ರಾಜ್ಯ

ಕೊರೋನಾ ಲಾಕ್ಡೌನ್ ಎಫೆಕ್ಟ್: ಅಬಕಾರಿ ಇಲಾಖೆ ಆದಾಯದಲ್ಲಿ ಕುಸಿತ!

Sumana Upadhyaya

ಬೆಂಗಳೂರು: ಕೋವಿಡ್-19 ಲಾಕ್ ಡೌನ್ ನಿಂದ ಕಳೆದ ಏಪ್ರಿಲ್ ತಿಂಗಳಲ್ಲಿ ಶೂನ್ಯ ಆದಾಯವನ್ನು ತಂದ ರಾಜ್ಯ ಅಬಕಾರಿ ಇಲಾಖೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆಗಸ್ಟ್ ವರೆಗೆ 1,549 ಕೋಟಿ ರೂಪಾಯಿ ಕಡಿಮೆ ಆದಾಯವನ್ನು ತಂದಿದೆ.

ಕಳೆದ ಮೇ 4ರಿಂದ ಆಗಸ್ಟ್ 31ರವರೆಗೆ ರಾಜ್ಯ ಸರ್ಕಾರ ಅಬಕಾರಿ ಇಲಾಖೆ ಮೂಲಕ 7 ಸಾವಿರದ 581.80 ಕೋಟಿ ರೂಪಾಯಿ ಆದಾಯ ತಂದಿದೆ ಎಂದು ಅಬಕಾರಿ ಇಲಾಖೆ ಸಚಿವ ಹೆಚ್ ನಾಗೇಶ್ ನಿನ್ನೆ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಇದೇ ತಿಂಗಳಲ್ಲಿ ಅಬಕಾರಿ ಇಲಾಖೆ 9 ಸಾವಿರದ 131.60 ಕೋಟಿ ರೂಪಾಯಿ ಆದಾಯ ತಂದಿದೆ. ಕಳೆದ ಮೇ ತಿಂಗಳಲ್ಲಿ ಅಬಕಾರಿ ಆದಾಯ 1,387.20 ಕೋಟಿ ರೂ, ಜೂನ್ ತಿಂಗಳಲ್ಲಿ 2,459.56 ಕೋಟಿ ರೂ, ಜುಲೈ ತಿಂಗಳಲ್ಲಿ 1,904.73 ಕೋಟಿ ರೂ, ಆಗಸ್ಟ್ ತಿಂಗಳಲ್ಲಿ 1,830.31 ಕೋಟಿ ರೂ ಆದಾಯ ತಂದಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.

SCROLL FOR NEXT