ರಾಜ್ಯ

ಚನ್ನರಾಯಪಟ್ಟಣ ಜೋಡಿ ಕೊಲೆ ಪ್ರಕರಣ:  ನಸುಕಿನ ಜಾವ ಪೋಲೀಸ್ ಫೈರಿಂಗ್, ಆರೋಪಿ ಬಂಧನ

Raghavendra Adiga

ಹಾಸನ: ಚನ್ನರಾಯಪಟ್ಟಣ ವೃದ್ದ ದಂಪತಿಗಳ ಜೋಡಿ ಕೊಲೆ ಆರೋಪಿಯ ಮೇಲೆ ಗುಂಡು ಹಾರಿಸಿದ ಪೋಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಭಾನುವಾರ ಚನ್ನರಾಯಪಟ್ಟಣದಲ್ಲಿ ನಡೆದ ಮುರುಳಿಧರ್ (71), ಉಮಾದೇವಿ (67)  ಎಂಬ ವೃದ್ದ ದಂಪತಿಗಳ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳವಾರ ನಸುಕಿನ ವೇಳೆ ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಆರೋಪಿ ಪ್ರಸಾದ್ ಅಲಿಯಾಸ್ ಗುಂಡ ಪೋಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.  ಆಗ ಆತ್ಮರಕ್ಷಣೆಗಾಗಿ ಪೋಲೀಸರು ಆರೋಪಿಯ ಎಡಗಾಲಿನ ಮಂಡಿ ಭಾಗಕ್ಕೆ ಗುಂಡು ಹಾರಿಸಿ ಹಿಡಿದಿದ್ದಾರೆ. 

ಪ್ರಕರಣ ವಿವರ

ಮೃತ ದಂಪತಿಗಳಾದ ಮುರುಳಿಧರ್  ಹಾಗೂ ಉಮಾದೇವಿ ಅವರಿಗೆ ಮಕ್ಕಳಿರಲಿಲ್ಲ. ಆದರೆ ಮುರಳಿಧರ್ ಸ್ವಾತಂತ್ರ್ಯ ಹೋರಾಟಗಾರ ಕೃಷ್ಣಮೂರ್ತಿ ಎಂಬುವವರ ಪುತ್ರರಾಗಿದ್ದು ಸರ್ಕಾರ ಅವರಿಗೆ 80 ಎಕರೆ ಜಮೀನು ನಿಡಿತ್ತು. ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಮುರಳಿಧರ್  ಅದೇ ಜಮೀನಿನಲ್ಲಿ ಬೇಸಾಯ ಮಾಡಿಕೊಂಡು ವಾಸ್ತವ್ಯವಿದ್ದರು.  ಆದರೆ ಇತ್ತೀಚೆಗೆ ಜಮೀನನ್ನು ಮಾರಿದ್ದರೆನ್ನಳಾಗಿದ್ದು ಆ ಹಣವನ್ನು ಮನೆಯಲ್ಲೇ ಇರಿಸಿಕೊಂಡಿದ್ದಾರೆ ಎನ್ನಲಾಗಿತ್ತು.

ಇದನ್ನು ಅರಿತ ದುಷ್ಕರ್ಮಿಗಳೂ ಮನೆಗೆ ನುಗ್ಗಿ ದಂಪತಿಯನ್ನು ಕೊಂದು ದರೋಡೆ ಮಾಡಿದ್ದರು. 

ಚನ್ನರಾಯಪಟ್ಟಣದಲ್ಲಿ ಕಳೆದೊಂದು ತಿಂಗಳ ಅವಧಿಯಲ್ಲಿ ಆರು ಕೊಲೆಗಳಾಗಿದ್ದು ಓರ್ವ ಪೋಲೀಸ್ ಅಧಿಕಾರಿ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ.

SCROLL FOR NEXT