿ ಯೋಜನೆ ಹಾಕಿಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ 400 ಕೋಟಿ ರು ಅನುದಾನ ನೀಡಲಾಗಿತ್ತು, ಜೊತೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು ಎಂದು ಹೇಳಿದ್ದಾರೆ.

ಸರ್ಕಾರ ಕಡ್ಡಾಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ, ಅವುಗಳ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಿಗಳರ ಅಭಿವೃದ್ಧಿ ಮಂಡಳಿ ರಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

SCROLL FOR NEXT