ವಿಜಯಪುರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸಿದ್ಧಗೊಳ್ಳುತ್ತಿರುವ ಎನ್'ಡಿಆರ್'ಎಫ್ ಪಡೆ 
ರಾಜ್ಯ

ರಾಜ್ಯದಲ್ಲಿ ಮತ್ತೆ ತಲೆದೋರಿದ ಪ್ರವಾಹ ಭೀತಿ: ನೆರವಿಗೆ ಧಾವಿಸಿದ ಸೇನಾಪಡೆ, ಆತಂಕದಲ್ಲಿದ್ದ ಸಾವಿರಾರು ಜನರ ಸ್ಥಳಾಂತರ!

ಭೀಮಾ ನದಿ ಪ್ರವಾಹದಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಸೂರ್ಯ ನಗರಿ ಕಲಬುರಗಿಯ ಜನತೆಯ ಸಂರಕ್ಷಣೆಗೆ ಸೇನಾ ಪಡೆ ಬಂದಿಳಿದಿದೆ. ಪ್ರವಾಹದಿಂದ ನಲುಗಿಹೋಗಿರುವ ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳ ಜೊತೆಗೆ ನೆರೆಯ ರಾಯಚೂರಿಗೂ ಇದೀಗ ಮಹಾಪ್ರವಾಹ ವ್ಯಾಪಿಸಿದ್ದು, ಈ ನಾಲ್ಕು ಜಿಲ್ಲೆಗಳ್ಲಲಿ ಮತ್ತೆ ಕಟ್ಟೆಚ್ಚರ ಘೋಷಿಸಲಾಗಿದೆ. 

ಬೆಂಗಳೂರು: ಭೀಮಾ ನದಿ ಪ್ರವಾಹದಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಸೂರ್ಯ ನಗರಿ ಕಲಬುರಗಿಯ ಜನತೆಯ ಸಂರಕ್ಷಣೆಗೆ ಸೇನಾ ಪಡೆ ಬಂದಿಳಿದಿದೆ. ಪ್ರವಾಹದಿಂದ ನಲುಗಿಹೋಗಿರುವ ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳ ಜೊತೆಗೆ ನೆರೆಯ ರಾಯಚೂರಿಗೂ ಇದೀಗ ಮಹಾಪ್ರವಾಹ ವ್ಯಾಪಿಸಿದ್ದು, ಈ ನಾಲ್ಕು ಜಿಲ್ಲೆಗಳ್ಲಲಿ ಮತ್ತೆ ಕಟ್ಟೆಚ್ಚರ ಘೋಷಿಸಲಾಗಿದೆ. 

ನದಿ ತೀರದ ಗ್ರಾಮಗಳ ಜನರ ಸ್ಥಳಾಂತರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು. ಎನ್'ಡಿಆರ್'ಎಫ್, ಎಸ್'ಡಿಆರ್'ಎಫ್, ಅಗ್ನಿಶಾಮಕದಳದ ಜೊತೆಗೆ ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರ ಕಲಬುರಗಿಗೆ ಅರೇಸನಾಪಡೆಯ ತಂಡವೊಂದನ್ನು ರವಾನಿಸಲಾಗಿದೆ. 

ಸಿಕಿಂದ್ರಾಬಾದ್ ನಿಂದ ಬಂದಿಳಿದ ಸೇನಾ ತುಕಡಿಯನ್ನು ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಣಿಕ್ಯಾಳ ಜಿಲ್ಲಾಡಳಿತ ಪರವಾಗಿ ಬರಮಾಡಿಕೊಂಡರು.

ರಾತ್ರಿಯಿಂದಲೇ ಸೇನಾ ಪಡೆ ರಕ್ಷಣಾ‌ ಕಾರ್ಯವನ್ನು ನಡೆಸಿದ್ದು. ಮೇಜರ್ ಮಾರ್ಟಿನ್ ಅರವಿಂದ ಅವರ ನೇತೃತ್ಬದ ಕಂಪನಿಯಲ್ಲಿ ಒಟ್ಟು 98 ಜನ ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಜನಿ, ವೀರ ಭಟ್ಕಕರ್ ಜಲಾಶಯಗಳಿಂದ ಭೀಮಾ ನದಿಗೆ 8 ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿದೆ. ಅದೇ ರೀತಿ ಕೃಷ್ಣಾನದಿಗೆ 2 ಲಕ್ಷ ನೀರು ಬಿಡಲಾಗುತ್ತಿದೆ. ಭೀಮೆ ಪ್ರವಾಹಕ್ಕೆ ಈಗಾಗಲೇ ಕಲಬುರಗಿಯಲ್ಲಿ 157 ಗ್ರಾಮಗಳು ಜಲಾವೃತವಾಗಿದೆ. 

ವಿಜಯಪುರದಲ್ಲಿ 17 ಹಾಗೂ ಯಾದಗಿರಿಯಲ್ಲೂ 10ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಈ ಮೂರೂ ಜಿಲ್ಲೆಗಳಲ್ಲಿ ಭೀಮೆತೀರದ 30 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದ್ದು, 152 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಉಕ್ಕಿಹರಿಯುತ್ತಿರುವ ಕೃಷ್ಣಾನಿದಿಯಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಕೆಳಮಟ್ಟದ ಹಲವು ಸೇತುವೆಗಳು ಜವಾವೃತವಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ನಡುಗಡ್ಡೆಯಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ. 

ಭೀಮೆ ಅಬ್ಬರಕ್ಕೆ ಕಲಬುರಗಿ-ಜೇವರ್ಗಿ ನಡುವಿನ ಕಟ್ಟಿ ಸಂಗಾವಿ ಸೇತುವೆ ಮುಳುಗಿದ್ದು, ಈ ರಸ್ತೆಯಲ್ಲಿ ಮೂರು ದಿನಗಳಿಂದ ಲಾರಿಗಳು ಸಾಲುಗಟ್ಟಿ ನಿಂತಿವೆ. ರಕ್ಷಣಾ ಕಾರ್ಯಕ್ಕಾಗಿ ಎನ್'ಡಿಆರ್ಎಫ್, ಎಸ್'ಡಿಆರ್'ಎಫ್'ನ 5 ತಂಡಗಳ ಜೊತೆಗೆ ಈಗ 98 ಮಂದಿಯ ಅರೆಸೇನಾ ಸಿಬ್ಬಂದಿನಯನ್ನೂ ಕರೆಸಿಕೊಳ್ಳಲಾಗಿದೆ. ಇದರ ಜೊತೆಗೆ ಅಗ್ನಿಶಾಮಕ ದಳ, ಗೃಹ ರಕ್ಷಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಯಾದಗಿರಿಯ ಭೀಮಾ ಪಾತ್ರದ 12 ಗ್ರಾಮಗಳು ಭಾರೀ ಪ್ರವಾಹಕ್ಕೆ ತುತ್ತಾಗುವ ಆತಂಕವಿದೆ. ಈಗಾಗಲೇ ಕೆಲವೆಡೆ ನೀರು ನುಗ್ಗಿದ್ದು, 33 ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಳ್ಳುವ ನಿರೀಕ್ಷೆಗಳಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT