ಜಗದೀಶ್ ಶೆಟ್ಟರ್ 
ರಾಜ್ಯ

ಗೇಮಿಂಗ್, ಅನಿಮೇಷನ್ ಕ್ಷೇತ್ರದಲ್ಲಿ ಹೂಡಿಕೆಗೆ ರಾಜ್ಯ ಸೂಕ್ತ ತಾಣ: ಸಚಿವ ಜಗದೀಶ ಶೆಟ್ಟರ್

 ಗೇಮಿಂಗ್ ಮತ್ತು ಅನಿಮೇಶನ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿಗೆ ಕರ್ನಾಟಕದಲ್ಲಿ ವಿಪುಲ ಅವಕಾಶಗಳಿದ್ದು, ಇದಕ್ಕೆ ಪೂರಕವಾದ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.

ಬೆಂಗಳೂರು: ಗೇಮಿಂಗ್ ಮತ್ತು ಅನಿಮೇಶನ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿಗೆ ಕರ್ನಾಟಕದಲ್ಲಿ ವಿಪುಲ ಅವಕಾಶಗಳಿದ್ದು, ಇದಕ್ಕೆ ಪೂರಕವಾದ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.

ಸಿಐಐ ಇಂದು ಏರ್ಪಡಿಸಿದ್ದ ಜಾಗತಿಕ ಅನಿಮೇಷನ್, ವಿಎಫ್ಎಕ್ಸ್, ಗೇಮಿಂಗ್ ಅಂಡ್ ಕಾಮಿಕ್ಸ್ ಕುರಿತಾದ ವೆಬಿನಾರ್ ನಲ್ಲಿ ಪಾಲ್ಗೊಂಡು ಕರ್ನಾಟಕದಲ್ಲಿ ಎವಿಜಿಸಿ ಕ್ಷೇತ್ರದ ಅವಕಾಶಗಳ ಅನ್ವೇಷಣೆ ಕುರಿತು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಅನಿಮೇಷನ್ ಉದ್ಯಮ ಸ್ಥಿರವಾದ ಬೆಳವಣಿಗೆ ಕಾಣುತ್ತಿದ್ದು, ಅತ್ಯಂತ ಹೆಚ್ಚು ಅವಕಾಶ ಹೊಂದಿರುವ ಕ್ಷೇತ್ರವಾಗಿದೆ. ಇದರ ಪರಿಣಾಮ ಭಾರತಕ್ಕೆ ಅನಿಮೇಷನ್ ತಂತ್ರಜ್ಞಾನದ ಅರಿವು ನಿರಂತರವಾಗಿ ದೊರೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕವು ಹೈಟೆಕ್ ಉದ್ಯಮ ಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ರಾಜ್ಯವಾಗಿದೆ. ಇದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಂತರಿಕ್ಷ ಮತ್ತು ಇತರೆ ತಂತ್ರಜ್ಞಾನ ಆಧಾರಿತ ಕ್ಷೇತ್ರಗಳ ಮೂಲಕ ದೇಶದ ಆದಾಯಕ್ಕೆ ಗಣನೀಯ ಪ್ರಮಾಣದ ಕೊಡುಗೆಯನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಅನಿಮೇಷನ್ ಮತ್ತು ಗೇಮಿಂಗ್ ಬೆಳವಣಿಗೆ ಹೊಂದುತ್ತಿರುವ ಕ್ಷೇತ್ರ ಎಂಬುದನ್ನು ಪರಿಗಣಿಸಿದ ಮೊದಲ ರಾಜ್ಯವೆಂದರೆ ಕರ್ನಾಟಕ. ಅಲ್ಲದೇ, ಈ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಪ್ರತ್ಯೇಕ ನೀತಿಯನ್ನೂ ಜಾರಿಗೆ ತಂದಿರುವ ಮೊದಲ ರಾಜ್ಯವೂ ಕರ್ನಾಟಕವಾಗಿದೆ ಎಂದರು.

ಕಳೆದ ಐದು ವರ್ಷಗಳಲ್ಲಿ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಅನಿಮೇಷನ್ ಸೇವೆಗಳು, ವಿಎಫ್ಎಕ್ಸ್ ಸೇವೆಗಳು ಮತ್ತು ಗೇಮಿಂಗ್ ಡೆವಲಪರ್ ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಈ ಸಂಖ್ಯೆ ಅಧಿಕವಾಗಿದೆ. ಇದಕ್ಕೆ ಪ್ರಮುಖ ಕಾರಣ ರಾಜ್ಯ ಸರ್ಕಾರ ಅನಿಮೇಷನ್ ಮತ್ತು ಗೇಮಿಂಗ್ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ಪ್ರಕಟಿಸಿರುವುದಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್ ಮತ್ತು ಗೇಮಿಂಗ್ ಕ್ಷೇತ್ರದ ಟಾಪ್ ತಾಣಗಳಲ್ಲಿ ಕರ್ನಾಟಕ ಒಂದಾಗಿದೆ. ಟೆಕ್ನಿಕಲರ್ ಇಂಡಿಯಾ, ಝಿಂಗಾ ಇಂಡಿಯಾ, ಡ್ರೀಂ ವರ್ಕ್ಸ್ ಸ್ಟುಡಿಯೋಸ್, ಪ್ರೈಂ ಫೋಕಸ್, ಇಎ ಮತ್ತು ಟಾಟಾ ಎಲೆಕ್ಸಿಯಂತಹ ಜಾಗತಿಕ ಸ್ಟುಡಿಯೋಗಳ ಕಾರ್ಯಾಚರಣೆಯ ನೆಚ್ಚಿನ ತಾಣವಾಗಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿರುವ 425 ಸ್ಟುಡಿಯೋಗಳ (300 ಅನಿಮೇಷನ್, 40 ವಿಎಫ್ಎಕ್ಸ್ ಮತ್ತು 85 ಗೇಮ್ ಡೆವಲಪ್ ಮೆಂಟ್) ಪೈಕಿ ಬೆಂಗಳೂರಿನಲ್ಲಿ ಶೇ.11 ರಷ್ಟಿವೆ. ಉದ್ಯಮದ ಅಂದಾಜಿನ ಪ್ರಕಾರ, ಎವಿಜಿಸಿ ಸಂಬಂಧಿತ ತರಬೇತಿಗಳನ್ನು ಕರ್ನಾಟಕದ 80 ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ನೀಡಲಾಗುತ್ತಿದೆ. ಇಲ್ಲಿ ಪ್ರತಿವರ್ಷ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೇ, 5 ಸಾವಿರಕ್ಕೂ ಅಧಿಕ ವೃತ್ತಿಪರರು ಶಿಕ್ಷಣ ಮತ್ತು ಅನಿಮೇಷನ್ ನಿರ್ಮಾಣ ಘಟಕಗಳಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ ಎಂದು ಸಚಿವರು ವಿವರ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನವೆಂಬರ್ ಕ್ರಾಂತಿ ಇಲ್ಲ: ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್; 8-12 ಸಚಿವರಿಗೆ ಕೊಕ್? ಆಕಾಂಕ್ಷಿಗಳ ಪಟ್ಟಿ!

ಬಿಹಾರ ಚುನಾವಣೆ: ಸೋಲಿಗೆ ದುಃಖವಿಲ್ಲ, 'ಸಾರ್ವಜನಿಕ ಜೀವನದಲ್ಲಿ ಏರಿಳಿತ ಅನಿವಾರ್ಯ: RJD ಮೊದಲ ಪ್ರತಿಕ್ರಿಯೆ

ಬಿಹಾರ ಚುನಾವಣೆ ಫಲಿತಾಂಶಕ್ಕೆ ರಾಜಕೀಯ ಅಷ್ಟೇ ಅಲ್ಲ, ಕುಟುಂಬವೂ ಛಿದ್ರ; ರಾಜಕಾರಣದ ಜೊತೆ ಕುಟುಂಬಕ್ಕೂ ಲಾಲು ಪುತ್ರಿ ಗುಡ್ ಬೈ!

ಮಣ್ಣಲ್ಲಿ ಮಣ್ಣಾದ ʻವೃಕ್ಷಮಾತೆʼ; ಸಕಲ ಸರ್ಕಾರಿ ಗೌರವಗಳೊಂದಿಗೆ ತಿಮ್ಮಕ್ಕ ಅಂತ್ಯಕ್ರಿಯೆ

ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿ; ರಾಜ್ಯದ 114 ಸ್ಥಳದಲ್ಲಿ 114 ಸಸಿ ನೆಟ್ಟು ಪೋಷಣೆ

SCROLL FOR NEXT