ರಾಜ್ಯ

ಮದುವೆ ಹೆಸರಲ್ಲಿ ಇ-ಮ್ಯಾಟ್ರಿಮೋನಿ ದಂಧೆ: ನೈಜೀರಿಯಾ ಮೂಲದ 6 ಮಂದಿ ಸೆರೆ

Raghavendra Adiga

ಬೆಂಗಳೂರು: ಮದುವೆಯ ಹೆಸರಲ್ಲಿ ಜನರನ್ನು ಆನ್‌ಲೈನ್‌ನಲ್ಲಿ ವಂಚಿಸಿದ ಆರೋಪದ ಮೇಲೆ ಆರು ನೈಜೀರಿಯಾ ಮೂಲದ ಗ್ಯಾಂಗ್ ಅನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಅವರಿಂದ ನಾಲ್ಕು ಲ್ಯಾಪ್‌ಟಾಪ್ ಮತ್ತು 10 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಬ್ರೈಟ್ ಮುದುಕಾಶಿ, ಅವರ ಪತ್ನಿ ದೇವೈನ್ ಮದುಕಾಶಿ, ಅವರ ಸಂಬಂಧಿಕರಾದ ಇಮ್ಯಾನ್ಯುಯೆಲ್ ಒಸಾಮಾ, ಜಾನ್ ಅಲೆಕ್ಸ್, ಎಜಿಜು ಮದುಕಾಶಿ ಮತ್ತು ಮಾರಿಯಾ ಇಮ್ಯಾನ್ಯುಯೆಲ್ ಮದುಕಾಶಿ. ಎಂದು ಗುರುತಿಸಲಾಗಿದೆ.

ವೈಟ್ ಕಾಲರ್ ವೃತ್ತಿಪರರು ಎಂದು ಬಿಂಬಿಸುವ ಬ್ರೈಟ್ ಈ ದಂಧೆಯನ್ನು ನಡೆಸುತ್ತಿದ್ದನು ಮತ್ತು ಜನರನ್ನು ಮ್ಯಾರೇಜ್ ಪೋರ್ಟಲ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ವಂಚಿಸುತ್ತಿದ್ದ,ಹಾಗೊಮ್ಮೆ ಅವನ ಸಂಪರ್ಕಕ್ಕೆ ಬಂದವರನ್ನು ಅಕ್ರಮ ಸಂಬಂಧದ ಆಮಿಷವೊಡ್ಡಿ ಬಳಿಕ ಮೋಸಗೊಳಿಸುತ್ತಿದ್ದ. ಆತ ಇತ್ತೀಚೆಗೆ ಶಾದಿ ಡಾಟ್ ಕಾಂನಲ್ಲಿ ಓರ್ವ ಖಾಸಗಿ ಸಂಸ್ಥೆಯ ಮಹಿಳಾ ಉದ್ಯೋಗಿಯನ್ನು ಸಂಪರ್ಕಿಸಿದ್ದಾನೆ, ಮತ್ತು ಬ್ರೈಟ್ ತಾನು ಸ್ವತಃ ಮಲೇಷ್ಯಾ ಮೂಲದ ಸಿವಿಲ್ ಎಂಜಿನಿಯರ್ ರಾಜ್ ಕಿಶೋರ್ ಎಂದು ಆಕೆಗೆ ಪರಿಚಯಿಸಿಕೊಂಡನಲ್ಲದೆ ಆಕೆಗೆ ಮದುವೆ ಪ್ರಸ್ತಾಪವನ್ನಿಟ್ಟಿದ್ದನು.

ಆತ ಮಲೇಷ್ಯಾದ ನಿವಾಸಿ ಎಂದು ನಂಬುವಂತೆ ಅವಳಿಗೆ ಕರೆ ಮಾಡುವಾಗ ಅವನು ಅಂತರರಾಷ್ಟ್ರೀಯ ಸಿಮ್ ಕಾರ್ಡ್ ಬಳಸಿದ್ದಾನೆ. ಅಲ್ಲದೆ ವಾಟ್ಸ್‌ಆ್ಯಪ್‌ನಲ್ಲಿ ನಿಯಮಿತವಾಗಿ ಅವಳನ್ನು ಸಂಪರ್ಕಿಸಿಚಾಟ್ ಮಾಡುತ್ತಿದ್ದನು ಮತ್ತು ಒಂದು ದಿನ ಅವನು ಅವಳಿಗೆ ತನ್ನ ಮದುವೆಯ ಬಗ್ಗೆ ಪ್ರಸ್ತಾಪಿಸಿದ.  ನವೆಂಬರ್ 2 ರಂದು ಅವನು ವಿದೇಶದಿಂದ ಸರಕನ್ನು ಸ್ವೀಕರಿಸುವುದಕ್ಕಾಗಿ ಆಕೆಯಿಂದ ತುರ್ತು ಆರ್ಥಿಕ ಸಹಾಯವನ್ನು ಕೋರಿದರು. ಆತನನ್ನು ನಂಬಿದ ಮಹಿಳೆ 24.5 ಲಕ್ಷ ರೂ. ನೀಡಿದ್ದಾಳೆ.

ಹಣ ಪಡೆದ ಬ್ರೈಟ್ ಮತ್ತೆ ಆಕೆಯೊಂದಿಗಿನ ಸಂಪರ್ಕ ಕಡಿತ ಮಾಡಿದ್ದಾನೆ. ಅವನ ಫೋನ್ ಸ್ವಿಚ್ ಆಫ್ ಮಾಡಿದ್ದ.  ಆಗ ಆ ಸಂತ್ರಸ್ಥ ಮಹಿಳೆ ಪೋಲೀಸರಿಗೆ ದೂರು ಸಲ್ಲಿಸಿದ್ದಾಳೆ.  ಅದರಂತೆ ವಿಶೇಷ ತಂಡವು ನವದೆಹಲಿಯ ವಿಪಿನ್ ಗಾರ್ಡನ್ ಎಕ್ಸ್ಟೆನ್ಷನ್ ನಲ್ಲಿ ಆರೋಪಿಯನ್ನು ಪತ್ತೆ ಮಾಡಿದೆ.


ವಿಚಾರಣೆಯ ಸಮಯದಲ್ಲಿ, ಬ್ರೈಟ್ 10 ಕ್ಕೂ ಹೆಚ್ಚು ಜನರನ್ನು ಮೋಸಗೊಳಿಸಿದ್ದಾನೆ ಮತ್ತು ಪ್ರತಿ ಬಾರಿಯೂ ವಿಭಿನ್ನ ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದನೆಂದು ತಿಳಿದುಬಂದಿದೆ. ಆತ ಈ ದಂಧೆಯಲ್ಲಿನ ಇತರೆ ಸದಸ್ಯರ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಅವನ ಹೇಳಿಕೆಯ ಆಧಾರದಂತೆ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.

SCROLL FOR NEXT