ಸಾಂದರ್ಭಿಕ ಚಿತ್ರ 
ರಾಜ್ಯ

ಕೋವಿಡ್-19 ಎಫೆಕ್ಟ್ : ವೆಚ್ಚ ತಗ್ಗಿಸಲು ಮೈಸೂರಿನತ್ತ ಕಣ್ಣು ಹಾಕಿದ ಬೆಂಗಳೂರಿನ ಐಟಿ / ಐಟಿಇಎಸ್ ಸಂಸ್ಥೆಗಳು

ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ  ಪರಿಣಾಮದಿಂದಾಗಿ ತಂತ್ರಜ್ಞಾನದ ಕಂಪನಿಗಳು ವೆಚ್ಚವನ್ನು ಕಡಿಮೆ ಮಾಡಲು ಎರಡನೇ ಹಂತದ ನಗರಗಳತ್ತ ದೃಷ್ಟಿ ಬೀರಿವೆ.

ಮೈಸೂರು: ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ  ಪರಿಣಾಮದಿಂದಾಗಿ ತಂತ್ರಜ್ಞಾನದ ಕಂಪನಿಗಳು ವೆಚ್ಚವನ್ನು ಕಡಿಮೆ ಮಾಡಲು ಎರಡನೇ ಹಂತದ ನಗರಗಳತ್ತ ದೃಷ್ಟಿ ಬೀರಿವೆ.

ಬಹುತೇಕ ಐಟಿ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಮ್ ಪದ್ಧತಿಯನ್ನು ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ನೌಕರರು ಕಚೇರಿಗೆ ಮರಳುವ ಲಕ್ಷಣಗಳು ಕಾಣದೇ ಅನೇಕ ಕಂಪನಿಗಳು ವಿಶೇಷವಾಗಿ ಕಾರ್ಯಾಚರಣೆಗೆ ತೊಂದರೆಗೀಡಾಗಿರುವ ಕಂಪನಿಗಳು,ಪಾರಂಪರಿಕ ನಗರದಲ್ಲಿ ಕಚೇರಿ ಹೊಂದಲು ಎದುರು ನೋಡುತ್ತಿವೆ.

ಅಗತ್ಯವಿರುವ ಮಾನವ ಸಂಪನ್ಮೂಲದೊಂದಿಗೆ ಮೈಸೂರಿನಲ್ಲಿ ಕಚೇರಿಗೆ ಹೊಂದಲು ಅನೇಕ ಕಂಪನಿಗಳು ಎದುರು ನೋಡುತ್ತಿದ್ದು, ಈಗಾಗಲೇ ಕೆಲ ಕಂಪನಿಗಳು ಕಾರ್ಯಾಚರಣೆ ಆರಂಭಿಸಿವೆ.

ಕಾರ್ಯಾಚರಣೆ ವೆಚ್ಚ, ವಿಶೇಷವಾಗಿ ದುಬಾರಿ ಬಾಡಿಗೆ ವೆಚ್ಚವನ್ನು ಉಳಿತಾಯ ಮಾಡುವಂತಾಗಿದೆ. ಬಹುತೇಕ ಕಂಪನಿಗಳಲ್ಲಿ 50ರಿಂದ 100 ನೌಕರರು ಇರಲಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಬಿಪಿಒ ಮತ್ತು ಕೆಪಿಒನಂತಹ ಕೈಗಾರಿಕೆಗಳು ಮೈಸೂರಿನಲ್ಲಿ ದೊಡ್ಡದಾಗಿರುವ ವಾಣಿಜ್ಯಾತ್ಮಕ ಜಾಗಗಳನ್ನು ಹುಡುಕುತ್ತಿವೆ.

ಮೈಸೂರಿನಲ್ಲಿ ವ್ಯವಹಾರ ಆರಂಭಿಸಲು ಹೆಚ್ಚು ಕಮ್ಮಿ ಒಂದು ಡಜನ್ ಕಂಪನಿಗಳು ತಮ್ಮನ್ನು ಕೋರಿರುವುದಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿಕೆ ಲಿಂಗರಾಜು ಹೇಳಿದ್ದಾರೆ.ಕಾರ್ಯಾಚರಣೆ ವೆಚ್ಚ ಮತ್ತು ಮಾನವ ಸಂಪನ್ಮೂಲ ಕೂಡಾ ಕಡಿಮೆ ದರದಲ್ಲಿ ದೊರೆಯಲಿದ್ದು, ಮೈಸೂರಿನಲ್ಲಿ ಕೈಗಾರಿಕೆ ಸ್ಥಾಪಿಸುತ್ತಿರುವುದಾಗಿ ಉದ್ಯಮಿ ವಿನಾಯಕ್ ತಿಳಿಸಿದ್ದಾರೆ.

ಅಗತ್ಯ ಮಾನವ ಸಂಪನ್ಮೂಲದ ಲಭ್ಯತೆಯೊಂದಿಗೆ ಅನೇಕ ಕಂಪನಿಗಳು ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸಲು ಎದುರು ನೋಡುತ್ತಿವೆ. ಇಂತಹ ಅನೇಕ ಕಂಪನಿಗಳು ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ ಎಂದು ಮೈಸೂರಿನ ಸಿಐಐ ಮಾಜಿ ಅಧ್ಯಕ್ಷ ಭಾಸ್ಕರ್ ಕಾಲಾಳೆ ಸ್ಪಷ್ಪಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026 Qualifier 1: ರಜತ್ ಪಟಿದಾರ್ ಸ್ಫೋಟಕ ಬ್ಯಾಟಿಂಗ್, GTಗೆ ಗೆಲ್ಲಲು 255 ರನ್ ಬೃಹತ್ ಗುರಿ ನೀಡಿದ RCB

IPL 2026 Qualifier 1: ಐಪಿಎಲ್ ಇತಿಹಾಸದ ಅತ್ಯಪರೂಪದ ದಾಖಲೆ ಬರೆದ Virat Kohli; ಡಬಲ್ ಆಘಾತ ಕೊಟ್ಟ Holder

ಕರ್ನಾಟಕ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಚುನಾವಣೆ ಘೋಷಣೆ; ಜೂನ್ 18 ರಂದು ಮತದಾನ

Bengaluru Rains: ಗುಡುಗು, ಸಿಡಿಲು ಸಹಿತ ಭಾರೀ ಮಳೆ; ಹಳಿ ಮೇಲೆ ಮರ ಬಿದ್ದು ಮೆಟ್ರೋ ಸಂಚಾರ ವ್ಯತ್ಯಯ!

SCROLL FOR NEXT