ಸಾಂದರ್ಭಿಕ ಚಿತ್ರ 
ರಾಜ್ಯ

ದೊಡ್ಡ ಅಳತೆಯ ನಿವೇಶನಗಳಿಗೆ ಎರಡು ಪೈಪ್ ಲೈನ್ ಕಡ್ಡಾಯ: ಸರ್ಕಾರಕ್ಕೆ ಬಿಡಬ್ಲ್ಯುಎಸ್ ಎಸ್ ಬಿ ಪ್ರಸ್ತಾವನೆ

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯುಎಸ್ಎಸ್ ಬಿ) ಅದರ ಬಿಡಬ್ಲ್ಯುಎಸ್ ಎಸ್ ಬಿ ಕಾಯ್ದೆಗೆ ತಿದ್ದುಪಡಿ ತರುವಂತೆ ಕೋರಿದೆ.

ಬೆಂಗಳೂರು: ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯುಎಸ್ಎಸ್ ಬಿ) ಅದರ ಬಿಡಬ್ಲ್ಯುಎಸ್ ಎಸ್ ಬಿ ಕಾಯ್ದೆಗೆ ತಿದ್ದುಪಡಿ ತರುವಂತೆ ಕೋರಿದೆ. ಈ ಮೂಲಕ 40*60 ಅಳತೆ ಮತ್ತು ಅದಕ್ಕಿಂತ ಹೆಚ್ಚಿನ ಅಳತೆಯ ನಿವೇಶನಗಳಲ್ಲಿರುವ ಎಲ್ಲಾ ಮನೆಗಳಿಗೆ ಎರಡು ನಳ್ಳಿ ನೀರಿನ ಸಂಪರ್ಕವನ್ನು ಕಡ್ಡಾಯ ಮಾಡಬೇಕೆಂದು ಕೋರಿದೆ.

ಮಳೆನೀರು ಕೊಯ್ಲನ್ನು ಮನೆಯ ಬೇರೆ ಉದ್ದೇಶಗಳಿಗೆ ಬಳಸಿ ಕುಡಿಯುವ ನೀರನ್ನು ನಗರದ ನಾಗರಿಕರು ಕುಡಿಯುವುದಕ್ಕೆ ಬಳಸುವ ಮೂಲಕ ಕುಡಿಯುವ ನೀರಿನ ಬಳಕೆಯನ್ನು ಉಳಿತಾಯ ಮಾಡಬಹುದು ಎಂಬುದು ಇಲಾಖೆಯ ಪ್ರಸ್ತಾವನೆಯ ಉದ್ದೇಶವಾಗಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಇಲಾಖೆಯ ಅಧಿಕಾರಿಯೊಬ್ಬರು, ಇದುವರೆಗೆ ಮಳೆ ನೀರು ಕೊಯ್ಲು ಮೂಲಕ ಸಂಗ್ರಹಿಸಿದ ನೀರನ್ನು ಮನೆಗಳಲ್ಲಿ ಸ್ವಚ್ಛತೆಗೆ ಮತ್ತು ಇತರ ಉಪಯೋಗಕ್ಕೆ ಬಳಸಿಕೊಳ್ಳಬಹುದಾಗಿತ್ತು. ಅಥವಾ ಅಂತರ್ಜಲ ನೀರಿನ ಮಟ್ಟ ಹೆಚ್ಚಿಸಲು ಅಂತರ್ಜಲಕ್ಕೆ ಕೂಡ ಕಳುಹಿಸಬಹುದಾಗಿತ್ತು. ಇನ್ನು ಮುಂದೆ ಮಳೆ ನೀರು ಕೊಯ್ಲನ್ನು ಕಡ್ಡಾಯವಾಗಿ ಬೇರೆ ಉಪಯೋಗಗಳಿಗೆ ಮನೆಗಳಲ್ಲಿ ಬಳಕೆ ಮಾಡಬೇಕು ಎಂದು ನಾವು ಪ್ರಸ್ತಾವನೆ ಸಲ್ಲಿಸಿದ್ದು ಇದರಿಂದ ಕಾವೇರಿ ನೀರನ್ನು ಉಳಿತಾಯ ಮಾಡಬಹುದು, ಇಲ್ಲಿಯವರೆಗೆ ಕಾವೇರಿ ನೀರು ಎಲ್ಲಾ ಉದ್ದೇಶಗಳಿಗೆ ಬಳಸಲಾಗುತ್ತಿತ್ತು ಎಂದರು.

ಈ ಪ್ರಸ್ತಾವನೆ ಪ್ರಾಯೋಗಿಕ ಹಂತದಲ್ಲಿದೆ. ಕಾನೂನು ಸಚಿವಾಲಯದೊಂದಿಗೆ ಚರ್ಚಿಸಿದ್ದು 10 ಸಾವಿರ ಚದರಡಿ ಅಳತೆಯ ಮನೆಗಳಿಗೆ ಮಾತ್ರ ಈ ಕಾನೂನನ್ನು ಕಡ್ಡಾಯಗೊಳಿಸಲು ಸಚಿವಾಲಯ ಉತ್ಸುಕವಾಗಿದೆ. ಆದರೆ ನಾವು 40*60 ಅಳತೆಯ ಮನೆಗಳಿಗೆ ಕೂಡ ಜಾರಿಗೆ ತರಲು ಕೇಳುತ್ತಿದ್ದೇವೆ. ಬೆಂಗಳೂರಿನಲ್ಲಿ ಬಹುತೇಕ ಮನೆಗಳು 30*40 ಅಥವಾ 40*60 ಚದರಡಿಗಳಲ್ಲಿ ಇರುತ್ತದೆ. ಇದಕ್ಕಿಂತ ಹೆಚ್ಚಿನ ಚದರಡಿ ಮನೆಗಳೆಂದರೆ ಅವು ಚೌಟರಿಗಳು ಇಲ್ಲವೇ ಮದುವೆ ಹಾಲ್ ಗಳಾಗಿರುತ್ತವೆ, ಹಾಗಾಗಿ ಸಚಿವಾಲಯದ ನಿಯಮ ಪ್ರಯೋಜನಕ್ಕೆ ಬರುವುದಿಲ್ಲ ಎನ್ನುತ್ತಾರೆ.

ಬಿಡಬ್ಲ್ಯುಎಸ್ ಎಸ್ ಬಿ ಸರ್ಕಾರದ ಅನುಮೋದನೆಗೆ ಕಾಯುತ್ತಿದೆ. 2016ರ ಫೆಬ್ರವರಿ ಗೆಜೆಟ್ ಅಧಿಸೂಚನೆ ಪ್ರಕಾರ, 30*40 ಅಳತೆ ಮತ್ತು ಅದಕ್ಕಿಂತ ದೊಡ್ಡ ಗಾತ್ರದ ನಿವೇಶನಗಳಲ್ಲಿ ಕಡ್ಡಾಯವಾಗಿ ಮಳೆನೀರು ಕೊಯ್ಲು ಘಟಕಗಳನ್ನು ಅಳವಡಿಸಬೇಕು, ಇಲ್ಲದಿದ್ದರೆ ದಂಡ ಪಾವತಿಸಬೇಕಾಗುತ್ತದೆ. ದಂಡ ಮೊತ್ತ ವಸತಿ ಘಟಕಗಳಿಗೆ ಶೇಕಡಾ 50ರಷ್ಟು ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಶೇಕಡಾ 100ರಷ್ಟಾಗುತ್ತದೆ. 

ಕಳೆದ ವರ್ಷ ನವೆಂಬರ್ ನಲ್ಲಿ ಇಲಾಖೆ ತೋರಿಸಿರುವ ಅಂಕಿಅಂಶ ಪ್ರಕಾರ, 1 ಲಕ್ಷದ 21 ಸಾವಿರದ 372 ಮನೆಗಳಲ್ಲಿ ಮಳೆನೀರು ಕೊಯ್ಲು ಘಟಕಗಳನ್ನು ಸ್ಥಾಪಿಸಿದರೆ 65 ಸಾವಿರ ಮನೆಗಳಲ್ಲಿ ಸ್ಥಾಪಿಸಿಲ್ಲ. ದಂಡದ ಮೊತ್ತವಾಗಿ ತಿಂಗಳಿಗೆ ಸುಮಾರು 3 ಕೋಟಿ ರೂಪಾಯಿ ಬಂದಿದೆ. ಜನರು ಮಳೆನೀರು ಕೊಯ್ಲು ನಿಯೋಜಿಸುವ ಬದಲು ದಂಡ ಮೊತ್ತ ಪಾವತಿಸಿ ಸುಮ್ಮನಾಗಿರಲು ಹೆಚ್ಚು ಒಲವು ತೋರಿಸುವಂತೆ ಕಂಡುಬರುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT