ರಾಜ್ಯ

ನಕಲಿ ಛಾಪಾ ಕಾಗದ ಮಾರಾಟ: ನಾಲ್ವರ ಬಂಧನ

Nagaraja AB

ಬೆಂಗಳೂರು: 2002ನೇ ಸಾಲಿನಲ್ಲಿ ನಿಷೇಧಿಸಿದ್ದ ಛಾಪಾ ಕಾಗದವನ್ನು ನಕಲಿಯಾಗಿ ಮುದ್ರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಿ, ಸರ್ಕಾರಕ್ಕೆ ವಂಚಿಸುತ್ತಿದ್ದ ಕುಖ್ಯಾತ ಆರೋಪಿಗಳನ್ನು ಎಸ್.ಜೆ. ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಹಸೈನ್ ಮೋದಿ, ಹರೀಶ್, ಶವರ್ ಆಲಿಯಾಸ್ ಸೀಮಾ ಹಾಗೂ ನಜ್ಮಾ ಫಾತಿಮಾ ಬಂಧಿತ ಆರೋಪಿಗಳು.ಪ್ರಕರಣದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.ಬಂಧಿತರಿಂದ 2.72 ಕೋಟಿ ರೂ. ಮೌಲ್ಯದ ಛಾಪಾ ಕಾಗದಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆಯಲ್ಲಿ ನಕಲಿ   ಛಾಪಾ ಕಾಗದ ಖರೀದಿಸಿದ ಇಬ್ಬರು ಮಾರಾಟಗಳ ಹೆಸರನ್ನು ಕಿಂಗ್ ಪಿನ್ ಬಾಯ್ಬಿಟ್ಟಿದ್ದಾನೆ. ನಂತರ ಅವರನ್ನು ಕೂಡಾ ಬಂಧಿಸಲಾಗಿದೆ.

ಕಿಂಗ್ ಪಿನ್ ಮನೆ ಮೇಲೆ ದಾಳಿ ನಡೆಸಲಾಗಿದ್ದು, 2. 72 ಕೋಟಿ ರೂ. ಮೊತ್ತದ 443 ನಕಲಿ ಛಾಪಾ ಕಾಗದಗಳನ್ನು ಜಪ್ತಿ ಮಾಡಲಾಗಿದೆ. ಕೇವಲ ಏಳನೇ ತರಗತಿಯವರೆಗೂ ವ್ಯಾಸಂಗ ಮಾಡಿದ್ದ ಕಿಂಗ್ ಪಿನ್ ಚೋಟಾ ತೆಲಗಿ ಎಂದು ಹೆಸರಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

2002ರಲ್ಲಿ  ಬಹು ಕೋಟಿ ನಕಲಿ ಛಾಪಾ ಕಾಗದ ಹಗರಣದ ಕುಖ್ಯಾತಿಯಾಗಿದ್ದ ಅಬ್ದುಲ್ ಕರೀಮ್ ಲಾಲಾ ತೆಲಗಿ ಬಂಧಿತನಾದ ಬಳಿಕ ಈತ ಚೋಟಾ ತೆಲಗಿ ಎಂದು ಹೆಸರಾಗಿದ್ದ.ನಕಲಿ ಛಾಪಾ ಕಾಗದಗಳು ಮತ್ತು ಮುದ್ರೆ ತಯಾರಿಕೆ ಮತ್ತು ಮಾರಾಟ ಹಿನ್ನೆಲೆಯಲ್ಲಿ 2013ರಲ್ಲಿ ಚೋಟಾ ತೆಲಗಿ ಹಾಗೂ ಆತನ ಸಹಚರರನ್ನು ಬಂಧಿಸಲಾಗಿತ್ತು.ಆತನ ವಿರುದ್ಧದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಇನ್ನೂ ಬಾಕಿಯಿದೆ. ಆದರೆ, ಜಾಮೀನಿನ ಮೇರೆಗೆ ಅವರು ಹೊರಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಆರೋಪಿಗಳ ವಿರುದ್ಧ ವಂಚನೆ, ನಕಲಿ ಮತ್ತು ಪಿತ್ತೂರಿ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್  ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ .

SCROLL FOR NEXT