ವಿಕ್ಟೋರಿಯಾ ಆಸ್ಪತ್ರೆ ಹೊರಗೆ ಪಿಪಿಇ ಕಿಟ್ ಧರಿಸಿ ನಿಂತಿರುವ ಆರೋಗ್ಯ ಸೇವೆ ಕಾರ್ಯಕರ್ತರು 
ರಾಜ್ಯ

ಕೋವಿಡ್ ಹೆಸರಿನಲ್ಲಿ ಆಸ್ಪತ್ರೆಗಳ ಕರ್ಮಕಾಂಡ: ಸರ್ಕಾರ ನಿಗದಿಪಡಿಸಿದ ಆಸ್ಪತ್ರೆಗಳ ಬೆಡ್ ಶುಲ್ಕ 25 ಸಾವಿರಕ್ಕೆ ಏರಿಕೆ!

ಸರ್ಕಾರದ ನಿಯಮ ಪ್ರಕಾರ ಸರ್ಕಾರಿ ಖೋಟಾದಲ್ಲಿ ಬರುವ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ಕೋವಿಡ್ ರೋಗಿಗಳಿಂದ ಶುಲ್ಕ ತೆಗೆದುಕೊಳ್ಳುವ ಹಾಗಿಲ್ಲ. ಉಚಿತವಾಗಿ ಚಿಕಿತ್ಸೆ ನೀಡಬೇಕು.

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ಅಕ್ಷಯ ಸೋಮಪ್ಪ(ಹೆಸರು ಬದಲಿಸಲಾಗಿದೆ) ಅವರಿಗೆ ಸಂದೇಶವೊಂದು ಬಂದಿತ್ತು, ನೀವು ಇತ್ತೀಚೆಗೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು ನಮ್ಮ ಸಹಾಯಕ ತಂಡದಿಂದ ನಿಮಗೆ ಕರೆ ಬಂದಿರಬೇಕು. ನಿಮ್ಮ ರೋಗಲಕ್ಷಣವನ್ನು ಮೌಲ್ಯಮಾಪನ ಮಾಡಲು ನಮ್ಮ ವೈದ್ಯಕೀಯ ತಂಡದಿಂದ ನಿಮಗೆ ಕರೆ ಬರುತ್ತದೆ. ಮುಂದೆ ಏನು ಮಾಡಬೇಕು ಎಂದು ಅವರು ಸರಿಯಾಗಿ ಸಲಹೆ ನೀಡುತ್ತಾರೆ, ನಿಮ್ಮ ಫೋನ್ ನ್ನು ಚಾರ್ಚ್ ಮಾಡಿಕೊಂಡು ಕಾಯುತ್ತಿರಿ, ನಿಮಗೆ ಆಲ್ ದ ಬೆಸ್ಟ್ ಎಂದು ಅದರಲ್ಲಿ ಬರೆಯಲಾಗಿತ್ತು.

ಧನ್ಯವಾದಗಳು, ಕರ್ನಾಟಕ ರಾಜ್ಯ ಕೋವಿಡ್ ಸಹಾಯವಾಣಿ, ನಿಮ್ಮ ಐಡಿ ಸಂಖ್ಯೆ--- ನಿಮ್ಮ ಐಸಿಎಂಆರ್ ಸಂಖ್ಯೆ ಬಿಯು----- ದಯವಿಟ್ಟು 7406884445ಕ್ಕೆ ಕರೆಮಾಡಿ ವೈದ್ಯರಲ್ಲಿ ಮಾತನಾಡಿ.. ಎಂದು ಸಂದೇಶ ಬಂದು ನಂತರ ಆಪ್ತಮಿತ್ರದಿಂದ ಕರೆ ಬಂತು. ಸರ್ಕಾರಿ ಆಸ್ಪತ್ರೆಗಾದರೆ ಹಣ ಪಾವತಿಸುವುದು ಬೇಡ, ಖಾಸಗಿ ಆಸ್ಪತ್ರೆಗೆ ಬಿಲ್ ಪಾವತಿಸಬೇಕು ಎಂದು ಹೇಳಿ ಫೋನ್ ಇಟ್ಟರು.
ಸರ್ಕಾರದ ನಿಯಮ ಪ್ರಕಾರ ಸರ್ಕಾರಿ ಖೋಟಾದಲ್ಲಿ ಬರುವ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ಕೋವಿಡ್ ರೋಗಿಗಳಿಂದ ಶುಲ್ಕ ತೆಗೆದುಕೊಳ್ಳುವ ಹಾಗಿಲ್ಲ. ಉಚಿತವಾಗಿ ಚಿಕಿತ್ಸೆ ನೀಡಬೇಕು. ಈ ವಿಚಾರವನ್ನು ಆರೋಗ್ಯ ಸಚಿವ ಶ್ರೀರಾಮುಲು ಅವರ ಗಮನಕ್ಕೆ ತಂದಾಗ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಾರೆ ಎಂದರು.

ಇನ್ನೊಬ್ಬ ರೋಗಿ ಕೋಲಾರದವರು. ಬೆಂಗಳೂರಿನಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಬೆಂಗಳೂರಿಗೆ ಶಿಫ್ಟ್ ಆಗಲು ನೋಡಿದರು. ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಚಾರ್ಜ್ 25 ಸಾವಿರ ರೂಪಾಯಿ ಕೇಳಿದರು. ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ರೋಗಿಯ ಕುಟುಂಬಸ್ಥರು ಹೇಳಿದರು. ನಂತರ 10 ಸಾವಿರ ರೂಪಾಯಿಗೆ ಇಳಿಕೆ ಮಾಡಲಾಯಿತು. ಹಣ ಪಾವತಿಸಿದ ಬಳಿಕವಷ್ಟೇ ಬೆಡ್ ನೀಡಲಾಯಿತು.

ಮತ್ತೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ಕೋವಿಡ್ ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ, ಸಾಕಷ್ಟು ಇಂಜೆಕ್ಷನ್ ನೀಡಲಿಲ್ಲವಂತೆ. ಕೇವಲ ಎರಡು ಕೊಟ್ಟಿದ್ದರು. ಉಳಿದವನ್ನು ಹೊರಗಿನಿಂದ 4 ಸಾವಿರಕ್ಕೂ ಹೆಚ್ಚು ರೂಪಾಯಿ ಕೊಟ್ಟು ಖರೀದಿಸಬೇಕಾಗಿ ಬಂತು ಎನ್ನುತ್ತಾರೆ. ಈ ಇಂಜೆಕ್ಷನ್ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಸಿಗುತ್ತದೆ ಎಂದು ಆಸ್ಪತ್ರೆಯಲ್ಲಿ ಹೇಳಿದರಂತೆ.
ರೋಗಿಗಳ ಇಂತಹ ದೂರುಗಳ ಬಗ್ಗೆ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಅವರನ್ನು ಕೇಳಿದಾಗ, ಇಂತಹ ಕ್ರಮಗಳನ್ನು ಸಹಿಸಲು ಸಾಧ್ಯವೇ ಇಲ್ಲ, ನಮ್ಮಲ್ಲಿ ಬಂದು ದೂರು ನೀಡಲಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ, ಆಯುಕ್ತರು ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸಿದ್ದಾರೆ. ಖಾಸಗಿ ಆಸ್ಪತ್ರೆಗಳ ಬಿಲ್ ಮತ್ತು ಬೆಡ್ ಹಂಚಿಕೆ ಬಗ್ಗೆ ದೂರು ನೀಡಲು ಕಾಲ್ ಸೆಂಟರ್ ಇದೆ. ವಲಯ ಮಟ್ಟದಲ್ಲಿ ಕೂಡ ಹಿರಿಯ ಅಧಿಕಾರಿಗಳಿದ್ದಾರೆ ಎಂದರು.

ಈ ಮೂರು ಪ್ರಕರಣಗಳ ಬಗ್ಗೆ ಕೇಳಿದಾಗ ಆರೋಗ್ಯ ಸಚಿವ ಶ್ರೀರಾಮುಲು, ತನಿಖೆ ನಡೆಸಿ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇವೆ. ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಸಮಿತಿ ರಚಿಸಿ ಈ ದೂರುಗಳ ಬಗ್ಗೆ ವಿಸ್ತೃತ ವರದಿ ಕೇಳುತ್ತೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್