ರಾಜ್ಯ

ಮತದಾನ ಮುಗಿದ ನಂತರ ಉಪ ಚುನಾವಣಾ ಕ್ಷೇತ್ರಗಳಲ್ಲಿ ಕೊರೋನಾ ಪರೀಕ್ಷೆ: ಕೋವಿಡ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮ 

Sumana Upadhyaya

ಬೆಂಗಳೂರು: ನಾಳೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಬೀದರ್ ನಲ್ಲಿ ಅಧಿಕ ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ, ಸೂಕ್ಷ್ಮ ನಿಗಾವಣೆ ಮತ್ತು ವಿಡಿಯೊಗ್ರಾಫಿಗಳನ್ನು ಒದಗಿಸಲಾಗಿದೆ.

ಬೆಳಗಾವಿ ಲೋಕಸಭಾ ಉಪ ಚುನಾವಣೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನಿನ್ನೆ ಪ್ರಚಾರ ಅಂತ್ಯಗೊಂಡಿದ್ದು, ನಿನ್ನೆ ಮೊನ್ನೆ ಮನೆಮನೆಗೆ ಹೋಗಿ ಮತಯಾಚನೆ ಮಾಡಿದವರನ್ನು, ಅಧಿಕ ಸಂಖ್ಯೆಯಲ್ಲಿ ಜನದಟ್ಟಣೆ ಪ್ರದೇಶದಲ್ಲಿ ಭಾಗಿಯಾದವರನ್ನು, ರೋಡ್ ಶೋಗಳಲ್ಲಿ ಭಾಗಿಯಾದವರನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಬೆಳಗಾವಿ, ಮಸ್ಕಿ ಮತ್ತು ಬೀದರ್ ನ ಬಸವಕಲ್ಯಾಣ ಕ್ಷೇತ್ರದಲ್ಲಿ ನಾಳೆ ಮತದಾನ ನಡೆದ ನಂತರ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ತಪಾಸಣೆ ನಡೆಸಲಿದೆ. ಬೃಹತ್ ಪ್ರಮಾಣದಲ್ಲಿ ಜನದಟ್ಟಣೆ ಸೇರಿದಾಗ ಆಗುವ ಪರಿಣಾಮ ಬಗ್ಗೆ ನಮಗೆ ಒಂದು ವಾರ, ಹತ್ತು ದಿನ ಕಳೆದ ನಂತರ ಗೊತ್ತಾಗುತ್ತದೆ. ಮತದಾನ ಮುಗಿದ ಮೇಲೆ ಪರಿಸ್ಥಿತಿ ನೋಡಿಕೊಂಡು ತೀವ್ರ ಮಟ್ಟದಲ್ಲಿ ಕೊರೋನಾ ತಪಾಸಣೆ ಮಾಡುತ್ತೇವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT