ತುಮಕೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಅಂತೆಯೇ ತುಮಕೂರಿನಲ್ಲೂ ಕೂಡ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡಬರುತ್ತಿದೆ. ಆದರೆ ತುಮಕೂರಿನ ಒಟ್ಟಾರೆ ಸೋಂಕಿತರ ಪೈಕಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಕ್ಕಳು ಈ ವೈರಸ್‌ಗೆ ಬಲಿಯಾಗಿಲ್ಲ.
ಹೌದು... ತುಮಕೂರಿನಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಐಸಿಯುಗೆ ಸೇರುತ್ತಿರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇನ್ನು ಜಿಲ್ಲೆಯಲ್ಲಿ ಈವರೆಗೂ ಜಿಲ್ಲೆಯಲ್ಲಿ ಸೋಂಕಿಗೆ 200 ಮಂದಿ ಬಲಿಯಾಗಿದ್ದು, ಆದರೆ ಅಚ್ಚರಿ ಎಂಬಂತೆ ಜಿಲ್ಲೆಯಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಕ್ಕಳು ಈ ವೈರಸ್‌ಗೆ ಬಲಿಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ನ್ಯುಮೋನಿಯಾ ಮತ್ತು ಸಂಬಂಧಿತ ತೊಂದರೆಗಳನ್ನು ಹೊಂದಿದ್ದ 24 ವರ್ಷದ ಮಹಿಳೆಯ ಸಾವನ್ನು ಹೊರತುಪಡಿಸಿದರೆ ಈ ವರೆಗೂ ಕಡಿಮೆ ವಯಸ್ಸಿನ ಯುವಕರು ಸೋಂಕಿಗೆ ಬಲಿಯಾಗಿಲ್ಲ. ಈ ವರೆಗೂ ಜಿಲ್ಲೆಯಲ್ಲಿ 9,215 ಸೋಂಕು ಪ್ರಕರಣಗಳು ದಾಖಲಾಗಿದ್ದು, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 160 ಮಕ್ಕಳು ಸೋಂಕಿಗೆ ತುತ್ತಾಗಿದ್ದರು. ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಡಿಎಚ್‌ಒ ಡಾ ಎಂ ಬಿ ನಾಗೇಂದ್ರಪ್ಪ ಎಂದು ಹೇಳಿದರು.