ರಾಜ್ಯ

ಗ್ರಾಮೀಣ ಭಾಗದಲ್ಲಿರುವ ಖಾಸಗಿ ಶಾಲೆಗಳ ನಿರ್ಲಕ್ಷ್ಯ: ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಆರೋಪ

Shilpa D

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ವಿಶೇಷವಾಗಿ  ಗ್ರಾಮೀಣ ಪ್ರದೇಶಗಳಲ್ಲಿರುವ ಖಾಸಗಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಅನುದಾನ ರಹಿಸ ಖಾಸಗಿ ಶಾಲೆಗಳ ಸಂಘ ಆರೋಪಿಸಿದೆ.

ಪೋಷಕರು ಪಾವತಿಸಬೇಕಾದ ಅವಧಿಯ ಶುಲ್ಕದ ಆದೇಶವು ಇತ್ತೀಚೆಗೆ ಬಂದಿದೆ, ಆದರೆ ಬೆಂಗಳೂರಿನಲ್ಲಿ ಬಹುತೇಕ ಶಾಲೆಗಳು ಈಗಾಗಲೇ ಮೊದಲ ಹಂತದ ಶುಲ್ಕವನ್ನು ಕಟ್ಟಿಸಿಕೊಂಡಿವೆ, ಗ್ರಾಮೀಣ ಭಾಗದಲ್ಲಿ ನಾವು ಶಿಕ್ಷಕರ ವೇತನ ಪಾವತಿಸಬೇಕಾಗಿದೆ, ತರಗತಿಗಳನ್ನು ಆರಂಭಿಸಲು ಸಿಲ್ಲಬಸ್ ಮತ್ತು ವೇಳಾ ಪಟ್ಟಿಯನ್ನು ಇನ್ನೂ ನೀಡಿಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಬೈಂದೂರು ಆರೋಪಿಸಿದ್ದಾರೆ.

ಅನುದಾನ ರಹಿತ ಶಾಲೆಗಳಲ್ಲಿ ಐದು ಲಕ್ಷಕ್ಕಿಂತ ಅಧಿಕ ಶಿಕ್ಷಕರು ಕೆಲಸ ಮಾಡುತ್ತಿದ್ದು, ಕೊರೋನಾ ಕಾರಣದಿಂದಾಗಿ ಸುಮಾರು 600 ಶಾಲೆಗಳು ಈಗಾಗಲೇ ಮುಚ್ಚಿವೆ ಎಂದು ಸಂಘದ ಅಧ್ಯಕ್ಷ ಲೋಕೇಶ್ ತಿಳಿಸಿದ್ದಾರೆ.

SCROLL FOR NEXT