ರಾಜ್ಯ

ಹೆಚ್ಚಿನ ವಿಚಾರಣೆಗಾಗಿ ಖತರ್ನಾಕ್ ಹ್ಯಾಕರ್ ಶ್ರೀಕಿ ಸಿಸಿಬಿ ಕಸ್ಟಡಿಗೆ

Shilpa D

ಬೆಂಗಳೂರು: ಇತ್ತೀಚೆಗೆ ಬಂಧಿತನಾಗಿದ್ದ ಖತರ್ನಾಕ್ ಹ್ಯಾಕರ್ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿಯನ್ನು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಸುಮಾರು 30 ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದ ಶ್ರೀಕಿಯನ್ನು ಮತ್ತಷ್ಟು ತನಿಖೆಗಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಡಿಸೆಂಬರ್ 1 ರವರೆಗೆ ಕಸ್ಟಡಿಗೆ ಪಡೆಯಲು ಸಿಸಿಬಿ ಪೊಲೀಸರು ಕೋರ್ಟ್ ಅನುಮತಿ ಕೇಳಿತ್ತು. ನವೆಂಬರ್ 17 ರಂದು ಶ್ರೀಕಿಯನ್ನು ಡ್ರಗ್ ಕೇಸ್ ನಲ್ಲಿ ಬಂಧಿಸಲಾಗಿತ್ತು.

ಸುಮಾರು 30 ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ, ಮುಖ್ಯವಾಗಿ ಬಿಟ್ ಕಾಯಿನ್ ಎಕ್ಸೇಂಜ್ ಮತ್ತು ಪೋಕರ್ ಹಾಗೂ ಗೇಮಿಂಗ್ ಪೋರ್ಟಲ್ ಳನ್ನು ಹ್ಯಾಕ್ ಮಾಡಿದ್ದಾಗಿ ಜಂಟಿ ಪೊಲೀಸ್ ಆಯುಕ್ತ  ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ತಾಂತ್ರಿಕ ಸಾಕ್ಷ್ಯಗಳ ಹೆಚ್ಚಿನ ವಿಚಾರಣೆ, ಸಂಗ್ರಹಣೆ ಮತ್ತು ವಿಶ್ಲೇಷಣೆ ನಡೆಯುತ್ತಿದೆ. ಈ ಹೆಚ್ಚಿನ ಹ್ಯಾಕಿಂಗ್ ಪ್ರಕರಣಗಳಲ್ಲಿ, ಇತರ ಆರೋಪಿಗಳಾದ ಸುನೀಶ್ ಹೆಗ್ಡೆ ಮತ್ತು ಪ್ರಶಿದ್ ಶೆಟ್ಟಿ ಸಹ ಅವಿಭಾಜ್ಯ ಪಾತ್ರವನ್ನು ವಹಿಸಿದ್ದಾರೆ ”ಎಂದು ಪಾಟೀಲ್ ಹೇಳಿದ್ದಾರೆ.

ಹ್ಯಾಕಿಂಗ್  ಮಾಡಿ ಸಂಗ್ರಹಿಸುತ್ತಿದ್ದ ಹಣವನ್ನು ಡ್ರಗ್ಸ್ ಗಾಗಿ ಬಳಸುತ್ತಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ. “ಪ್ರಕರಣದಲ್ಲಿ ಬಂಧಿಸಲ್ಪಟ್ಟ ಶಂಕಿತರನ್ನು ಪ್ರಶ್ನಿಸಿದಾಗ ಹೆಗ್ಡೆ, ಶೆಟ್ಟಿ ಮತ್ತು ಶ್ರೀ ಕೃಷ್ಣ ಅವರು ಮಾದಕ ವ್ಯಸನಿಯಾಗಿದ್ದರು ಎಂದು ತಿಳಿದುಬಂದಿದೆ. ಇದಕ್ಕಾಗಿ ಹಣವನ್ನು ವ್ಯವಸ್ಥೆ ಮಾಡಲು, ಮೂವರು ವೆಬ್‌ಸೈಟ್‌ಗಳನ್ನು ಗುರುತಿಸಿ ಅವುಗಳನ್ನು ಹ್ಯಾಕ್ ಮಾಡಿದ್ದಾರೆ. ಶ್ರೀ ಕೃಷ್ಣ ಹ್ಯಾಕಿಂಗ್ ಮಾಡುವಲ್ಲಿ ಪರಿಣತನಾಗಿದ್ದಾನೆ ಎಂದು ತಿಳಿದು ಬಂದಿದೆ.

ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವಾಗ ಆರೋಪಿಗಳು ರೆಸಾರ್ಟ್‌ಗಳು ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ್ದರು. ಅವರು ಡಾರ್ಕ್ ವೆಬ್‌ನಿಂದ ಮಾದಕವಸ್ತುಗಳನ್ನು ಸಂಗ್ರಹಿಸಿದರು ಮತ್ತು ಅದನ್ನು ವೈಯಕ್ತಿಕ ಬಳಕೆಗಾಗಿ ಬಳಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 

SCROLL FOR NEXT