ರಾಜ್ಯ

ಮೊದಲು ಕಾಲೇಜು ಪುನಾರಂಭಿಸಿ, ನಂತರ ಶಾಲೆ ತೆರೆಯಿರಿ: ಶಿಕ್ಷಣ ತಜ್ಞರು

Shilpa D

ಬೆಂಗಳೂರು: ರಾಜ್ಯದಲ್ಲಿ ಹಂತ ಹಂತವಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ. ಆದರೆ ಶಾಲೆಗಳನ್ನು ಯಾವಾಗ ತೆರೆಯಬೇಕು ಎಂಬ ದಿನಾಂಕವನ್ನು ತಿಳಿಸಿಲ್ಲ.

ಶಿಕ್ಷಣ ತಜ್ಞ ಪ್ರೊ. ಎಂಆರ್ ದೊರೆಸ್ವಾಮಿ ಮಕ್ಕಳಿಗಿಂತ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಇರುತ್ತದೆ. ಜೊತೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಮತ್ತು ನಿಯಮಗಗಳ ಬಗ್ಗೆ ಅರಿವಿರುತ್ತದೆ ಎಂದು ಹೇಳಿದ್ದಾರೆ.

ಈ ಸಂಬಂಧ ಡಿಸಿಎಂ ಅಶ್ವತ್ಥ ನಾರಾಯಣ ಮತ್ತು ಸುರೇಶ್ ಕುಮಾರ್  ಅವರಿಗೆ ಪತ್ರ ಬರೆದಿರುವ ದೊರೆಸ್ವಾಮಿ, ಹಂತಹಂತವಾಗಿ ಪಿಯುಸಿ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭಿಸಲು ಸಲಹೆ ನೀಡಿದ್ದಾರೆ. ಅದಾದ ನಂತರ  ಶಾಲಾ ಮಕ್ಕಳಿಗೆ ತರಗತಿ ಆರಂಭಿಸುವಂತೆ ತಿಳಿಸಿದ್ದಾರೆ. ಆದರೆ ಅದು ಕೂಡ ಆರನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ.ಹಾಸ್ಟೆಲ್ ಸೌಲಭ್ಯಗಳು ಮತ್ತು ಅಂತರರಾಜ್ಯ ಸಾರಿಗೆಯಂತಹ ತೊಂದರೆಗಳನ್ನು ತಪ್ಪಿಸಲು, ಕೇವಸ ಸ್ಥಳೀಯ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆ ತೆರೆಯಲು ಸಲಹೆ ನೀಡಲಾಗಿದೆ.

ಶಾಲಾ ಸಂಸ್ಥೆಗಳು ಪ್ರತ್ಯೇಕ ಬ್ಯಾಚ್ ಗಳನ್ನು ಮಾಡಿ ತರಗತಿ ನಡೆಸುವಂತೆ ತಿಳಿಸಲಾಗಿದೆ. ಜೊತೆಗೆ ದಿನ ಬಿಟ್ಟು ದಿನ ತರಗತಿ ನಡೆಸುವಂತೆ ಸೂಚಿಸಲಾಗಿದೆ.

ಅಕ್ಟೋಬರ್ 15ರ ನಂತರ ಶಾಲೆಗಳ ಪುನಾರಂಭಕ್ಕೆ ಸಂಭಂಧಿಸಿದಂತೆ ಮಾರ್ಗಸೂಚಿ ಹೊರಡಿಸಲಿದೆ. ಜೊತೆಗೆ ಸಾಮಾಜಿಕ ಅಂತರ, ದೈಹಿಕ ಅಂತರ ನಿರ್ವಹಣೆ ಕಡ್ಡಾಯವಾಗಿರುತ್ತದೆ, ತರಗತಿಗಳ ಸಮಯದ ಅವಧಿಯೂ ಕಡಿಮೆ ಮಾಡಬೇಕೆಂದು ತಿಳಿಸಿದೆ.

ದಿನಬಿಟ್ಟು ದಿನ ಶಾಲೆಗೆ ಹಾಜರಾಗುವಂತೆ ಅಥವಾ ವಾರದಲ್ಲಿ ಎರಡು ದಿನ ತರಗತಿ ನಡೆಸಲು ಯೋಜಿಸಬೇಕೆಂದು ಸೂಚಿಸಿದೆ. ದೊಡ್ಡ ದೊಡ್ಡ ಕೊಠಡಿಗಳಲ್ಲಿ ಎರಡು ಬ್ಯಾಚ್ ಮಾಡಿ ಸಮ-ಬೆಸ್ಟ್ ಫಾರ್ಮುಲಾ ಬಳಸಬೇಕೆಂದು ತಿಳಿಸಿದೆ.

SCROLL FOR NEXT