ರಾಜ್ಯ

ಗೋಹತ್ಯೆ ನಿಷೇಧ ಕಾಯ್ದೆ: ಕಳೆದ 60 ದಿನಗಳಲ್ಲಿ ಕರ್ನಾಟಕದಲ್ಲಿ 58 ಕೇಸು ದಾಖಲು 

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ವಿವಾದಾತ್ಮಕ ಗೋಹತ್ಯೆ ನಿಷೇಧ ಮತ್ತು ಹಸುಗಳ ಸಂರಕ್ಷಣೆ ಕಾಯ್ದೆ, 2020ಕ್ಕೆ ಕಳೆದ ಫೆಬ್ರವರಿ 15ರಂದು ಅಧಿಸೂಚನೆ ಹೊರಡಿಸಿದ ನಂತರ ಕಳೆದ 60 ದಿನಗಳಲ್ಲಿ ಜಾನುವಾರುಗಳನ್ನು ಮಾಂಸಕ್ಕಾಗಿ ಹತ್ಯೆ ಮಾಡಿದ ಮತ್ತು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 58 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ.

ಅಕ್ರಮವಾಗಿ ಸಾಗಿಸುತ್ತಿದ್ದ 200ಕ್ಕೂ ಹೆಚ್ಚು ಜಾನುವಾರುಗಳನ್ನು ಕಾಪಾಡಲಾಗಿದೆ ಎಂದು ಸರ್ಕಾರದಿಂದ ಮಾಹಿತಿ ಸಿಕ್ಕಿದೆ.

ಈ ಕಾಯ್ದೆಯಡಿ ಜಾನುವಾರುಗಳನ್ನು ಅಕ್ರಮವಾಗಿ ಮಾಂಸಕ್ಕಾಗಿ ಸಾಗಿಸುವುದು, ವಧೆ ಮಾಡುವುದನ್ನು ತಪ್ಪಿಸಲು ಅಧಿಕಾರಿಗಳಿಗೆ ಪತ್ತೆ ಹಚ್ಚಿ ಬಂಧಿಸುವ ಅಧಿಕಾರವನ್ನು ನೀಡಲಾಗಿದೆ. ಪಶುವೈದ್ಯರಿಂದ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರಮಾಣಪತ್ರವನ್ನು ಪಡೆಯದೆ ಜಾನುವಾರುಗಳನ್ನು ರಾಜ್ಯದಿಂದ ಹೊರಗೆ ಸಾಗಾಟ ಮಾಡುತ್ತಿದ್ದರೆ ಅಂತವರ ಮೇಲೆ ದಾಳಿ ಮಾಡಿ ಜಾನುವಾರುಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಕೂಡ ಹೊಸ ಕಾಯ್ದೆಯಡಿ ಇರುತ್ತದೆ. ಶಿಕ್ಷೆಯ ಪ್ರಮಾಣವನ್ನು ಆಧರಿಸಿ 50 ಸಾವಿರದಿಂದ 7 ಲಕ್ಷದವರೆಗೆ ದಂಡಸಹಿತ ಮೂರರಿಂದ 7 ವರ್ಷದವರೆಗೆ ಜೈಲುಶಿಕ್ಷೆ ವಿಧಿಸುವ ಅವಕಾಶ ಕಾಯ್ದೆಯಡಿ ಇದೆ. 

SCROLL FOR NEXT