ರಾಜ್ಯ

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಅತಿ ಹೆಚ್ಚು ಕೊರೋನಾ ಪ್ರಕರಣ ದಾಖಲು

Shilpa D

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವಾರ್ಡ್ ಗಳಲ್ಲಿ ರಾಜರಾಜೇಶ್ವರಿ ನಗರದಲ್ಲಿ ಅತಿ ಹೆಚ್ಚು ಕೊರೋನಾ ಕೇಸ್ ಗಳು ದಾಖಲಾಗಿವೆ.

ಕೋವಿಡ್ ವಾರ್ ರೂಂ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಆಗಸ್ಟ್ 28ರ ವೇಳೆಗೆ 569 ಪ್ರಕರಣ ಪತ್ತೆಯಾಗಿವೆ. ನಂತರ ಉತ್ತರ ಹಳ್ಳಿಯಲ್ಲಿ 542, ಹಲವು ರೋಗಿಗಳು ಸರಿಾದ ಮಾಹಿತಿ ನೀಡದ ಕಾರಣ ಅಂಕಿ ಅಂಶಗಳಲ್ಲಿ ವ್ಯತ್ಯಾಸವಾಗಿದೆ ಎಂದು ಉಸ್ತುವಾರಿ ಅಧಿಕಾರಿ ಮನೀಶ್ ಮೌದ್ಗೀಲ್ ಹೇಳಿದ್ದಾರೆ.

ನಗರದಾದ್ಯಂತದ ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ ಸ್ವ್ಯಾಬ್ ಸಂಗ್ರಹದ ಸಮಯದಲ್ಲಿ ಜನರಿಗೆ ಬಿಬಿಎಂಪಿ ವಿಳಾಸ  ಮತ್ತು ಒಟಿಪಿ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ.  ವಿಳಾಸ ಮಾಹಿತಿ ಪಡೆದುಕೊಳ್ಳುವುದರಿಂದ ಸೋಂಕಿತರನ್ನು ಪತ್ತೆ ಹಚ್ಚಿ ಅವರನ್ನು ಪ್ರತ್ಯೇಕವಾಗಿರಿಸಲು ಸಹಾವಾಗುತ್ತದೆ ಎಂಬ ಉದ್ದೇಶದಿಂದ ಬಿಬಿಎಂಪಿ ಈ ನಿರ್ಧಾರ ತೆಗೆದುಕೊಂಡಿದೆ.

ಮೊಬೈಲ್ ಪರಿಶೀಲನೆಯ ಮೂಲಕ ಕೋವಿಡ್ ರೋಗಿಗಳನ್ನು ಸಂಪರ್ಕಿಸಲು ಸಹಾಯ ಮಾಡಲು ಮಾತ್ರ ಈ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯ ಜನರು ಪರೀಕ್ಷೆಯನ್ನು ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಅಡ್ರೆಸ್ ಪ್ರೂಫ್ ಸಂಗ್ರಹಿಸುವ ನಿಯಮವನ್ನು ಸಡಿಲಗೊಳಿಸಿದ್ದೇವೆ.

ಪ್ರತಿದಿನ, ಪ್ರಾಥಮಿಕ ಮತ್ತು ದ್ವಿತೀಯಕ ಸಂಪರ್ಕಗಳನ್ನು ಪತ್ತೆಹಚ್ಚಲು ನಾವು ಸುಮಾರು 60-80 ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ, ರಾಜರಾಜೇಶ್ವರಿ ನಗರ ವಲಯದಲ್ಲಿ ಕೇವಲ 22 ಜನರಿಗೆ ಮಾತ್ರ ಆಮ್ಲಜನಕದ ಅಗತ್ಯವಿರುತ್ತದೆ, ಆದರೆ 90 ಪ್ರತಿಶತದಷ್ಟು ರೋಗಿಗಳಿಗೆ ಸೌಮ್ಯ ವಾದ ರೋಗ ಲಕ್ಷಣಗಳಿವೆ ಎಂದು ಬಿಬಿಎಂ ವಲಯ ಉಪ ಆಯುಕ್ತ ಡಾ. ಆರ್ ವಿಶಾಲ್ ತಿಳಿಸಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರ ಜೊತೆಗೆ ಗುಣಮುಖರಾಗುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.

SCROLL FOR NEXT