ತಾಯಿಯೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ 
ರಾಜ್ಯ

ಯುಗಾದಿ ಹಬ್ಬದಂದೇ ಸಚಿವೆ ಶಶಿಕಲಾ ಜೊಲ್ಲೆಗೆ ಮಾತೃ ವಿಯೋಗ!

ಯುಗಾದಿ ಹಬ್ಬದ ದಿನವೇ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ತಾಯಿ ನಿಧನವಾಗಿದ್ದಾರೆ.

ಬೆಂಗಳೂರು: ಯುಗಾದಿ ಹಬ್ಬದ ದಿನವೇ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ತಾಯಿ ನಿಧನವಾಗಿದ್ದಾರೆ.

ಸಚಿವೆ ಶಶಿಕಲಾ ಜೊಲ್ಲೆ ಅವರ ತಾಯಿ ಸೇವಂತಾ ಹರದಾರೆ(90) ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದವರು ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ತಮ್ಮ ತಾಯಿ ನಿಧನದ ಸುದ್ದಿಯನ್ನು ಸಚಿವೆ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. "ನನ್ನ ಜೀವನದ ಪ್ರೇರಣಾ ಶಕ್ತಿ, ಪ್ರತಿ ಯಶಸ್ಸಿನ ಏಳು-ಬೀಳಿನಲ್ಲೂ ಸದಾ ನನ್ನೊಂದಿಗಿರುತ್ತಿದ್ದ ದಾರಿದೀಪ, ನನ್ನನ್ನು ರೂಪಿಸಿದ ಮಾತೃಶ್ರೀ ಅವರು ಇಂದು ನಮ್ಮೊಂದಿಗಿಲ್ಲ. ವಯೋಸಹಜ ಅನಾರೋಗ್ಯದಿಂದಾಗಿ ಮಾತೃಶ್ರೀ ಶ್ರೀಮತಿ ಸೇವಂತಾ ಹರದಾರೆ (90) ಅವರು ಇಂದು ದೈವಾಧೀನರಾಗಿದ್ದಾರೆ. 

"ಜೀವ-ಜೀವನ ರೂಪಿಸಿ, ನನ್ನಮ್ಮ ತಿಳಿಸಿಕೊಟ್ಟ ಜೀವನದ ಮೌಲ್ಯಗಳು, ಅವರ ಮಾರ್ಗದರ್ಶನ, ನೆನಪು ಎಂದೆಂದಿಗೂ ನನ್ನ ಮನದಲ್ಲಿ ಚಿರಸ್ಥಾಯಿ. ನನ್ನ ಜೀವನದ ಸ್ಫೂರ್ತಿಯಾಗಿದ್ದ ನನ್ನಮ್ಮ ಇನ್ನು ನೆನಪು ಮಾತ್ರ." ಅವರು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!