ಮಲ್ಲಣ್ಣ ಯಲಗೋಡ 
ರಾಜ್ಯ

ಮೇಕೆಮರಿ ರಕ್ಷಿಸಿದ ನಾಟಕ: ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದ ಪಿಎಸ್ಐ, ವಿಡಿಯೋ ವೈರಲ್!

ಈ ಹಿಂದೆ ಕೊರೊನಾ ಭೀತಿ ಸಂದರ್ಭದಲ್ಲೂ ತಮ್ಮ ಬೆಂಬಲಿಗರಿಂದ ಹಾಲಿನ ಅಭಿಷೇಕ ಮಾಡಿಸಿಕೊಂಡು ಜನ್ಮದಿನ ಆಚರಿಸಿಕೊಳ್ಳುವ ಮೂಲಕ ಇಲಾಖೆಯ ಕಂಗಣ್ಣಿಗೆ ಗುರಿಯಾಗಿದ್ದ ಜಿಲ್ಲೆಯ ಪಿಎಸ್ಐ ಇದೀಗ ಜಿಲ್ಲಾ ಪೊಲೀಸ್ ಇಲಾಖೆ ತಲೆತಗ್ಗಿಸುವಂತಹ ಕೆಲಸ ಮಾಡಿದ್ದಾರೆ.

ಕಲಬುರಗಿ: ಈ ಹಿಂದೆ ಕೊರೊನಾ ಭೀತಿ ಸಂದರ್ಭದಲ್ಲೂ ತಮ್ಮ ಬೆಂಬಲಿಗರಿಂದ ಹಾಲಿನ ಅಭಿಷೇಕ ಮಾಡಿಸಿಕೊಂಡು ಜನ್ಮದಿನ ಆಚರಿಸಿಕೊಳ್ಳುವ ಮೂಲಕ ಇಲಾಖೆಯ ಕಂಗಣ್ಣಿಗೆ ಗುರಿಯಾಗಿದ್ದ ಜಿಲ್ಲೆಯ ಪಿಎಸ್ಐ ಇದೀಗ ಜಿಲ್ಲಾ ಪೊಲೀಸ್ ಇಲಾಖೆ ತಲೆತಗ್ಗಿಸುವಂತಹ ಕೆಲಸ ಮಾಡಿದ್ದಾರೆ.

ಜಿಲ್ಲೆಯ ‌ಜೇವರ್ಗಿ ತಾಲ್ಲೂಕಿನ ನೆಲೋಗಿ ಠಾಣೆಯ ಪಿಎಸ್ಐ ಮಲ್ಲಣ್ಣ ‌ಯಲಗೋಡ ಅವರು ಮೇಕೆಮರಿ ರಕ್ಷಿಸುವಂತೆ ನಾಟಕವಾಡಿ ಜಿಲ್ಲಾ ಪೊಲೀಸ್ ಇಲಾಖೆ ಮುಜುಗರಪಡುವಂತೆ ಮಾಡಿದ್ದಾರೆ. ಪಿಎಸ್ಐ ಮಲ್ಲಣ್ಣ ಯಲಗೋಡ ಬೇರೆ ಕಡೆಯಿಂದ ಕುರಿ ಮರಿಗಳನ್ನು ತರಿಸಿ ಅವುಗಳನ್ನು ಎತ್ತಿ ಹಿಡಿದು, ಇವು ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದವು. ಇವುಗಳನ್ನು ತಾನೇ ರಕ್ಷಿಸಿರುವುದಾಗಿ ಗ್ರಾಮಸ್ಥರಿಂದ ಹೇಳಿಸಿ ವಿಡಿಯೋವನ್ನು ಮಾಡಿಸಿದ್ದರು.

ಕೂಡಲಗಿ ಗ್ರಾಮ ಪ್ರವಾಹಕ್ಕೆ ಜಲಾವೃತವಾಗಿದ್ದು ನೀರಿನಲ್ಲಿ ನಾಲ್ವರು ಯುವಕರ ಸಹಾಯದಿಂದ ಥರ್ಮಾಕೋಲ್ ಮೇಲೆ ಪಿಎಸ್ಐ ನಿಂತಿದ್ದಾರೆ. ಕಡಿಮೆ ನೀರಿದ್ದ ಜಾಗದಲ್ಲಿ ಯುವಕರಿಂದ ಥರ್ಮಾಕೋಲ್ ತಳ್ಳಿಸಿಕೊಂಡು ತಾನು ಹೀರೋ ತರಹ ಪೋಸ್ ಕೊಟ್ಟಿದ್ದಾರೆ. ನಂತರ ಸೊಂಟದವರೆಗೆ ನೀರಿರುವಲ್ಲಿಗೆ ಹೋಗಿ ಕುರಿ ಮರಿ ರಕ್ಷಣೆ ಮಾಡಿರುವ ರೀತಿ ಪೋಸ್ ನೀಡಿದ್ದಾರೆ.

ಇದೇ ಅಲ್ಲದೆ ತಮ್ಮ ಹುಟ್ಟುಹಬ್ಬದಂದು ಮಲ್ಲಣ್ಣ ಹಾಲಿನಲ್ಲಿ ಅಭಿಶೇಕ ಮಾಡಿಸಿಕೊಂಡು ಟೀಕೆಗೆ ಗುರಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಚುನಾವಣೆಯಲ್ಲಿ ಮುರಿದು ಬೀಳುತ್ತಾ BJP-JDS ಮೈತ್ರಿ?: ಕುಮಾರಸ್ವಾಮಿ ಹೇಳಿದ್ದೇನು?

BMC ಫಲಿತಾಂಶ: ಬಿಜೆಪಿ ಅಬ್ಬರ; ಕಾಂಗ್ರೆಸ್ ಕಳಪೆ ಸಾಧನೆಗೆ ಕಾರಣವೇನು?

ಮನ ಮಿಡಿಯುವ Video: ಗಾಯಗೊಂಡ ಗೆಳತಿ ರಸ್ತೆ ದಾಟುವವರೆಗೆ ವಾಹನಗಳನ್ನೇ ತಡೆದು ಘೀಳಿಟ್ಟ ಆನೆ!

ಮಹಾ ಸ್ಥಳೀಯ ಸಂಸ್ಥೆ ಚುನಾವಣೆ: ಓವೈಸಿಯ AIMIM 114 ಸ್ಥಾನಗಳಲ್ಲಿ ಗೆಲುವು

ಇರಾನ್‌ನಲ್ಲಿ ಸಿಲುಕಿರುವ 60 ಕಾಶ್ಮೀರ ವಿದ್ಯಾರ್ಥಿಗಳು, ಯಾತ್ರಿಕರು ಮಧ್ಯರಾತ್ರಿ ದೆಹಲಿಗೆ ಆಗಮನ

SCROLL FOR NEXT