ಸಚಿವ ಎಸ್.ಸುರೇಶ್ ಕುಮಾರ್ 
ರಾಜ್ಯ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದತಿ ಬಗ್ಗೆ ಚಿಂತನೆ ನಡೆದಿಲ್ಲ: ಸಚಿವ ಸುರೇಶ್ ಕುಮಾರ್

ಸಿಬಿಎಸ್‌ಇನಂತೆ ನಮ್ಮ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದತಿ ಬಗ್ಗೆ ಯಾವ ಚಿಂತನೆ ನಡೆದಿಲ್ಲ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರು: ಸಿಬಿಎಸ್‌ಇನಂತೆ ನಮ್ಮ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದತಿ ಬಗ್ಗೆ ಯಾವ ಚಿಂತನೆ ನಡೆದಿಲ್ಲ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

"ಸಿಬಿಎಸ್‌ಇ ನಿರ್ಧಾರದ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ರದ್ದತಿಗೆ ಸಂಬಂಧಿಸಿದಂತೆ ರಾಜ್ಯವು ಏನನ್ನೂ ನಿರ್ಧರಿಸಿಲ್ಲ. ಎಲ್ಲಾ ನಿಯತಾಂಕಗಳನ್ನು ಪರಿಗಣಿಸಿ ಭವಿಷ್ಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು." ಸಚಿವರು ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡುವ ಮೂಲಕ ಸ್ಪಷ್ತನೆ ನೀಡಿರುವ ಸಚಿವರು "ಸಿಬಿಎಸ್‌ಇ ಹತ್ತನೇ ತರಗತಿಗಳ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಎಸ್‌ಎಸ್‌ಎಲ್‌ಸಿ  ಪರೀಕ್ಷೆಗಳ ಕುರಿತು ಈಗಾಗಲೇ ಊಹಾಪೋಹ ಏಳತೊಡಗಿದೆ. 

ನಮ್ಮ ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭ ವಾಗಬೇಕಿರುವುದು 21.6.2021 ರಿಂದ, ಅಂದರೆ ಜೂನ್ 21 ರಿಂದ.  ಆದ್ದರಿಂದ ಈಗ ನಮ್ಮ ರಾಜ್ಯದಲ್ಲಿ ಸಿಬಿಎಸ್‌ಇ ರೀತಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ  ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು." ಎಂದು ಹೇಳಿದ್ದಾರೆ.

ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚಳದ ಹಿನ್ನೆಲೆ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದ್ದು12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಫಾರಂ-7 ದುರ್ಬಳಕೆ ಆರೋಪ: ಕ್ರಮಕ್ಕೆ ಚು.ಆಯೋಗ ಸೂಚನೆ, ಐತಿಹಾಸಿಕ ದಿನ ಎಂದ ಸಿಎಂ ಡಿಕೆಶಿ

‘ನಿಮ್ಮ ಪ್ರಾರ್ಥನೆಗೆ ಧನ್ಯವಾದ’: ಭಾರತದ ಹೀರೋ ಪೈಲಟ್ ಸ್ಮಿತ್ ಮಚ್ಚರ್ ಅಪಾಯದಿಂದ ಪಾರು!

ರಕ್ತದ ಮಡುವಿನಲ್ಲಿ ಪೈಲಟ್`ಗಳು, ಫ್ಲೈಟ್ ಲ್ಯಾಂಡ್ ಮಾಡಿದ ಪ್ಲಂಬರ್; FlyDubai ವಿಮಾನ ಪತನವಾಗದಿದ್ದದ್ದೇ ಅಚ್ಚರಿ!

ICC Cricket World Cup 2027 ವೇಳಾಪಟ್ಟಿ; ಅ.7ರಿಂದ ಭಾರತದ ಅಭಿಯಾನ ಆರಂಭ, 3 ಬಾರಿ ಬದ್ಧ ಶತ್ರುಗಳ ಕದನ?

‘ನೈಸ್ ಅಕ್ರಮ ಮರೆಮಾಚಲು ಈ ಡ್ರಾಮಾ’: ಚುನಾವಣಾ ಆಯೋಗದ ಮುಂದೆ ಸಿಎಂ, ಸಚಿವರ ಧರಣಿಗೆ ಕುಮಾರಸ್ವಾಮಿ ಕಿಡಿ