ರಾಜ್ಯ

ಆಸ್ಪತ್ರೆಯಲ್ಲಿ ಗಾಂಧಿ ಆತ್ಮಚರಿತ್ರೆ ಓದುವುದರಲ್ಲಿ ಸಿಎಂ ಯಡಿಯೂರಪ್ಪ ಮಗ್ನ

Shilpa D

ಬೆಂಗಳೂರು: ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭಾನುವಾರ ಮಹಾತ್ಮಗಾಂಧಿ ಅವರ ಆತ್ಮಚರಿತ್ರೆ ಓದುವುದರಲ್ಲಿ ಬ್ಯುಸಿಯಾಗಿದ್ದರು.

ಕಳೆದ ಆಗಸ್ಟ್ ತಿಂಗಳಲ್ಲಿ ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಮತ್ತೆ ಕೋವಿಡ್ ನಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಎಂ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಸಂಬಂಧ ಸಿಎಂ ಯಡಿಯೂರಪ್ಪ ಸಂಪುಟದ ಸಚಿವರ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಇನ್ನೂ ಕೋರೋನಾ ಸಂಬಂಧ ಭಾನುವಾರ ಸಿಎಂ ಸರ್ವಪಕ್ಷ ಸಭೆ ಕರೆದಿದ್ದರು. ಆದರೆ ಸಿಎಂ ಆಸ್ಪತ್ರೆಗೆ ದಾಖಲಾದ ಕಾರಣ ಸಭೆ ರದ್ಧಾಯಿತು.

ಯಡಿಯೂರಪ್ಪ ಮಣಿಪಾಲ ಆಸ್ಪತ್ರೆಯ ವಿವಿಐಪಿ ಸೂಟ್ ನಲ್ಲಿ ದಾಖಲಾಗಿದ್ದಾರೆ, ತಮ್ಮ ಪುತ್ರಿ ಅರುಣಾ ದೇವಿ ಕೂಡ ಇದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈಬಾರಿ ಸಿಎಂ ಜೊತೆ ಕುಟುಂಬದ ಯಾವುದೇ ಸದಸ್ಯರಿಲ್ಲ, ಪಿಪಿಇ ಕಿಟ್ ಧರಿಸಿದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.

ಸಿಎಂ ಮಗಳು ಪದ್ಮಾವತಿ ಮತ್ತು ಇತರ ಕುಟುಂಬ ಸದಸ್ಯರನ್ನು ಭಾನುವಾರ ಸಂಜೆ ಆಸ್ಪತ್ರೆಗೆ ಬಿಡಲಾಗಿತ್ತು. ಸಿಎಂ ಯಡಿಯೂರಪ್ಪ ಅವರು ಮಾರ್ಚ್ 15 ರಂದು ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದರು ಮತ್ತು ವೈದ್ಯಕೀಯ ಸಲಹೆಯ ಪ್ರಕಾರ ಮೇ ತಿಂಗಳಲ್ಲಿ ಅವರ ಎರಡನೇ ಡೋಸ್ ತೆಗೆದುಕೊಳ್ಳಲಿದ್ದಾರೆ.

SCROLL FOR NEXT