ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ರಿವಾಲ್ವಾರ್ ಸ್ವಚ್ಛಗೊಳಿಸುವಾಗ ಮಿಸ್‌ ಫೈರ್, ಐಪಿಎಸ್ ಅಧಿಕಾರಿ ಆರ್ ಪಿ ಶರ್ಮಾ ಸ್ಥಿತಿ ಗಂಭೀರ

ಹಿರಿಯ ಐಪಿಎಸ್​ ಅಧಿಕಾರಿ ಆರ್​​​.ಪಿ ಶರ್ಮಾ ಅವರು ತಮ್ಮ ಸರ್ವಿಸ್ ರಿವಾಲ್ವಾರ್ ಸ್ವಚ್ಛಗೊಳಿಸುವಾಗ ಮಿಸ್ ಫೈರ್ ಆಗಿದ್ದು, ಅವರ ಕುತ್ತಿಗೆಗೆ ಗುಂಡು ತಗುಲಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಧಿಕಾರಿಯ ಸ್ಥಿತಿ ಗಂಭೀರವಾಗಿದೆ.

ಆರ್ ಪಿ ಶರ್ಮಾ
Lingaraj Badiger
Updated On : 2 Sept 2020, 8:45 pm

ಬೆಂಗಳೂರು: ಹಿರಿಯ ಐಪಿಎಸ್​ ಅಧಿಕಾರಿ ಆರ್​​​.ಪಿ ಶರ್ಮಾ ಅವರು ತಮ್ಮ ಸರ್ವಿಸ್ ರಿವಾಲ್ವಾರ್ ಸ್ವಚ್ಛಗೊಳಿಸುವಾಗ ಮಿಸ್ ಫೈರ್ ಆಗಿದ್ದು, ಅವರ ಕುತ್ತಿಗೆಗೆ ಗುಂಡು ತಗುಲಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಧಿಕಾರಿಯ ಸ್ಥಿತಿ ಗಂಭೀರವಾಗಿದೆ.

ಗೃಹ ಮಂಡಳಿಯ ಪೊಲೀಸ್ ಮಹಾನಿರ್ದೇಶಕರಾಗಿರುವ ಆರ್ ಪಿ ಶರ್ಮಾ ಅವರು ಇಂದು ಸಂಜೆ ತಮ್ಮ ಕೊತ್ತನೂರು ನಿವಾಸದಲ್ಲಿದ್ದ ವೇಳೆ ಮಿಸ್ ಫೈರ್ ಆಗಿದ್ದು, ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ತಿಳಿಸಿದ್ದಾರೆ.

ವೈದ್ಯರ ತಂಡ ಆರ್​​.ಪಿ ಶರ್ಮಾ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

Advertisement

Advertisement

ಈ ಮಧ್ಯೆಯೇ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರು, ಆರ್​​​.ಪಿ ಶರ್ಮಾ ಆಕಸ್ಮಿಕವಾಗಿ ಫೈರ್​​ ಮಾಡಿಕೊಂಡಿದ್ಧಾರೆ ಎಂದು ಮಾಹಿತಿ ನೀಡಿದ್ಧಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement