ರಾಜ್ಯ

ಕರ್ನಾಟಕದ 'ಇ-ಲೋಕ್ ಅದಾಲತ್ ಗೆ ಸುಪ್ರೀಂ ಕೋರ್ಟ್‌ನಿಂದ ಪ್ರಶಂಸೆ

Raghavendra Adiga

ಬೆಂಗಳೂರು: ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಅಳವಡಿಸಿಕೊಂಡ ತಂತ್ರಗಳು ಮತ್ತು ವಿಧಾನಗಳು ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರವೆಂದು ಸಾಬೀತಾಗುತ್ತಿದೆ. ಇ-ಲೋಕ್ ಅದಾಲತ್ ಅಂತಹ ಒಂದು ಪರಿಹಾರವಾಗಿದ್ದು ಲಕ್ಷಾಂತರ ಜನರಿಗೆಲು ವೇದಿಕೆಯನ್ನು ಒದಗಿಸುವ ಮೂಲಕ ಭಾರತದ ಕಾನೂನು ಆಯಾಮವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.  ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಎನ್.ವಿ.ರಮಣ ಶನಿವಾರ ಹೇಳಿದ್ದಾರೆ

ಮೆಗಾ ಇ-ಲೋಕ್ ಅದಾಲತ್ ಅನ್ನು ಆನ್‌ಲೈನ್‌ನಲ್ಲಿ ಉದ್ಘಾಟಿಸಿದ ನಂತರ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ಎನ್‌ಎಲ್‌ಎಸ್‌ಎ) ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ರಮಣ, ಕರ್ನಾಟಕದಲ್ಲಿ 30 ಜಿಲ್ಲೆಗಳಲ್ಲಿ 940 ನ್ಯಾಯಪೀಠಗಳ ರಚಿಸಲಾಗಿದ್ದು, ಇ- ಅದಾಲತ್ ಮೂಲಕ . ಲೋಕ್ ಅದಾಲತ್, ಪೂರ್ವ ಮೊಕದ್ದಮೆ ಮತ್ತು ಬಾಕಿ ಇರುವ ಪ್ರಕರಣಗಳು ಸೇರಿದಂತೆ  1.33 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 

ಇ-ಲೋಕ ಅದಾಲತ್‌ಗಳು ಜನರ ಅದಾಲತ್‌ಗಳಾಗಿ ಮಾರ್ಪಟ್ಟಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದ ಅವರು, ಕರ್ನಾಟಕದ ಅಧೀನ ನ್ಯಾಯಾಲಯಗಳಲ್ಲಿ 17.59 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ, ಇದು ದಕ್ಷಿಣ ರಾಜ್ಯಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ್ದಾಗಿದೆ.  ಪರಿಣಾಮಕಾರಿ ಇ-ಲೋಕ್ ಅದಾಲತ್‌ಗಳು ಮೊಕದ್ದಮೆ ಹೂಡುವ ಹಂತದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ನ್ಯಾಯಾಲಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು. 60 ರಷ್ಟು ಜನಸಂಖ್ಯೆಯು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದೆ ಎಂದು ತಿಳಿಸಿದ ಅವರು, ತಂತ್ರಜ್ಞಾನ ಬಳಕೆ ಮಾಡದ ಅಂತಹಾ ಜನರಿಗೆ ಇ-ಲೋಕ ಅದಾಲತ್ ತೆಗೆದುಕೊಳ್ಳಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಾನೂನು ಸೇವಾ ಅಧಿಕಾರಿಗಳು ಮೂಲಸೌಕರ್ಯಗಳನ್ನು ನಿರ್ಮಿಸಬೇಕು ಎಂದು ಹೇಳಿದರು.

ಲಾಕ್ ಡೌನ್ ಸಮಯದಲ್ಲಿ ಕರ್ನಾಟಕದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಅವರು ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ಪಿಐಎಲ್ಗಳನ್ನು ಪ್ರಾರಂಭಿಸುವ ಮೂಲಕ ಜನರು, ವಲಸೆ ಕಾರ್ಮಿಕರು ಮತ್ತು ಸಂಕಷ್ಟದಲ್ಲಿರುವ ವ ವರ್ಗದವರ ಅನುಕೂಲಕ್ಕಾಗಿ ಹಲವಾರು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ನ್ಯಾಯಮೂರ್ತಿ ರಮಣ ಶ್ಲಾಘಿಸಿದರು. ವಿಡಿಯೋ-ಕಾನ್ಫರೆನ್ಸ್ ಮೂಲಕ ಪ್ರಕರಣಗಳ ವಿಚಾರಣೆ ಯಶಸ್ವಿಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಹೇಳಿದರು.
 

SCROLL FOR NEXT