ರಾಜ್ಯ

ವಿಶ್ವ ಅಂಚೆ ಕಾರ್ಡ್ ದಿನಾಚರಣೆ: 'ಸಾಂಪ್ರದಾಯಿಕ ಗೊಂಬೆಗಳ ವಿಶೇಷ ಅಂಚೆ ಲಕೋಟೆ'ಯಲ್ಲಿ ಚನ್ನಪಟ್ಟಣ ಗೊಂಬೆಗೆ ಸ್ಥಾನ!

Manjula VN

ಬೆಂಗಳೂರು: ಭಾರತವನ್ನು ಜಾಗತಿಕ ಆಟಿಕೆ ಕೇಂದ್ರವನ್ನಾಗಿ ಮಾಡುವಂತೆ ಉದ್ಯಮಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದಂತೆಯೇ ಇದಕ್ಕೆ ಅನುಗುಣವಾಗಿ ಪೋಸ್ಟ್ ಕ್ರಾಸಿಂಗ್ ಸೊಸೈಟಿ ಆಫ್ ಇಂಡಿಯಾ ಚನ್ನಪಟ್ಟಣ ಸೇರಿದಂತೆ 12 ರಾಜ್ಯಗಳ ಟ್ರೇಡ್‌ಮಾರ್ಕ್ ಆಟಿಕೆಗಳನ್ನು ಒಳಗೊಂಡ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲು ಸಿದ್ಧತೆಗಳನ್ನು ನಡೆಸಿದೆ. 

 ಅಕ್ಟೋಬರ್ 1 ರಂದು ನಡೆಯಲಿರುವ 151 ನೇ ವಿಶ್ವ ಅಂಚೆಕಾರ್ಡ್ ದಿನಾಚರಣೆ ಅಂಗವಾಗಿ ಪೋಸ್ಟ್ ಕ್ರಾಸಿಂಗ್ ಸೊಸೈಟಿ ಆಫ್ ಇಂಡಿಯಾದ ಕೋರಿಕೆಯ ಮೇರೆಗೆ ಟಾಯ್ಸ್ ಆಫ್ ಇಂಡಿಯಾ ವಿಷಯದ ಮೇಲೆ 11 ರಾಜ್ಯಗಳ ಬಾರತೀಯ ಸಂಪ್ರಾದಾಯಿಕ ಗೊಂಬೆಗಳ ವಿಶೇಷ ಅಂಚೆ ಲಕೋಟೆ ಬೆಂಗಳೂರಿನ ಜನರಲ್ ಅಂಚೆ ಕಚೇರಿ (ಜಿಪಿಒ)ಯ ಮೇಘದೂತ  ಸಭಾಂಗಣ ಹಾಗೂ ವಿವಿಧ ಅಂಚೆ ವಲಯಗಳಲ್ಲಿ ಬಿಡುಗಡೊಗೊಳ್ಳಲಿದೆ. 

ಕರ್ನಾಟಕದ ಚನ್ನಪಟ್ಟಣ ಗೊಂಬೆಯ ವಿಶೇಷ ಅಂಚೆ ಲಕೋಟೆಯನ್ನು ಕರ್ನಾಟಕ ವಲಯದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಅ.1ರಂದು ಬಿಡುಗಡೆಗೊಳಿಸಲಿದ್ದಾರೆ. ಹಿರಿಯ ಫಿಳಾಟೆಲಿಸ್ಟ್ ಜಗನ್ನಾಮಣಿ, ಎಆರ್'ಪಿಎಸ್ಎಲ್'ನ ರಾಮು ಶ್ರೀನಿವಾಸನ್, ಪೋಸ್ಟ್ ಕ್ರಾಸಿಂಗ್ ಸೊಸೈಟಿ ಆಫ್ ಇಂಡಿಯಾದ ಸದಸ್ಯ ಅಖಿಲೇಶ್ ಕುಮಾರ್ ಮತ್ತಿರರರು ಪಾಲ್ಗೊಳ್ಳಲಿದ್ದಾರೆ. ಅಂತೆಯೇ ಆಯಾ ರಾಜ್ಯಗಳಲ್ಲಿ ಅಲ್ಲಿನ ಮುಖ್ಯ ಪೋಸ್ಟ್ ಮಾಸ್ಟರ್ ಜನರ್'ಗಳು ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಲಿದ್ದಾರೆ. 

"ನಾವು ಎಂದಿನಂತೆ ಪೋಸ್ಟ್‌ಕಾರ್ಡ್‌ಗಳೊಂದಿಗೆ ದೇಶದ ಪ್ರಸಿದ್ಧ ತಾಣಗಳು ಸೇರಿದಂತೆ ವಿವಿಧ ವಲಯಗಳನ್ನು ಉತ್ತೇಜಿಸುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇವೆ. ಅದರಂತೆ ಪಕ್ಷಿಗಳು, ನೃತ್ಯಗಳು, ಪ್ರವಾಸಿ ತಾಣಗಳು ಮತ್ತು ಮುಂತಾದವುಗಳನ್ನು ಪ್ರದರ್ಶಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಉತ್ತೇಜನ ನೀಡಿರುತ್ತಿದ್ದೇವೆ. ಈ ಬಾರಿ ಪ್ರಧಾನಮಂತ್ರಿಯವರ ಮಾತುಗಳ ಬಳಿಕ ದೇಶದಲ್ಲಿ ತಯಾರಿಸಿದ ಆಟಿಕೆಗಳನ್ನು ಉತ್ತೇಜಿಸುವ ಅಗತ್ಯವಿರುವ ಹಿನ್ನೆಲೆಯಲ್ಲಿ ಆಟಿಕೆಗಳನ್ನು ಅಂಚೆ ಲಕೋಟೆಗೆ ಸೇರ್ಪಡೆಗೊಳಿಸಲಾಗಿದೆ ಎಂದು ಪೋಸ್ಟ್ ಕ್ರಾಸಿಂಗ್ ಸೊಸೈಟಿ ಆಫ್ ಇಂಡಿಯಾದ ಸದಸ್ಯ ಅಖಿಲೇಶ್ ಕುಮಾರ್ ಅವರು ಹೇಳಿದ್ದಾರೆ. 

SCROLL FOR NEXT