ರಾಜ್ಯ

ಬೆಳಗಾವಿ: ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತ್ಯು, ಇನ್ನೊಬ್ಬ ಮಹಿಳೆ ಗಂಭೀರ

Raghavendra Adiga

ಬೆಳಗಾವಿ: ಮಂಗಳವಾರ ಸಂಜೆ ಬೆಳಗಾವಿ ಜಿಲ್ಲೆಯ ಸವದತ್ತಿ  ತಾಲ್ಲೂಕಿನ ಚಿಕ್ಕಲ್ಗೆರಿ ಗ್ರಾಮದಲ್ಲಿ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರು ಮಹಿಳಾ ಕಾರ್ಮಿಕರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಮಹಿಳೆ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಯೆಲ್ಲವ್ವ(30) ಮತ್ತು ಬಾಗವ್ವ(48) ಎಂದು ಗುರುತಿಸಲಾಗಿದೆ 

 ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 

SCROLL FOR NEXT