ಸಂಗ್ರಹ ಚಿತ್ರ 
ರಾಜ್ಯ

ಕೋವಿಡ್ ಎಫೆಕ್ಟ್: ರಾಜ್ಯ ಸಾರಿಗೆ ಇಲಾಖೆಯ ಈ ಮೂರು ಸೇವೆಗಳು ಆನ್ಲೈನ್ ನಲ್ಲಿ ಲಭ್ಯ

ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿರುವಂತೆಯೇ ರಾಜ್ಯ ಸಾರಿಗೆ ಇಲಾಖೆ ತನ್ನ ಸಿಬ್ಬಂದಿಗಳ ರಕ್ಷಣಾರ್ತವಾಗಿ ತನ್ನ ಸೇವೆಗಳಲ್ಲಿ ಕೆಲ ಮಹತ್ತರ ಬದಲಾವಣೆಗೆ ಮುಂದಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿರುವಂತೆಯೇ ರಾಜ್ಯ ಸಾರಿಗೆ ಇಲಾಖೆ ತನ್ನ ಸಿಬ್ಬಂದಿಗಳ ರಕ್ಷಣಾರ್ತವಾಗಿ ತನ್ನ ಸೇವೆಗಳಲ್ಲಿ ಕೆಲ ಮಹತ್ತರ ಬದಲಾವಣೆಗೆ ಮುಂದಾಗಿದೆ.

ಅದರಂತೆ ಸಾರಿಗೆ ಇಲಾಖೆ ತನ್ನ ಸೇವೆಗಳ ಕಾರ್ಯ ಪ್ರಕ್ರಿಯೆಗಳನ್ನು ಬದಲಿಸಿಕೊಳ್ಳಲಿದ್ದು, ಶೀಘ್ರದಲ್ಲೇ ಸಾರಿಗೆ ಇಲಾಖೆಯ ಸೇವೆಗಳ ಪೈಕಿ ವಾಹನದ ಮಾಲೀಕತ್ವದ ವರ್ಗಾವಣೆ, ಸರಕು ಸಾಗಣೆ ಪರವಾನಗಿ ಮತ್ತು ಫಿಟ್‌ನೆಸ್ ಪ್ರಮಾಣಪತ್ರ ನೀಡುವಿಕೆ ಸಂಪೂರ್ಣ ಆನ್ಲೈನ್ ಆಗಲಿದೆ. ಆ ಮೂಲಕ ಈ ಮೂರು  ಸೇವೆಗಳಿಗಾಗಿ ಬರುವ ಮಂದಿ ಸಂಪರ್ಕವಿಲ್ಲದೆ ತಮ್ಮ ಕೆಲಸವನ್ನು ಆನ್ ಲೈನ್ ಮೂಲಕವಾಗಿಯೇ ಪಡೆಯಬಹುದು. ಇದಕ್ಕಾಗಿ ಇಲಾಖೆ ವಾಹನ್ 4.0 ಮತ್ತು ಸಾರತಿ ಪೋರ್ಟಲ್ ಆರಂಭಿಸಿದ್ದು, ಈ ಪೋರ್ಟಲ್ ಮೂಲಕ ಪರವಾನಗಿಗಳನ್ನು ಪಡೆಯಬಹುದು. ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಇದೇ  ವಾರ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆ ಇದೆ. 

ಇದಕ್ಕೂ ಮೊದಲು, ಮೇಲೆ ತಿಳಿಸಿದ ಸೇವೆಗಳನ್ನು ಪಡೆಯಲು ನಾಗರಿಕರು ಆರ್‌ಟಿಒಗಳಿಗೆ ಭೇಟಿ ನೀಡಬೇಕಾಗಿತ್ತು. ಆದರೆ, ಈಗ ನಾಗರಿಕರು ಅಗತ್ಯ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಇತ್ಯಾದಿಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಪರವಾನಗಿ ಪಡೆಯಬಹುದು. ಆರ್‌ಟಿಒ  ದಾಖಲೆಗಳನ್ನು ಪರಿಶೀಲಿಸಿದ ನಂತರ, ನಾಗರಿಕರು ಪರವಾನಗಿಯ ಮುದ್ರಣ ಪ್ರತಿಯನ್ನು ಪಡೆದುಕೊಳ್ಳಬಹುದು, ಅದನ್ನು ಮೂಲ ದಾಖಲೆಯಾಗಿ ಪರಿಗಣಿಸಲಾಗುತ್ತದೆ.

ಸಾರಿಗೆ ಇಲಾಖೆಯ ಈ ಕ್ರಮದಿಂದಾಗಿ ಮಧ್ಯವರ್ತಿಗಳ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ. ಮತ್ತು ಈ ಪ್ರಕ್ರಿಯೆಯನ್ನು ಯಾವುದೇ ರೀತಿಯ ದೈಹಿಕ ಹಾಜರಾತಿ ಇಲ್ಲದೆ ಆನ್‌ಲೈನ್‌ನಲ್ಲಿಯೇ ಶುಲ್ಕವನ್ನು ಪಾವತಿಸಿ ಪಡೆಯಬಹುದು. ಆ ಮೂಲಕ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಅಪಾಯವಿಲ್ಲದೇ  ಸೇವೆ ಒದಗಿಸುವುದು ಇಲಾಖೆಯ ಉದ್ದೇಶವಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎನ್.ಶಿವಕುಮಾರ್ ಹೇಳಿದರು. 

ಆದಾಗ್ಯೂ, ಫಿಟ್‌ನೆಸ್ ಪ್ರಮಾಣಪತ್ರಕ್ಕಾಗಿ, ವಾಹನವನ್ನು ಆರ್‌ಟಿಒಗೆ ತಪಾಸಣೆಗಾಗಿ ತರಬೇಕಾಗುತ್ತದೆ. ಪರಿಶೀಲನೆಯ ಸಮಯದಲ್ಲಿ, ಡಾಕ್ಯುಮೆಂಟ್ ಅಗತ್ಯವಿದೆಯೇ ಅಥವಾ ಇಲ್ಲವೇ ಎಂದು ಆರ್‌ಟಿಒ ಅಧಿಕಾರಿ ಅರ್ಜಿದಾರರೊಂದಿಗೆ ಪರಿಶೀಲಿಸಬಹುದು ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಶಿವರಾಜ್ ಪಾಟೀಲ್  (ಇ-ಆಡಳಿತ ಮತ್ತು ಪರಿಸರ) ಹೇಳಿದರು. ಅಂತೆಯೇ ಯಾವುದೇ ವಾಹನ ಮಾಲೀಕ ವಾಹನವನ್ನು ಮಾರಾಟ ಮಾಡಲು ಬಯಸಿದರೆ, ಅಗತ್ಯವಿರುವ ದಾಖಲೆ ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿರುವ ಬಿ-ಎಕ್ಸ್‌ಟ್ರಾಕ್ಟ್ ಫಾರ್ಮ್ ನಲ್ಲಿ ಲಭ್ಯವಿರುತ್ತದೆ. ಯಾವುದೇ ನಾಗರಿಕ ಸೇವಾ ಕೇಂದ್ರಗಳಿಂದ ನೋಂದಾಯಿತ ಸಾರಿಗೆ  ವಾಹನಗಳ ಬಗ್ಗೆ ವಾಹನ ಮಾಲೀಕರ ಮಾಹಿತಿಯನ್ನು ಪಡೆಯಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT