ರೈಲು 
ರಾಜ್ಯ

ನಾಳೆಯಿಂದ ಯಶವಂತಪುರ- ಅಸ್ಸಾಂ ನಡುವೆ ವಿಶೇಷ ರೈಲು ಸಂಚಾರ

ಯಶವಂತಪುರ ಮತ್ತು ಅಸ್ಸಾಂನ ಕಾಮಾಕ್ಯ ನಡುವಣ ನಾಳೆಯಿಂದ ಸಾಪ್ತಾಹಿಕ ವಿಶೇಷ ರೈಲು ಸಂಚರಿಸಲಿದೆ

ಬೆಂಗಳೂರು: ಯಶವಂತಪುರ ಮತ್ತು ಅಸ್ಸಾಂನ ಕಾಮಾಕ್ಯ ನಡುವಣ ನಾಳೆಯಿಂದ ಸಾಪ್ತಾಹಿಕ ವಿಶೇಷ ರೈಲು ಸಂಚರಿಸಲಿದೆ.ಪ್ರತಿ ಬುಧವಾರ ಮಧ್ಯಾಹ್ನ 2 ಗಂಟೆಗೆ ಕಾಮಾಕ್ಯದಿಂದ ಹೊರಡಲಿರುವ ಕಾಮಾಕ್ಯ -ಯಶವಂತಪುರ ಹವಾನಿಯಂತ್ರಿತ ಸೂಪರ್ ಪಾಸ್ಟ್ ವಿಕ್ಲಿ ಎಕ್ಸ್ ಪ್ರೆಸ್ ( ರೈಲು ನಂಬರ್ 02552) ಶುಕ್ರವಾರ ಸಂಜೆ 6.25ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ. 

ಶನಿವಾರ ಬೆಳಗ್ಗೆ 8-30ಕ್ಕೆ ಯಶವಂತಪುರದಿಂದ ನಿರ್ಗಮಿಸಲಿರುವ ರೈಲು, ಸೋಮವಾರ ಮಧ್ಯಾಹ್ನ 2 ಗಂಟೆಗೆ ಕಾಮಾಕ್ಯಕ್ಕೆ ಆಗಮಿಸಲಿದೆ.

ಅಕ್ಟೋಬರ್ 17ರಿಂದ ಯಶವಂತಪುರದಿಂದ ಮೊದಲ ರೈಲು ಸಂಚಾರ ಆರಂಭವಾಗಲಿದೆ. ಜೋಲರ್ ಪೇಟೆ, ಕಟ್ಪಾಡಿ, ಚೆನ್ನೈ ಸೆಂಟ್ರಲ್, ಗುದುರ್, ವಿಜಯವಾಡ, ಸಮಲ್ ಕೊಟ್, ವಿಜಯನಗರಂ, ಕುದ್ರಾ ರಸ್ತೆ, ಭುವನೇಶ್ವರ್, ಕಟಕ್, ಬಾಲಸೋರ್, ನ್ಯೂ ಜಲ್ ಪೈಗುರಿ, ನ್ಯೂ ಕೊಚ್ ಬೆಹಾರ್, ನ್ಯೂ ಅಲಿಪುರ್ ದೌರ್, ನ್ಯೂ ಬೊಂಗಾಯ್ ಗೌನ್ ಮತ್ತು ರಾಂಗಿಯಾದಲ್ಲಿ ಈ ರೈಲು ನಿಲುಗಡೆ ಮಾಡಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನಿವಾರ್ಯ ಪರಿಸ್ಥಿತಿ, ವಾಣಿಜ್ಯ ಸಿಲಿಂಡರ್ ಸ್ಟಾಕ್ ಇಲ್ಲ, ಹೋಟೆಲ್‌ನವರು 1 ವಾರ ಸಹಿಸಿಕೊಳ್ಳಬೇಕು: ಸಚಿವ ಕೆಎಚ್ ಮುನಿಯಪ್ಪ!

IPLಗೂ ತಟ್ಟಲಿದೆ ಯುದ್ಧದ ಬಿಸಿ: ಐಪಿಎಲ್ ಪಂದ್ಯ ಒಂದಕ್ಕೆ ಬೇಕು 3 ಸಾವಿರ ಲೀಟರ್ ಡೀಸೆಲ್, ಪಂದ್ಯಾವಳಿಗೆ ಬ್ರೇಕ್?

ಮಗಳನ್ನು ವಾಪಸ್ ಮನೆಗೆ ಕರೆತರಲು ಸಹಾಯ ಮಾಡಿ: ಮಧ್ಯ ಪ್ರದೇಶ CMಗೆ ಮೊನಾಲಿಸಾ ತಂದೆ ಮನವಿ

West Asia conflict: ಇರಾಕ್‌ನಲ್ಲಿ ಅಮೆರಿಕಾದ KC-135 ಸೇನಾ ವಿಮಾನ ಪತನ; ನಾಲ್ವರು ಸಿಬ್ಬಂದಿ ಸಾವು

Abrar Ahmed ಮಾತ್ರವಲ್ಲ.. ಭಾರತ ಮೂಲದ ಟಿ20 ಫ್ರಾಂಚೈಸಿಗಳಲ್ಲಿ ಹಲವು ಪಾಕಿಸ್ತಾನಿ ಕ್ರಿಕೆಟಿಗರು.. ಪಟ್ಟಿ ಇಲ್ಲಿದೆ..!

SCROLL FOR NEXT