ರಾಜ್ಯ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವತಿಯಿಂದ ನೆರೆ ಸಂತ್ರಸ್ಥರಿಗೆ 60 ಸಾವಿರ ಶುಚಿ ಕಿಟ್ ರವಾನೆ

Srinivasamurthy VN

ಬೆಂಗಳೂರು: ಅತಿವೃಷ್ಠಿ ಮತ್ತು ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಉತ್ತರ ಕರ್ನಾ ಟಕ ಹಾಗೂ ಕಲ್ಯಾಣ ಕರ್ನಾಟಕದ ಭಾಗದ ಸಂತ್ರಸ್ಥರಿಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವತಿಯಿಂದ 60 ಸಾವಿರ ಶುಚಿ ಕಿಟ್ ಗಳನ್ನು ರವಾನಿಸಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ದೇಶನದಂತೆ ಹಾಗೂ ಮೈಸೂರು ಸ್ಯಾಂಡಲ್ ಸೋಪ್ಸ್ (ಕೆಎಸ್& ಡಿಎಲ್) ಕರ್ನಾಟಕ ಸೋಪು ಮತ್ತು ಮಾರ್ಜಕ ನಿಯಮಿತ ಮಂಡಳಿ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಅವರ ಸೂಚನೆ ಮೇರೆಗೆ 60 ಸಾವಿರ ಕಿಟ್ ಗಳನ್ನು ಪ್ಯಾಕಿಂಗ್ ಮಾಡಿ ಸರಬರಾಜು ಮಾಡಲಾಗಿದೆ. ಕಿಟ್ ಗಳನ್ನು 2ಲಾರಿ ಗಳಲ್ಲಿ ಕಲಬುರಗಿ, ಯಾದಗಿರಿ, ಹಾಗೂ ಬೀದರ್ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗಿದೆ.

ಗುರುವಾರ ಸಂಜೆ ಕಿಟ್ ಗಳನ್ನು ಹೊತ್ತ ಲಾರಿಗಳು ಕಲಬುರಗಿ, ಯಾದಗಿರಿ, ಹಾಗೂ ಬೀದರನತ್ತ ತೆರಳಿದವು. ಇಂದು ಮಧ್ನಾಹ್ನದ ವೇಳೆಗೆ ಕಿಟ್ ಗಳನ್ನು ಆಯಾಯ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಬಳಿಕ ಜಿಲ್ಲಾಧಿಕಾರಿಗಳು ಸಂತ್ರಸ್ಥರ ಕುಟುಂಬಗಳಿಗೆ ಶುಚಿ ಕಿಟ್ ಗಳನ್ನು ವಿತರಣೆ ಮಾಡಲಿದ್ದಾರೆ. ಶುಚಿ ಕಿಟ್ ನಲ್ಲಿ ಒಂದು ಮೈಸೂರು ಸ್ಯಾಂಡಲ್ ಸೋಪ್, ಎರಡು ಡಿಟರ್ಜೆಂಟ್ ಸೋಪ್ (ಬಟ್ಟೆ ತೊಳೆ ಯುವ ಸೋಪ್), 50 ಎಂಎಲ್ ಕೊಬ್ಬರಿ ಎಣ್ಣೆ, ಪೇಸ್ಟ್ ಮತ್ತು ಒಂದು ಬ್ರಷ್ ಒಳಗೊಂಡಿದೆ. ಶುಚಿ ಕಿಟ್ ಮೊತ್ತ 98 ರೂ. ಗಳಾಗಿದ್ದು ಅಂದಾಜು 60 ಲಕ್ಷ ರೂ ಮೊತ್ತದ ಕಿಟ್ ಗಳನ್ನು ಪೂರೈಕೆ ಮಾಡಲಾಗಿದೆ.

ನೆರೆ ಮತ್ತು ಅತಿವೃಷ್ಠಿ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ಪೂರೈಕೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ದಿನ ನಿತ್ಯದ ಬಳಕೆಗೆ ಅಗತ್ಯವಾದ ಡಿಟರ್ಜೆಂಟ್, ಸಾಂಕ್ರಾಮಿಕ ರೋಗ ನಿಯಂತ್ರಕ ಪೌಡರ್ ಗಳು, ಕ್ಲೀನಿಂಗ್ ಹಾಗೂ ಸ್ಯಾನಿಟೈಸರ್, ಇತರೆ ವಸ್ತುಗಳನ್ನು ಸರಬರಾಜು ಮಾಡಲು ಕೆಎಸ್&ಡಿಎಲ್ ಸಿದ್ದವಿದೆ ಎಂದು ನಿಗದಮ ಅಧ್ಯಕ್ಷರಾದ ಮಾಡಾಳ್ ವಿರೂಪಾಕ್ಷಪ್ಪ ಭರವಸೆ ನೀಡಿದ್ದಾರೆ. ಗುರುವಾರ ಸಂಜೆ ಎರಡು ಲಾರಿಗಳಲ್ಲಿ 8 ಸಾವಿರ ಬಾಕ್ಸ್ ಗಳಿಗೆ ಶುಚಿ ಕಿಟ್ ಗಳನ್ನು ಪ್ಯಾಕಿಂಗ್ ಮಾಡಿದ ಲಾರಿಗಳು ಕಲಬುರಗಿ ಹಾಗೂ ಬೀದರ್ ನತ್ತ ಪ್ರಯಾಣ ಬೆಳೆಸಿವೆ.

SCROLL FOR NEXT