ರಾಜ್ಯ

ಮೈಸೂರು: ಮುಸ್ಲಿಂ ವ್ಯಕ್ತಿ ನಡೆಸುತ್ತಿದ್ದ ಗ್ರಂಥಾಲಯಕ್ಕೆ ದುಷ್ಕರ್ಮಿಗಳಿಂದ ಬೆಂಕಿ, ಭಗವದ್ಗೀತೆಯ 3,000 ಪ್ರತಿಗಳು ಭಸ್ಮ

Raghavendra Adiga

ಮೈಸೂರು: ದುರಂತ ಘಟನೆಯೊಂದರಲ್ಲಿ, 62 ವರ್ಷ ವಯಸ್ಸಿನ ದೈನಂದಿನ ಕೂಲಿ ಕಾರ್ಮಿಕರೊಬ್ಬರು ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಸುಟ್ಟು ಹೋದ ಗ್ರಂಥಾಲಯದಲ್ಲಿ  ಭಗವದ್ಗೀತೆಯ ಮೂರು ಸಾವಿರ ಪ್ರತಿಗಳು ಸೇರಿದಂತೆ 11,000 ಪುಸ್ತಕಗಳ ಸಂಗ್ರಹವಿತ್ತು.

ಕಳೆದ 10 ವರ್ಷಗಳಿಂದ ಈ ಪ್ರದೇಶದ ಎಲ್ಲಾ ನಿವಾಸಿಗಳಿಗೆ ಉಚಿತ ಪ್ರವೇಶವನ್ನು ನೀಡುವ ಗ್ರಂಥಾಲಯವನ್ನು ಸ್ಥಾಪಿಸುವ ದಿಟ್ಟ ಹೆಜ್ಜೆಯನ್ನು ಕೈಗೊಂಡಿದ್ದ ಸೈಯದ್ ಇಸಾಕ್ ಮೈಸೂರಿನ ರಾಜೀವ್ ನಗರ ಮತ್ತು ಶಾಂತಿ ನಗರದ ನಿವಾಸಿಗಳ ನಡುವೆ ಹೆಸರಾಗಿದ್ದರು.

ಶಿಕ್ಷಣದಿಂದ ವಂಚಿತರಾದ ಇಸಾಕ್ ಅಂಡರ್ ಗ್ರೌಂಡ್ ಡ್ರೈನೇಜ್ (ಯುಜಿಡಿ) ಕ್ಲೀನರ್ ಆಗುವ ಮುನ್ನ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಜೀವನಕ್ಕಾಗಿ ಇತರೆ ಕೆಲಸಗಳಿಗೂ ತೆರಳುತ್ತಿದ್ದರು.

“ಬೆಳಿಗ್ಗೆ 4 ಗಂಟೆಗೆ, ಗ್ರಂಥಾಲಯದ ಪಕ್ಕದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಒಳಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ನನಗೆ ಮಾಹಿತಿ ನೀಡಿದರು. ನಾನು ಕಣ್ಣಳತೆಯಲ್ಲಿದ್ದ ಗ್ರಂಥಾಲಯಕ್ಕೆ ಧಾವಿಸಿದಾಗ, ಕೇವಲ ಬೂದಿಯ ರಾಶ್ ಮಾತ್ರವೇ ಇತ್ತು." ಇಸಾಕ್ ದುಃಖತಪ್ತರಾಗಿ ಹೇಳಿದ್ದಾರೆ.

ಜನರಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಮತ್ತು ಕನ್ನಡ ಕಲಿಯಲು ಪ್ರೋತ್ಸಾಹಿಸುವ ಉದ್ದೇಶದಿಂದ, ಇಸಾಕ್ ಈ ಸಾರ್ವಜನಿಕ ಗ್ರಂಥಾಲಯವನ್ನು ಅಮ್ಮರ್ ಮಸೀದಿ ಬಳಿಯ ರಾಜೀವ್ ನಗರದ ಎರಡನೇ ಹಂತದ ಕಾರ್ಪೊರೇಷನ್ ಪಾರ್ಕ್ ಒಳಗೆ ಶೆಡ್ ತರಹದ ರಚನೆಯಲ್ಲಿ ಸ್ಥಾಪಿಸಿದ್ದರು. ಪ್ರತಿದಿನ, 100-150 ಕ್ಕೂ ಹೆಚ್ಚು ಜನರು ಅವರ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದರು. ಕನ್ನಡ, ಇಂಗ್ಲಿಷ್, ಉರ್ದು ಮತ್ತು ತಮಿಳು ಸೇರಿದಂತೆ 17 ಕ್ಕೂ ಹೆಚ್ಚು ಪತ್ರಿಕೆಗಳನ್ನು ಇಸಾಕ್ ಖರೀದಿಸುತ್ತಿದ್ದರು. ಅವರ ಗ್ರಂಥಾಲಯ ಸಂಗ್ರಹದಲ್ಲಿರುವ ಸುಮಾರು 85% ಪುಸ್ತಕಗಳು ಕನ್ನಡದ್ದಾಗಿದೆ.  ಹಲವಾರು ಇಂಗ್ಲಿಷ್ ಮತ್ತು ಉರ್ದು ಪುಸ್ತಕಗಳೂ ಇತ್ತು.

"ಗ್ರಂಥಾಲಯವು ಭಗವದ್ಗೀತೆಯ 3,000 ಕ್ಕೂ ಹೆಚ್ಚು ಸೊಗಸಾದ ಸಂಗ್ರಹಗಳನ್ನು ಹೊಂದಿದೆ, ಕುರಾನ್ ಮತ್ತು ಬೈಬಲ್ ನ 1,000 ಪ್ರತಿಗಳು ಮತ್ತು ವಿವಿಧ ಪ್ರಕಾರಗಳ ಸಾವಿರಾರು ಪುಸ್ತಕಗಳನ್ನು ನಾನು ದಾನಿಗಳಿಂದ ಪಡೆದುಕೊಂಡಿದ್ದೇನೆ" ಎಂದು ಅವರು ಹೇಳಿದರು. ಅವರು ಜೇಬಿನಿಂದ ಹಣವನ್ನು ಖರ್ಚು ಮಾಡದಿದ್ದರೂ ಸಹ ಗ್ರಂಥಾಲಯದ ನಿರ್ವಹಣೆಗಾಗಿ ಮತ್ತು ಪತ್ರಿಕೆಗಳ ಖರೀದಿಗೆ ಸುಮಾರು 6,000 ರೂ. ವೆಚ್ಚ ಮಾಡುತ್ತಿದ್ದರು.

ಈ ಘಟನೆಯ ನಂತರ, ಇಸಾಕ್ ಉದಯಗಿರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 436 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದು, ಅಪರಾಧಿಗಳನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದಲ್ಲದೆ ಇಸಾಕ್  ". ನಾನು ಮೊದಲಿನಂತೆಯೇ ಗ್ರಂಥಾಲಯವನ್ನು ಪುನರ್ನಿರ್ಮಿಸುತ್ತೇನೆ" ಎನ್ನುತ್ತಾರೆ. "ನಾನು ಶಿಕ್ಷಣದಿಂದ ವಂಚಿತನಾಗಿದ್ದೆ ಮತ್ತು ಇತರರು ನನ್ನ ಅವಸ್ಥೆ ಪಡಬಾರದು . ಜನರು ಕನ್ನಡ ಕಲಿಯಲು, ಓದಲು ಮತ್ತು ಮಾತನಾಡಲು ನಾನು ಬಯಸುತ್ತೇನೆ ಮತ್ತು ಅದನ್ನು ಮತ್ತೆ ಪುನರ್ನಿರ್ಮಿಸುತ್ತೇನೆ, ”ಎಂದು ಅವರು ಹೇಳಿದರು.

SCROLL FOR NEXT