ಸುರೇಶ್ ಕುಮಾರ್ 
ರಾಜ್ಯ

ಪೊಲೀಸ್ ಇಲಾಖೆಯ ಗರಿಮೆ ಹೆಚ್ಚಿಸಿದ ಘಟನೆ: ಸಚಿವ ಸುರೇಶ್ ಕುಮಾರ್ ಶ್ಲಾಘನೆ

ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಇಂದು ಬೆಳಗ್ಗೆಯೇ ಫೇಸ್​ಬುಕ್​ನಲ್ಲಿ ಒಂದು ಪ್ರೇರಣಾದಾಯಕವಾದ ಘಟನೆಯನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ಆ ಘಟನೆ ಸ್ಪೂರ್ತಿಯನ್ನು ತುಂಬಲಿ, ಪ್ರೇರಣೆಯನ್ನು ನೀಡಲಿ ಎಂಬ ಸದುದ್ದೇಶದಿಂದ ಅವರು ಕೆಲವು ಫೋಟೋಗಳೊಂದಿಗೆ ಶೇರ್ ಮಾಡಿದ್ದಾರೆ.

ಬೆಂಗಳೂರು: ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಇಂದು ಬೆಳಗ್ಗೆಯೇ ಫೇಸ್​ಬುಕ್​ನಲ್ಲಿ ಒಂದು ಪ್ರೇರಣಾದಾಯಕವಾದ ಘಟನೆಯನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ಆ ಘಟನೆ ಸ್ಪೂರ್ತಿಯನ್ನು ತುಂಬಲಿ, ಪ್ರೇರಣೆಯನ್ನು ನೀಡಲಿ ಎಂಬ ಸದುದ್ದೇಶದಿಂದ ಅವರು ಕೆಲವು ಫೋಟೋಗಳೊಂದಿಗೆ ಶೇರ್ ಮಾಡಿದ್ದಾರೆ.

ಇಂದು ಬೆಳಬೆಳಗ್ಗೆಯೇ ನನಗೆ ಆಶ್ಚರ್ಯ ಮತ್ತು ಸ್ಫೂರ್ತಿ ತಂದ ಘಟನೆ ಯನ್ನು ತಮ್ಮೆಲ್ಲರ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ. ಬೆಳಿಗ್ಗೆ ಏಳಕ್ಕೇ ನಾಗರಬಾವಿ ವ್ಯಾಪ್ತಿಯ ವಿನಾಯಕ ನಗರ 9ನೇ ಬ್ಲಾಕ್ ನಲ್ಲಿರುವ ಸ್ಲಂ‌ ಪ್ರದೇಶಕ್ಕೆ ಹೋಗಿದ್ದೆ. ಕಟ್ಟಡ ಕಾರ್ಮಿಕರ ಕುಟುಂಬಗಳಿಂದ ಕೂಡಿರುವ ಪ್ರದೇಶವಿದು.‌

ಅಲ್ಲಿ ಅನ್ನಪೂರ್ಣೇಶ್ವರಿ ನಗರ #ಪೊಲೀಸ್_ಠಾಣೆಯ_ಸಬ್_ಇನ್ಸ್ಪೆಕ್ಟರ್_ಶಾಂತಪ್ಪ_ಜಡಮ್ಮನವರ್ ಎಂಬುವರು ಆ ಸ್ಲಂ ಪ್ರದೇಶದ ಬಡಕುಟುಂಬಗಳ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ದೃಶ್ಯ ನನ್ನ ಹೃದಯ ಮುಟ್ಟಿತು.

ಮೂರನೇ ತರಗತಿಯಿಂದ ಏಳನೇ ತರಗತಿಗಳ ಮಕ್ಕಳಿಗೆ ಗಣಿತ ಹಾಗೂ ಸಾಮಾನ್ಯ ಜ್ಞಾನದ ವಿಷಯಗಳನ್ನು ಶಾಂತಪ್ಪ ಹೇಳಿಕೊಡುತ್ತಿದ್ದಾರೆ. ಸುಮಾರು ಹದಿನೈದು ದಿನಗಳಿಂದ ಈ ಪೊಲೀಸ್ ಅಧಿಕಾರಿ ತನ್ನ ಈ ಕಾಯಕದಲ್ಲಿ ತೊಡಗಿದ್ದಾರೆ.

ಆ ಮಕ್ಕಳೊಂದಿಗೆ ಮಾತನಾಡಿ ಕೆಲ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನೂ ಪಡೆದುಕೊಂಡೆ‌. ಈ ರೀತಿ ಮಾಡುವ ಯೋಚನೆ ನಿಮಗೆ ಹೇಗೆ ಬಂತು ಎಂದು ಕೇಳಿದ್ದಕ್ಕೆ ಶಾಂತಪ್ಪ ಕೊಟ್ಟ ಉತ್ತರ "ಸರ್. ನಾನು ಸಹ ಒಬ್ಬ ಬಳ್ಳಾರಿಯ migrant labourer ಮಗ.

ನನಗೆ ಈ‌ ಕಷ್ಟ ಎಲ್ಲಾ ಗೊತ್ತಿದೆ. ಅದಕ್ಕಾಗಿ ಈ ಕಾರ್ಯದಲ್ಲಿ ತೊಡಗಿದ್ದೇನೆ. ಪ್ರತಿದಿನ ಠಾಣೆಗೆ ಕರ್ತವ್ಯಕ್ಕೆ ಹೋಗುವ ಮುನ್ನ ಈ ಕೆಲಸ ಮುಗಿಸಿ ಹೋಗುತ್ತೇನೆ" ಎಂದು.‌ ನನಗೆ ನಿಜಕ್ಕೂ ಪೊಲೀಸ್ ಅಧಿಕಾರಿಯ ಮೇಲೆ ತುಂಬು ಹೆಮ್ಮೆ ಬಂದಿದೆ. ಕೇವಲ ಕೆಟ್ಟ ಕಾರಣಗಳೇ ಸುದ್ದಿ ಮಾಡುವ ಈ ದಿನಗಳಲ್ಲಿ ಇಂತಹ ಪ್ರಸಂಗಗಳು ಪೊಲೀಸ್ ಇಲಾಖೆಯ ಗರಿಮೆಯನ್ನು ಹೆಚ್ಚಿಸುತ್ತದೆ.

ನಾನು ಅಲ್ಲಿನ‌ ಎಲ್ಲ ಕುಟುಂಬಗಳ ಜೊತೆ ಮಾತಾಡಿ ಯಾವುದೇ ಕಾರಣಕ್ಕೂ ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಲ್ಲಿಸಬಾರದು ಹಾಗೂ ಯಾವುದೇ ಕಾರಣಕ್ಕೂ ಹೆಣ್ಣುಮಕ್ಕಳಿಗೆ ಬೇಗ ವಿವಾಹ ಮಾಡಬಾರದು ಎಂದು ಪ್ರಮಾಣ ಮಾಡಿಸಿಕೊಂಡಿದ್ದೇನೆ.

ಇಂತಹ ಮಾನವೀಯ ಹೃದಯದಿಂದ ಉತ್ತಮ ಸೇವೆ ಮಾಡುತ್ತಿರುವ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಶಾಂತಪ್ಪ ಜಣಮ್ಮನವರ್ ರಿಗೆ ನನ್ನದೊಂದು #ಸಲ್ಯೂಟ್.

ಶಾಂತಪ್ಪನವರ ಮೊ.ನಂ : 8660682092.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT