ರಾಜ್ಯ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆ ಮುಂದೆ ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು

Raghavendra Adiga

ಹುಬ್ಬಳ್ಳಿ: ಏಪ್ರಿಲ್ 6 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಳೆ ಗುರುವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೆಲವು ತಿಂಗಳ ಹಿಂದೆ ನೈಸರ್ಗಿಕ ವಿಕೋಪದಿಂದಾಗಿ ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಮೃತ ಶ್ರೀದೇವಿ ವೀರಪ್ಪ ಕಮ್ಮಾರ (31) ಅವರ ಮನೆ ಕುಸಿದಿತ್ತು. ಮನೆಯ ಜೀರ್ಣೋದ್ಧಾರಕ್ಕೆ ಸರ್ಕಾರ  ನೀಡಿದ್ದ 50,000 ರೂ. ಸಾಲದೆಂದು ಅವರು ಆರೋಪಿಸಿದ್ದರು. ಹೆಚ್ಚಿನ ಪರಿಹಾರಕ್ಕಾಗಿ ಮಹಿಳೆ ಬೇಡಿಕೆ ಇಟ್ಟಿದ್ದರೂ ಆದನ್ನು ಪೂರೈಸಲು ನಿರಾಕರಿಸಿದ್ದಕ್ಕಾಗಿ  ಕೇಂದ್ರ ಸಚುವರ ಮನೆ ಮುಂದೆ ಮಂಗಳವಾರ (ಏಪ್ರಿಲ್ 6) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.

ಅಂದು ಶ್ರೀದೇವಿ ಧಾರವಾಡ ಗ್ರಾಮೀಣ ಶಾಸಕ ಅಮೃತ್ ದೇಸಾಯಿ ಅವರನ್ನು ಸಂಪರ್ಕಿಸಿದಾಗ  ಅವರು ಸಂಸದರೊಡನೆ ಸಂದರ್ಶಿಸಲು ಹೇಳಿದ್ದಾರೆ. ಸಂಸದ ಜೋಶಿ ಮನೆಗೆ ಭೇಟಿ ನೀಡುವ ಮೊದಲು ಆಕೆ ಡೆತ್ ನೋಟ್ ಬರೆದು ಸಚಿವರ ಮನೆಯ ಮುಂದೆ ವಿಷ ಸೇವನೆ ಮಾಡಿದ್ದಾರೆ. ಅವರು ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಮಹಿಳೆ ಈ ಹಿಂದೆ ಜೋಶಿಯನ್ನು ಸಂಪರ್ಕಿಸಲು ಪ್ರಯತ್ನಿದಾಗಲೂ  ಅವರ ಭೇಟಿ ವಿಫಲವಾಗಿತ್ತು.

ಧಾರವಾಡ ತಹಶೀಲ್ದಾರ್ ಕಮ್ಮಾರ ಅವರ ಮನೆ ಭಾಗಶಃ ಕುಸಿದಿದೆ (25% ಕ್ಕಿಂತ ಕಡಿಮೆ) ಮತ್ತು ಅದು 'ಸಿ' ವರ್ಗದ ಪರಿಹಾರದ ಅಡಿಯಲ್ಲಿ ಬರುತ್ತದೆ ಎಂದು ಪ್ರೆಸ್ ನೋಟ್ ನೀಡಿದ್ದರು.

ಏತನ್ಮಧ್ಯೆ ಕೆಲವು ವೈಯಕ್ತಿಕ ವಿಷಯಗಳ ಬಗ್ಗೆ ಆಕೆ ಅಸಮಾಧಾನಗೊಂಡಿದ್ದರು ಮತ್ತು ಅದಕ್ಕಾಗಿ ಅವರು ವಿಷ ಸೇವಿಸಿದ್ದಾರೆ ಎಂದು ಕೇಶವಾಪುರ ಪೊಲೀಸರು ತಿಳಿಸಿದ್ದಾರೆ. 

SCROLL FOR NEXT