ಸಂಗ್ರಹ ಚಿತ್ರ 
ರಾಜ್ಯ

ಕೋವಿಡ್-19 ಸಂಕಷ್ಟ: ಡಿಜಿಟಲ್ ಮಯವಾಗಲಿರುವ ರಾಜ್ಯ ವಿಧಾನಮಂಡಲ ಅಧಿವೇಶನ!

ಕೊರೋನಾ ವೈರಸ್ ಪ್ರತೀ ಕ್ಷೇತ್ರವನ್ನೂ ಬೆಚ್ಚಿ ಬೀಳುವಂತೆ ಮಾಡುತ್ತಿದ್ದು, ವೈರಸ್ ಹರಡುವ ಭೀತಿಯಿಂದಾಗಿ ಈಗಾಗಲೇ ಅಧಿವೇಶನವನ್ನು ಮುಂದೂಡುತ್ತಲೇ ಬಂದಿದ್ದ ರಾಜ್ಯ ಸರ್ಕಾರ ಅಂತಿಮವಾಗಿ ಸೆಪ್ಟೆಂಬರ್ 21 ರಿಂದ 10 ದಿನಗಳ ಕಾಲ ನಡೆಸಲು ನಿರ್ಧರಿಸಿದೆ. ಈಗಾಗಲೇ ಸಂಸತ್ ಮುಂಗಾರು ಅಧಿವೇಶನದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಕೆ ಮಾಡಲು ನಿರ್ಧರಿಸಲಾಗಿದ್ದು...

ಬೆಂಗಳೂರು: ಕೊರೋನಾ ವೈರಸ್ ಪ್ರತೀ ಕ್ಷೇತ್ರವನ್ನೂ ಬೆಚ್ಚಿ ಬೀಳುವಂತೆ ಮಾಡುತ್ತಿದ್ದು, ವೈರಸ್ ಹರಡುವ ಭೀತಿಯಿಂದಾಗಿ ಈಗಾಗಲೇ ಅಧಿವೇಶನವನ್ನು ಮುಂದೂಡುತ್ತಲೇ ಬಂದಿದ್ದ ರಾಜ್ಯ ಸರ್ಕಾರ ಅಂತಿಮವಾಗಿ ಸೆಪ್ಟೆಂಬರ್ 21 ರಿಂದ 10 ದಿನಗಳ ಕಾಲ ನಡೆಸಲು ನಿರ್ಧರಿಸಿದೆ. ಈಗಾಗಲೇ ಸಂಸತ್ ಮುಂಗಾರು ಅಧಿವೇಶನದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಕೆ ಮಾಡಲು ನಿರ್ಧರಿಸಲಾಗಿದ್ದು, ಇದೇ ರೀತಿ ಶೀಘ್ರದಲ್ಲಿಯೇ ರಾಜ್ಯ ವಿಧಾನಮಂಡಲದಲ್ಲಿ ಕೂಡ ಡಿಜಿಟಲ್ ವ್ಯವಸ್ಥೆ ಬಳಕೆ ಮಾಡುವ ಸಾಧ್ಯತೆಗಳಿವೆ. 

ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗಿದ್ದೇ ಆದರೆ, ಭವಿಷ್ಯದಲ್ಲಿ ಅಧಿವೇಶನದ ಎರಡೂ ಸದನಗಳಲ್ಲಿನ ಶಾಸಕರು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಕೆ ಮಾಡಲಿದ್ದಾರೆ. 

ಮುಂಬರುವ ಅಧಿವೇಶನ ಈ ನಿಟ್ಟಿನಲ್ಲಿ ಹೊಸ ಆರಂಭವನ್ನು ಪ್ರಾರಂಭಿಸಲಿದ್ದು, ಈಗಾಗಲೇ ಸೆಪ್ಟೆಂಬರ್ 21 ರಂದು ನಡೆಯಲಿರುವ ಅಧಿವೇಶನದಲ್ಲಿ ಒಬ್ಬರನ್ನೊಬ್ಬರ ಸಂಪರ್ಕ ಸಾಧ್ಯವಾದಷ್ಟು ಕಡಿಮೆ ಮಾಡಲು ಹಾಗೂ ಕಾಗದ ಪತ್ರಗಳನ್ನು ಕಡಿಮೆ ಬಳಕೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 

ಈ ಬಾರಿ ನಡೆಯಲಿರುವ ಅಧಿವೇಶನಕ್ಕೆ ಈಗಾಗಲೇ ಸಾಕಷ್ಟು ಸಿದ್ಧತೆಗಳನ್ನು ನಡೆಸಲಾಗಿದ್ದು, ಎರಡು ಆಸನಗಳ ಮಧ್ಯೆ ಫೈಬರ್ ಶೀಟ್ ಗಳನ್ನು ಅಳವಡಿಸಲಾಗಿದೆ. ಇದಲ್ಲದೆ, ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದ್ದು, ಪ್ರತೀ ಕಾರ್ನರ್ ಗಳಲ್ಲಿಯೂ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಇರಿಸಲಾಗುತ್ತಿದೆ. ಅಲ್ಲದೆ, ಅಧಿವೇಶನಕ್ಕೆ ಬರುವ ಪ್ರತೀ ನಾಯಕರೂ ಕೂಡ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ವೈದ್ಯಕೀಯ ಪರೀಕ್ಷೆಯಲ್ಲಿ ವೈರಸ್ ಇಲ್ಲ ಎಂದಿದ್ದರೆ ಮಾತ್ರ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಕೋವಿಡ್ ಸಾಂಕ್ರಾಮಿಕ ಹಿನ್ನಲೆಯಲ್ಲಿ ಸ್ಪೀಕರ್ ಕಾಗೇರಿ ಅವರು ಕೆಲ ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದು, ಅಧಿವೇಶನದ ಅಮೂಲ್ಯ ಸಮಯ ಉಳಿಸುವ ಸಲುವಾಗಿ ಕಲಾಪದ ವೇಳೆ ಪ್ರಮುಖ ಪ್ರಶ್ನೆಗಳಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಅದರಂತೆ ಈ ಪ್ರಮುಖ ಪ್ರಶ್ನೆಗಳನ್ನು ಟಿಕ್ ಮಾಡಿ ಅವುಗಳನ್ನು ಮುದ್ರಣ ಮಾಡಿಸಿ ಕಲಾಪದ ವೇಳೆ ಕೇಳಲು ಅನುಮತಿ ನೀಡಲಾಗುತ್ತದೆ. ಬಾಕಿ ಪ್ರಶ್ನೆಗಳನ್ನು ಸಂಬಂಧ ಇಲಾಖೆಯ ಸಚಿವರು ಮತ್ತು ಅಧಝಿಕಾರಿಗಳಿಗೆ ಇ-ಮೇಲ್ ಮೂಲಕ ರವಾನಿಸಿ ಉತ್ತರ ಕೇಳಲಾಗುತ್ತದೆ. ಸಚಿವಾಲಯ ಮತ್ತು ಅಧಿಕಾರಿಗಳಿಂದ ಬರುವ ಉತ್ತರಗಳನ್ನು ಸಿಡಿಯಲ್ಲಿ ಹಾಕಿ ಶಾಸಕರಿಗೆ ನೀಡಲು ನಿರ್ಧರಿಸಲಾಗಿದೆ.

ಅತ್ಯಂತ ಕಡಿಮೆ ಮಟ್ಟದಲ್ಲಿ ಕಾಗದ ಬಳಕೆ ಮಾಡುವ ಮೂಲಕ ಅಧಿವೇಶನ ನಡೆಸಲು ಯೋಜನೆ ರೂಪಿಸಲಾಗಿದೆ. ಬಹಳ ಹಿಂದೆಯೇ ಈ ಬಗ್ಗೆ ಚಿಂತನೆಗಳು ನಡೆದಿದ್ದವು. ಆದರೆ, ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಇದೀಗ ಚಾರಿಗೆ ತರಲಾಗುತ್ತಿದೆ. ಇದು ಕೇವಲ ಆರಂಭವಷ್ಟೇ ಮುಂದಿನ ದಿನಳಲ್ಲಿ ಶೂನ್ಯ ಕಾಗದ ಬಳಕೆ ಮಾಡಲು ಉದ್ದೇಶಿಸಲಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿಗಳ ಮೂಲಗಳು ಮಾಹಿತಿ ನೀಡಿವೆ. ಶಾಸಕರಿಗೆ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಗಳನ್ನು ನೀಡಿ, ಟಿಕ್ ಮಾಡಿದ ಹಾಗೂ ಟಿಕ್ ಮಾಡದ ಪ್ರಶ್ನೆಗಳನ್ನು ಪರಿಶೀಲಿಸಲು ಶೀಘ್ರದಲ್ಲಿಯೇ ಅವಕಾಶ ನೀಡುವ ಕುರಿತು ಚಿಂತನೆಗಳು ನಡೆಯುತ್ತಿವೆ. ಇದಕ್ಕಾಗಿ ನಾವು ವೈಫೈ ಸಂಪರ್ಕವನ್ನು ಪರಿಶೀಲಿಸಬೇಕಿದೆ. ಇದರಿಂದ ಸಂಬಂಧಪಟ್ಟಂತಹ ನಾಯಕರು ಪ್ರಶ್ನೆಗಳನ್ನು ನೋಡಿ ಉತ್ತರಿಸಲು ಸುಲಭವಾಗುತ್ತದೆ ಎಂದು ಹೇಳಲಾಗುತ್ತದೆ. 

ಇನ್ನು ಈಗಾಗಲೇ ಅಧಿವೇಶನಕ್ಕೆ ಸರ್ಕಾರದ ವಿರುದ್ಧ ಹರಿಹಾಯಲು ಕಾಂಗ್ರೆಸ್ ಸಾಕಷ್ಟು ಸಿದ್ಧತೆಗಳನ್ನು ನಡೆಸಿದ್ದು, ಈಗಾಗಲೇ 1,200 ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಸಿದ್ಧವಾಗಿಡುವುದು ಕಾರ್ಯದರ್ಶಿ ಸಿಬ್ಬಂದಿಗಳಿಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲೋಕಸಭೆಯಲ್ಲಿ ಡಿ. 9 ರಂದು SIR ಕುರಿತು ಚರ್ಚೆ; ಚರ್ಚೆಗೆ 10 ಗಂಟೆ ಸಮಯ ನಿಗದಿ

ಒಂದೆ ಕಂಪನಿಯ ವಾಚ್ ಕಟ್ಟಿ ಒಗ್ಗಟ್ಟು ಪ್ರದರ್ಶಿಸಿದ್ರಾ CM, DCM?; Cartier ವಾಚಿನ ಬೆಲೆ ಎಷ್ಟು ಗೊತ್ತಾ?

'ಗರ್ಭಿಣಿ ಅಂತಾನೂ ನೋಡ್ತಿರ್ಲಿಲ್ಲ..'; ವರದಕ್ಷಿಣೆ ಕಿರುಕುಳವೋ, ಮರ್ಯಾದಾ ಹತ್ಯೆಯೋ? IAS ಅಧಿಕಾರಿ ಮಗಳ ಅನುಮಾನಾಸ್ಪದ ಸಾವು!

Imran Khan ಸಾವಿನ ಊಹಾಪೋಹ ನಡುವೆ ಜೈಲಿನಲ್ಲಿ ಮಾಜಿ ಪ್ರಧಾನಿ ಭೇಟಿಯಾಗಿ ಬಂದ ಸಹೋದರಿ ಉಜ್ಮಾ ಖಾನಮ್ ಹೇಳಿದ್ದೇನು?

'ದೇಶದಲ್ಲಿ ಪ್ರತೀ 811 ಜನರಿಗೆ ಒಬ್ಬ ವೈದ್ಯರಿದ್ದಾರೆ': ಸಂಸತ್ ನಲ್ಲಿ ಕೇಂದ್ರ ಸರ್ಕಾರ ಮಾಹಿತಿ!

SCROLL FOR NEXT