ಶಿವಮೊಗ್ಗ: ಕೊರೋನಾ ಲಾಕ್ ಡೌನ್ ಸಮಯದಲ್ಲಿ ಉಂಟಾದ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿರ್ವಾಹಕರು ಸರ್ಕಾರದಿಂದ ಧನ ಕೋರಿದ್ದಾರೆ.
ಕಳೆದ ಆರು ತಿಂಗಳಿಂದ ಬಸ್ ಗಳು ರಸ್ತೆಗೆ ಇಳಿದಿಲ್ಲ, ನಮಗೆ ಯಾವುದೇ ಸಂಪಾದನೆ ಇಲ್ಲ, ಹೀಗಾಗಿ ಸರ್ಕಾರ ಒಂದು ವರ್ಷದ ರೋಡ್ ಟ್ಯಾಕ್ಸ್ ಮನ್ನಾ ಮಾಡಬೇಕು ಎಂದು 27 ಖಾಸಗಿ ಬಸ್ ಗಳ ಮಾಲೀಕ ಪಿ ರುದ್ರೇಶ್ ಒತ್ತಾಯಿಸಿದ್ದಾರೆ.
ಕಳೆದ ಆರು ತಿಂಗಳಿಂದ ಬಸ್ ಗಳನ್ನು ಚಲಾಯಿಸದೇ ನಿಲ್ಲಿಸಿದ್ದೇವೆ, ಪಾರ್ಕಿಂಗ್ ಮಾಡಿದ ಸ್ಥಳದಿಂದಲೇ ಬಸ್ ನಿಂದಲೇ ಸ್ಪೀಕರ್, ಸೀಟುಗಳು, ಟೈರ್ ಮುಂತಾದವುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆಟೋಮೊಬೈಲ್ ಉದ್ಯಮ ಕೂಡ ಖಾಸಗಿ ಬಸ್ ಗಳನ್ನು ಅವಲಂಬಿಸಿದೆ, ಒಂದು ವೇಳೆ ಸರ್ಕಾರ ಸಹಾಯ ನೀಡಿದರೇ ಬಸ್ ಮಾಲೀಕರಿಗೆ ನೆರವಾಗಲಿದೆ.
ಮಾಲೀಕನಾಗಿ ನನಗೆ ನನ್ನ ವ್ಯವಹಾರವನ್ನು ನಡೆಸಲಾಗುತ್ತಿಲ್ಲ ಎಂದಾದರೇ ಕೂಲಿ ಕಾರ್ಮಿಕರ ಪಾಡೇನು ಎಂದು ಪ್ರಶ್ನಿಸಿದ್ದಾರೆ. ತೆರಿಗೆ ಮತ್ತು ಇನ್ಸ್ಯೂರೆನ್ಸ್ ಅವಧಿ ಮುಗಿದಿದೆ, ನಮಗೆ ಸದ್ಯ ರೋಡ್ ಟ್ಯಾಕ್ಸ್ ಕಟ್ಟಲು ಸಾದ್ಯವಿಲ್ಲ ನಮಗೆ ಬಸ್ ಚಲಾಯಿಸಲು ಅನುಮತಿ ಸಿಕ್ಕಿಲ್ಲ ಎಂದು ರುದ್ರೇಶ್ ತಿಳಿಸಿದ್ದಾರೆ.
ಬಸ್ ಮಾತ್ರವಲ್ಲ ಆಟೋ ಚಾಲಕರ ಬದುಕು ಕೂಡ ದುಸ್ತರವಾಗಿದೆ, ಕೊನೆ ಪಕ್ಷ ಒಂದು ವರ್ಷವಾದರೂ ತೆರಿಗೆ ವಿನಾಯಿತಿ ನೀಡಬೇಕು ಎಂದು ಹೇಳಿದ್ದಾರೆ.