ರಾಜ್ಯ

ಮೈಸೂರು ಸೈಯದ್ ಇಸಾಕ್ ಗ್ರಂಥಾಲಯಕ್ಕೆ ಬೆಂಕಿ ಕೇಸ್: ಆರೋಪಿ ಬಂಧನ

ಮೈಸೂರಿನ ಸೈಯದ್​ ಇಸಾಕ್ ಗ್ರಂಥಾಲಯ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಮೈಸೂರು: ಮೈಸೂರಿನ ಸೈಯದ್​ ಇಸಾಕ್ ಗ್ರಂಥಾಲಯ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಸ್ಥಳೀಯ ನಿವಾಸಿ ಸೈಯದ್ ನಾಜೀರ್ ಎಂದು ಗುರುತಿಸಲಾಗಿದೆ. ಈತ ಗ್ರಂಥಾಲಯದ ಪಕ್ಕದಲ್ಲಿದ್ದ ಸೋಫಾ ರಿಪೇರಿ ಅಂಗಡಿಯ ಬಳಿ ಬಿಡಿ ಹಚ್ಚಿ ಬೆಂಕಿ ಕಡ್ಡಿಯನ್ನು ಆರಿಸದೆ ಬಿಸಾಡಿದ್ದಾನೆ. ಇದೇ ಕಿಡಿಯಿಂದಾಗಿ ಗ್ರಂಥಾಲಯ ಸುಟ್ಟು ಹೋಗಿದೆ ಎನ್ನುವುದು ಸ್ಥಳದಲ್ಲಿದ್ದ  ಸಿಸಿಟಿವಿ ದೃಶ್ಯದಿಂದ ತಿಳಿದುಬಂದಿದೆ.

ಕನ್ನಡ ಪ್ರೇಮಿಯಾದ ಸೈಯದ್ ಇಸಾಕ್ ಮೈಸೂರಿನ ರಾಜೀವ್ ನಗರದಲ್ಲಿ ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಇದೇ ಏಪ್ರಿಲ್ 8ರಂದು ಬೆಂಕಿ ಹೊತ್ತಿಕೊಂಡಿತ್ತು. ಇದರಿಂದ ಸಾವಿರಾರು ಪುಸ್ತಕಗಳು ಸುಟ್ಟು ಭಸ್ಮವಾಗಿದ್ದವು. ಇದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು ಬೆಂಕಿ ಹಚ್ಚಿದವರ ಪತ್ತೆಗೆ  ಎಸಿಪಿ ನೇತೃತ್ವದ ತಂಡ ರಚಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ; ಆದರೆ ಡೀಲಿಮಿಟೇಷನ್ ಗೆ ಪ್ರತಿಪಕ್ಷಗಳ ವಿರೋಧ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

EVM ಬದಲು ಬ್ಯಾಲೆಟ್ ಪೇಪರ್ ಬಳಕೆ ಮಸೂದೆಗೆ ಕೊನೆಗೂ ರಾಜ್ಯಪಾಲರ ಅಂಕಿತ!

ಪಾಕಿಸ್ತಾನಕ್ಕೆ ಶಾಕ್! ಕೇಂದ್ರದ ಡೀಲಿಮಿಟೇಷನ್ ಮಸೂದೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಕ್ಷೇತ್ರಗಳ ಮರುಹಂಚಿಕೆಗೆ ಕ್ರಮ!

'ಚೀನಾ, ಇಡೀ ಜಗತ್ತಿಗೆ' ಹಾರ್ಮುಜ್ ಅನ್ನು 'ಶಾಶ್ವತವಾಗಿ' ತೆರೆಯುತ್ತೇವೆ; ಜಿನ್ ಪಿಂಗ್ ನನಗೆ ದೊಡ್ಡ ಅಪ್ಪುಗೆ ನೀಡುತ್ತಾರೆ: ಟ್ರಂಪ್

BJP ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣ: Congress ಶಾಸಕ ವಿನಯ್ ಕುಲಕರ್ಣಿ ಅಪರಾಧಿ; ಕೋರ್ಟ್ ತೀರ್ಪು!

SCROLL FOR NEXT