ರಾಜ್ಯ

ದಾಖಲೆಗಾಗಿ ಪ್ರಾಣಿ ಹಿಂಸೆ: 14 ಟನ್ ಕಬ್ಬು ಎಳೆಸಿದ ಜೊಡೆತ್ತುಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲು!

Srinivasamurthy VN

ಮೈಸೂರು: ದಾಖಲೆಗಾಗಿ ಪ್ರಾಣಿ ಹಿಂಸೆ ಮಾಡಿದ ಆರೋಪದ ಮೇರೆಗೆ 14 ಟನ್ ಕಬ್ಬು ಎಳೆಸಿದ ಜೊಡೆತ್ತುಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಹೌದು.. ಇತ್ತೀಚೆಗೆ ಮಂಡ್ಯದಲ್ಲಿ ಯುವಕರ ತಂಡವೊಂದು ಎತ್ತಿನ ಗಾಡಿಯಲ್ಲಿ ಬರೊಬ್ಬರಿ 14.55 ಟನ್ ಕಬ್ಬು ತುಂಬಿ ಅವುಗಳನ್ನು ಎತ್ತುಗಳ ಮೂಲಕ ಸುಮಾರು 3 ಕಿ.ಮೀ ದೂರದವರೆಗೂ ಎಳೆಸಿದ್ದರು. ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದ ವಿನಾಯಕ ಗೆಳೆಯ ಬಳಗದ ಯುವಕರು ದಾಖಲೆ ನಿರ್ಮಾಣಕ್ಕಾಗಿ  ಈ ಕಾರ್ಯ ಮಾಡಿದ್ದರು. ಈ ವಿಡಿಯೋ ವೈರಲ್ ಕೂಡ ಆಗಿತ್ತು. ಆದರೆ ಯುವಕರ ಇದೇ ಸಾಹಸ ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಲೇ ಮಂಡ್ಯ ಪೊಲೀಸ್ ಠಾಣೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಜೊಡೆತ್ತುಗಳ ಮಾಲೀಕರ ವಿರುದ್ಧ ಸ್ವಯಂ ಪ್ರೇರಿತ ದೂರು  ದಾಖಲಿಸಿಕೊಳ್ಳಲಾಗಿದೆ. ಈ ಜೋಡೆತ್ತುಗಳನ್ನು ಶರತ್ ಅವರು ಕಳೆದ ತಿಂಗಳಷ್ಟೇ 2.90 ಲಕ್ಷ ರೂ.ಗೆ ಖರೀದಿ ಮಾಡಿದ್ದರು.

ಮೂಲಗಳ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ ಇಲ್ಲಿವರೆಗೆ ಒಂದು ಗಾಡಿಗೆ 12 ಟನ್ ತುಂಬುಲಾಗಿತ್ತು. ಆದರೆ ಮಲ್ಲಿಗೆರೆಯ ಯುವಕರ ತಂಡ 14.55 ಟನ್ ಕಬ್ಬು ತುಂಬಿ ಹಳೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಇಷ್ಟು ಟನ್ ಕಬ್ಬು ತುಂಬಿದ ಎತ್ತಿನ ಗಾಡಿಯನ್ನು ಹುರುಗಲವಾಡಿ ಗ್ರಾಮದ ಶರತ್ ಅವರ ಜೋಡೆತ್ತುಗಳು  ಮೂರು ಕಿಲೋಮೀಟರ್ ಎಳೆದು ತಂದಿದ್ದವು. 

SCROLL FOR NEXT