ರಾಜ್ಯ

ಡಿಸಿ ಜೊತೆ ಪ್ರತಿಷ್ಠೆಗೆ ಬಿತ್ತ ಸರ್ಕಾರ? ರೋಹಿಣಿ ಸಿಂಧೂರಿ ಕೊರೋನಾ ಟಫ್ ರೂಲ್ಸ್ ಜಾರಿಗೆ ಬ್ರೇಕ್!

Shilpa D

ಮೈಸೂರು: ಮೈಸೂರಿನಲ್ಲಿ ಮುಂದಿನ 10 ದಿನಗಳ ಕೊರೋನಾ ಎಮರ್ಜೆನ್ಸಿ ಹೇರಲಾಗಿದ್ದು, ಏ.10ರಿಂದ ಏ.20ರವರೆಗೆ ಕೋವಿಡ್ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಮೈಸೂರಿನಲ್ಲಿ ಯಾವುದೇ ಜನಸಂದಣಿ ಜಾಗಕ್ಕೆ ಹೋಗೋಕೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿರುವ ಜಿಲ್ಲಾಡಳಿತ, ಕೊರೋನಾ ನಿಯಂತ್ರಣಕ್ಕೆ ತೀಕ್ಷ್ಮ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು.

ಕೊರೋನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಪ್ರತಿಷ್ಠೆಗೇನಾದ್ರೂ ಬಿದ್ದಿದ್ಯಾ ಎಂಬ ಅನುಮಾನದ ಪ್ರಶ್ನೆ ಎದ್ದಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ಪ್ರಕಟಿಸಿದ್ದ ಮಾರ್ಗಸೂಚಿಯಲ್ಲಿ ಅಗತ್ಯಬಿದ್ರೆ ಜಿಲ್ಲಾಡಳಿತಗಳು ಟಫ್ ರೂಲ್ಸ್ ಜಾರಿ ಮಾಡಬಹುದು ಎಂದಿತ್ತು. 

ಅದರಂತೆ ಮೈಸೂರು ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ 10 ದಿನಗಳ ಮಟ್ಟಿಗೆ ಟಫ್ ರೂಲ್ಸ್ ಪ್ರಕಟಿಸಿದ್ರು. ಆದರೆ ಈ ಕಠಿಣ ನಿಯಮಕ್ಕೆ ಸರ್ಕಾರ ಕೊಕ್ಕೆ ಹಾಕಿದೆ.

ಜಿಲ್ಲೆಗಳು ಪ್ರತ್ಯೇಕವಾಗಿ ಮಾರ್ಗಸೂಚಿ ಹೊರಡಿಸುವಂತಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ಸೂಚನೆಯನ್ನು ಮಾತ್ರ ಕಟ್ಟುನಿಟ್ಟಾಗಿ ಪಾಲಿಸಬೇಕು. ಕೂಡಲೇ ಆದೇಶ ಹಿಂಪಡೆಯಬೇಕು ಎಂದು ವಿಪತ್ತು ನಿರ್ವಹಣಾ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ. ಲಾಕ್ ಡೌನ್ ಅಥವಾ ಕಠಿಣ ಕ್ರಮ ಆದೇಶ ಹೊರಡಿಸುವ ಅಧಿಕಾರ ಸಿಎಂ ಯಡಿಯೂರಪ್ಪ ಅವರಿಗೆ ಮಾತ್ರವಿದೆ, ಈ ಸಂಬಂಧ ಅವರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಮೈಸೂರು ನಗರಿಯಲ್ಲಿ ದಿನೇ ದಿನೇ ಹೊಸ ಕೇಸ್‍ಗಳು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಡಿಸಿ ಸಿಂಧೂರಿ ಹಲವು ಬಿಗಿ ಕ್ರಮ ಕೈಗೊಂಡಿದ್ದರು. ಮೈಸೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಕೊರೋನಾ ನೆಗೆಟೀವ್ ರಿಪೋರ್ಟನ್ನು ಕಡ್ಡಾಯವಾಗಿ ತರಬೇಕು ಎಂದು ಆದೇಶ ಹೊರಡಿಸಿದ್ದರು.

SCROLL FOR NEXT