ರಾಜ್ಯ

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ: ಮೊದಲ ದಿನ ಸಂಪೂರ್ಣ ಯಶಸ್ವಿ

Raghavendra Adiga

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣವನ್ನು ತಡೆಯಲು ವಾರಾಂತ್ಯದ ಕರ್ಫ್ಯೂ ಹೇರಿದ್ದ ಮೊದಲ ದಿನ ಶಾಂತಿಯುತವಾಗಿಯೂ, ಸಂಪೂರ್ಣ ಯಶಸ್ವಿಯಾಗಿಯೂ ಮುಗಿದಿದೆ.

ವರದಿಗಳ ಪ್ರಕಾರ, ಕಲಬುರಗಿಯಲ್ಲಿ ವ್ಯಾಪಾರ ಮಳಿಗೆಗಳು ಬಾಗಿಲು ಮುಚ್ಚಿದಂತೆ ರಸ್ತೆಗಳು ಬಿಕೋ ಎನ್ನುವ ನೋಟ ಕಾಣುತ್ತಿತ್ತು.

ಈಶಾನ್ಯ ರಸ್ತೆ ಸಾರಿಗೆ ನಿಗಮ (ಎನ್‌ಇಆರ್‌ಟಿಸಿ) ಕೇವಲ ನೆಪಮಾತ್ರದ ಸೇವೆಯನ್ನು ಮಾತ್ರ ನಿರ್ವಹಿಸುತ್ತಿತ್ತು,

ರಾಜ್ಯಾದ್ಯಂತ  ವ್ಯಾಪಾರ ಮಳಿಗೆಗಳು ಮುಚ್ಚಲ್ಪಟ್ಟವು, ಅಗತ್ಯ ಸೇವೆಗಳನ್ನು ಬೆಳಿಗ್ಗೆ 10 ಗಂಟೆಯ ನಂತರ ಸ್ಥಗಿತಗೊಳಿಸಲು ನಿಯಮಿಸಲಾಗಿತ್ತು. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಕೇವಲ ಪಾರ್ಸೆಲ್ ಸೇವೆಯನ್ನು ಮಾತ್ರ ಒದಗಿಸಿದವು ಮತ್ತು ಯಾರಿಗೂ ಕುಳಿತು ತಿನ್ನಲು ಅವಕಾಶವಿರಲಿಲ್ಲ. 

ಅಗತ್ಯ ಸೇವೆಗಳು ಮುಕ್ತವಾಗಿರುತ್ತವೆ ಎಂದು ಸರ್ಕಾರ ಘೋಷಿಸಿದ್ದರೂ, ಪೋಲಿಸ್ ವ್ಯಾನ್ ಸದ್ದು ಕೇಳುವ ಮುನ್ನವೇ ಜನರು ತಮ್ಮ ಖರೀದಿಯನ್ನು ಮುಗಿಸಿದ್ದರು. ಕೆಲವು ನಗರಗಳಲ್ಲಿ, ಹಾಲಿನ ಬೂತ್‌ಗಳು ಸಹ ಮುಚ್ಚಲ್ಪಟ್ಟವು.

ರಸ್ತೆಯಲ್ಲಿ ಸಾರ್ವಜನಿಕ ಸಾರಿಗೆ ಬಸ್ಸುಗಳು ಬಹಳ ಕಡಿಮೆ ಇದ್ದರೂ, ಯಾವುದೇ ಪ್ರಯಾಣಿಕರು ಇರಲಿಲ್ಲ.

ಪೊಲೀಸರ ಪ್ರಕಾರ ರಾಜ್ಯದ ಯಾವುದೇ ಭಾಗದಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

SCROLL FOR NEXT