ರಾಜ್ಯ

ಚಾಮರಾಜನಗರ: ಬೈಕ್ ಗೆ ಜಿಂಕೆ ಢಿಕ್ಕಿ, ಜಿಂಕೆ ಸಾವು, ಸವಾರನಿಗೆ ಗಂಭೀರ ಗಾಯ

Srinivasamurthy VN

ಚಾಮರಾಜನಗರ: ಜಿಂಕೆಗೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಜಿಂಕೆ ಮೃತಪಟ್ಟಿದ್ದು, ಸವಾರನ ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರದ ಉಡಿಗಾಲ ಗ್ರಾಮದ ಸಮೀಪ ನಡೆದಿದೆ.

ಚಾಮರಾಜನಗರ-ಉಡಿಗಾಲ ಮುಖ್ಯ ರಸ್ತೆಯಲ್ಲಿ ಚಾಮರಾಜನಗರದಿಂದ ಉಡಿಗಾಲ ಕಡೆಗೆ ಹೋಗುತ್ತಿದ್ದ ಬೈಕ್ ಗೆ ರಸ್ತೆ ಮಧ್ಯೆ ಅಡ್ಡವಾಗಿ ಬಂದ ಸುಮಾರು 4-5 ವರ್ಷದ ಗಂಡು ಜಿಂಕೆಗೆ ಬೈಕ್ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸ್ಥಳದಲ್ಲೇ ಜಿಂಕೆ ಮೃತಪಟ್ಟಿದೆ. ಸವಾರನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ  ಮೈಸೂರಿಗೆ ದಾಖಲಿಸಲಾಗಿದೆ ಎಂದು ಸಂಚಾರಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಬೈಕ್ ಸವಾರ ಚಾಮರಾಜನಗರದ ಅಶ್ವಥ್ (60 ವರ್ಷ) ಎಂದು ತಿಳಿದುಬಂದಿದ್ದು, ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಜಿಂಕೆಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು  ತಿಳಿಸಿದ್ದಾರೆ.

ವರದಿ ಗುಳಿಪುರ ನಂದೀಶ ಎಂ

SCROLL FOR NEXT