ರಾಜ್ಯ

ಕೋವಿಡ್ -19: ಏ. 23 ರಿಂದ ಚಿತ್ರಮಂದಿರ ಬಂದ್ ಮಾಡಲು ಮೈಸೂರಿನ ಸಿನೆಮಾ ಹಾಲ್ ಮಾಲೀಕರ ನಿರ್ಧಾರ

Lingaraj Badiger

ಮೈಸೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ನಿಯಮಗಳನ್ನು ಘೋಷಿಸಲು ಮುಂದಾಗಿರುವ ಸಮಯದಲ್ಲಿ ಮೈಸೂರಿನ ಸಿನೆಮಾ ಹಾಲ್ ಮಾಲೀಕರು ಏಪ್ರಿಲ್ 23 ರಿಂದ ಸ್ವಯಂಪ್ರೇರಿತವಾಗಿ ಚಿತ್ರಮಂದಿರಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ.

ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲೆಯ 35ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಚಲನಚಿತ್ರ ಪ್ರದರ್ಶನಕಾರರ ಒಕ್ಕೂಟದ ಉಪಾಧ್ಯಕ್ಷರೂ ಆಗಿರುವ ಗಾಯತ್ರಿ ಟಾಕೀಸ್ ಮಾಲೀಕ ಎಂ ಆರ್ ರಾಜರಾಮ್ ಅವರು ಹೇಳಿದ್ದಾರೆ.

ಕೊರೋನಾ ಎರಡನೇ ಅಲೆ ನಿಯಂತ್ರಿಸುವಲ್ಲಿ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸುವ ನಿಟ್ಟಿನಲ್ಲಿ ಇದು ಒಂದು ಸಣ್ಣ ಹೆಜ್ಜೆಯಾಗಿದೆ ಮತ್ತು ನಮ್ಮ ಕಾರ್ಮಿಕರು ಮತ್ತು ಪ್ರೇಕ್ಷಕರ ರಕ್ಷಣೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ವೈರಸ್ ನಿಯಂತ್ರಿಸಲು ಸರ್ಕಾರವನ್ನು ಬೆಂಬಲಿಸಲು ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಮತ್ತು ಮೈಸೂರು ನಗರ, ನಂಜನಗೂಡು, ಕೆ.ಆರ್.ನಗರ ಮತ್ತು ಜಿಲ್ಲೆಯ ಇತರ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿನ ಎಲ್ಲಾ ಚಿತ್ರಮಂದಿರಗಳು ಏಪ್ರಿಲ್ 23 ರಿಂದ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

SCROLL FOR NEXT