ರಾಜ್ಯ

ಅಕ್ಟೋಬರ್ 1ರಿಂದ ಕಾಲೇಜು ತರಗತಿ ಆರಂಭವಿಲ್ಲ: ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್

Manjula VN

ಬೆಂಗಳೂರು: ಅಕ್ಟೋಬರ್ 1ರಿಂದ ರಾಜ್ಯದಲ್ಲಿ ಕಾಲೇಜು ತರಗತಿ ಆರಂಭ ಮಾಡುವುದಿಲ್ಲ ಎಂದು ಹೆಚ್ಚುವರಿ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ. 

ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳ ಆನ್'ಲೈನ್ ತರಗತಿಗಳು ನಡೆಯುತ್ತಿದ್ದು, ಇದು ಹೀಗೆಯೇ ಮುಂದುವರೆಯಲಿದೆ. ಯುಜಿಸಿಯ ಮುಂದಿನ ಆದೇಶದವರೆಗೂ ಕಾಲೇಜು ತರಗತಿ ಆರಂಭ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. 

ಕಾಲೇಜು ತರಗತಿ ಆರಂಭದ ಕುರಿತು ಈ ವರೆಗೂ ಯಾವುದೇ ರೀತಿಯ ಅಂತಿಮ ನಿರ್ಧಾರಗಳನ್ನು ಕೈಗೊಂಡಿಲ್ಲ. ನವೆಂಬರ್ 1ರಿಂದ ಪ್ರವೇಶ ಆರಂಭಿಸುವಂತೆ ಯುಜಿಸಿ ತಿಳಿಸಿತ್ತು. ನೂತನ ಮಾರ್ಗಸೂಚಿಗಳಿಗಾಗಿ ನಾವೂ ಕೂಡ ಕಾಯುತ್ತಿದ್ದೇವೆ. ಮಾರ್ಗಸೂಚಿಗಳು ಬರುತ್ತಿದ್ದಂತೆಯೇ ಅದನ್ನು ಆಧರಿಸಿ ಮುಂದಿನ ನಿರ್ಧಾರಘಳನ್ನು ಕೈಗೊಳ್ಳಲಾಗುತ್ತದೆ ಎಂದು ಹೆಚ್ಚುವರಿ ಶಿಕ್ಷಣ ಆಯುಕ್ತ ಪ್ರದೀಪ್ ಪಿ ಅವರು ಹೇಳಿದ್ದಾರೆ. 

ಸೆಮಿಸ್ಟರ್ ಗಳು ನವೆಂಬರ್ 1ರಿಂದ ಆರಂಭವಾಗಲಿದೆ. ಪ್ರವೇಶಾತಿ ನಡೆಯಬೇಕಾಗಿರುವುದರಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ವೇಳಾಪಟ್ಟಿ ನೀಡಲಾಗಿದೆ. ಸಚಿವರು ಎರಡು ದಿನಗಳಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು. ಬಳಿಕ ಕಾಲೇಜು ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳ ದಿನಾಂಕಗಳನ್ನು ಪ್ರಕಟಿಸಲಿದ್ದಾರೆಂದು ಡಾ. ನಾರಾಯಣ್ ಅವರ ಕಚೇರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

SCROLL FOR NEXT