ರಾಜ್ಯ

ಮುಂದಿನ ತಿಂಗಳು ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ಹೊಸ ಎಡಿಜಿಪಿ ನೇಮಕ

Shilpa D

ಬೆಂಗಳೂರು: ಮುಂದಿನ ಕೆಲ ದಿನಗಳಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆಯಿದೆ. ಪೊಲೀಸ್ ಮಹಾನಿರ್ದೇಶಕರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮುಖ್ಯಸ್ಥರು, ಎಎಂ ಪ್ರಸಾದ್  ಅವರನ್ನು ಎಡಿಜಿಪಿಯಾಗಿ ನೇಮಿಸಲಾಗುವುದು.  

ಗೃಹರಕ್ಷಕರ, ನಾಗರಿಕ ರಕ್ಷಣಾ ಮತ್ತು ರಾಜ್ಯ ವಿಪತ್ತು ಪಡೆ (ಎಸ್‌ಡಿಆರ್‌ಎಫ್) ಮತ್ತು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಟಿ.ಸುನೀಲ್ ಕುಮಾರ್ ಅವರ ಅಧಿಕಾರವಧಿ ಅಕ್ಟೋಬರ್ 31 ರಂದು ಅಂತ್ಯಗೊಳ್ಳಲಿದೆ.    

ಎ ಎಂ ಪ್ರಸಾದ್ 1985ರ ಐಪಿಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದು ರಾಜ್ಯದ ಅತಿ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದಾರೆ, ಹೀಗಾಗಿ ಅವರನ್ನು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಎಡಿಜಿಪಿಯನ್ನಾಗಿ ನೇಮಕ ಮಾಡಲಾಗುವುದು.

ಮಾಜಿ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್  1989ರ ಬ್ಯಾಚ್ ಅಧಿಕಾರಿ, ಅಮರ್ ಕುಮಾರ್ ಪಾಂಡೆ ಅತಿ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದು, ಸದ್ಯ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ  ವಿಭಾಗದಲ್ಲಿದ್ದಾರೆ., ಅವರನ್ನು ಅಕ್ಟೋಬರ್ 31ರ ನಂತರ ಅವರನ್ನು ಎಡಿಜಿಪಿ ರ್ಯಾಂಕ್ ನಿಂದ ಡಿಜಿಪಿ ಯಾಗಿ ಬಡ್ತಿ ನೀಡಲಾಗುತ್ತದೆ.

1989ರ ಐಪಿಎಸ್ ಬ್ಯಾಚ್ ನ ಅಧಿಕಾರಿಯಾಗಿರುವ ಪಾಂಡೆ ಈ ವರ್ಷದ ಫೆಬ್ರವರಿಯಲ್ಲಿ ನಟೋರಿಸ್ ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿಯನ್ನು ಸೆನೆಗಲ್ ನಿಂದ ಬಂಧಿಸಿ ಕರೆ ತರುವಲ್ಲಿ ಯಶಸ್ವಿಯಾಗಿದ್ದರು.

ಫೆಬ್ರವರಿ 22 ರಂದು ಪಾಂಡೆ ರವಿ ಪೂಜಾರಿಯನ್ನು ಬಂಧಿಸಿದ್ದರು. ಹೀಗಾಗಿ ಮುಂದಿನ ಉನ್ನತ ಹುದ್ದೆಗೆ ಅವರನ್ನು ಪರಿಗಣಿಸಲಾಗಿದೆ, ನವೆಂಬರ್ 3 ರ ವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು,   ಐಪಿಎಸ್ ಅಧಿಕಾರಿಗಳ ಬಡ್ತಿಗೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ.

SCROLL FOR NEXT