ರಾಜ್ಯ

ಮಕ್ಕಳ ಮುಖ ನೋಡಿ ಒಂದು ವರ್ಷವಾಯಿತು; ಕರ್ತವ್ಯಕ್ಕೆ ನನ್ನ ಮೊದಲ ಆದ್ಯತೆ: ಆಕ್ಸಿಜನ್ ಟ್ಯಾಂಕರ್ ಚಾಲಕ

Shilpa D

ಮೈಸೂರು: ನಾನು ಕಳೆದ 20 ವರ್ಷಗಳಿಂದ ಆಕ್ಸಿಜನ್ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಈ ಬಾರಿಯಷ್ಟೂ ಬೇಡಿಕೆ ನಾನು ಇದುವರೆಗೂ ನೋಡಿಯೇ ಇಲ್ಲ ಶಂಕರ್ ಮಾಜಿ ಹೇಳಿದ್ದಾರೆ.

ಶಂಕರ್ ಮಾಜಿ ಆಕ್ಸಿಜನ್ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕಳೆದ ಒಂದು ವರ್ಷದಿಂದ ತನ್ನ ಐದು ಹೆಣ್ಣು ಮಕ್ಕಳ ಮುಖ ನೋಡಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಶಂಕರ್ ಮಾಜಿ ಮತ್ತು ಆತನ ಮತ್ತೊಬ್ಬ ಚಾಲಕ ಮೊಹಮದ್ ಹಕೀಕತ್ ಬಿಹಾರ ಮೂಲದವರಾಗಿದ್ದು, ವಾರಕ್ಕೆ ಕನಿಷ್ಟ ಮೂರು ಕೊಪ್ಪಳಕ್ಕೆ ಟ್ರಿಪ್ ಮಾಡುತ್ತಾರೆ. ಇವರಿಗೆ ಯಾವುದೇ ಬ್ರೇಕ್ ಇಲ್ಲ, ಹಲವರ ಜೀವ ಇವರು ಪೂರೈಸುವ ಆಕ್ಸಿಜನ್ ಮೇಲೆ ಅವಲಂಬಿತವಾಗಿದೆ.

ಹಲವು ಬಾರಿ ತಾಂತ್ರಿಕ ತೊಂದರೆಗಳಿಂದ ಆಪಾಯ ಸಂಭವಿಸುತ್ತದೆ, ಹೀಗಾಗಿ ಕೆಲವೊಮ್ಮೆ ಹೇಳಿದ ಸಮಯಕ್ಕೆ ಸೇರಲು ಸಾಧ್ಯವಾಗುವುದಿಲ್ಲ, ಹೀಗಾಗಿ ಹಲವು ಸಮಸ್ಯೆಗಳು ಉಂಟಾಗುತ್ತವೆ.

ಕೆಲವೊಮ್ಮೆ ತುರ್ತು ಸಮಯದಲ್ಲಿ ನಾವು ಟೀ ಕುಡಿಯಲು ಸಹ ನಿಲ್ಲಿಸುವುದಿಲ್ಲ, 8 ಗಂಟೆ ನಿರಂತರವಾಗಿ ಪ್ರಯಾಣ ಮಾಡಬೇಕಾಗುತ್ತದೆ.

ಆಕ್ಸಿಜನ್ ಟ್ಯಾಂಕರ್ ನಿಗದಿತ ಗಮ್ಯ ತಲುಪವವರೆಗೂ ನಾವು ಬೆರಳ ಮೇಲೆ ನಿಂತಿರುತ್ತೇವೆ, ಈ ಮೊದಲು ನಾವು ಟ್ರಿಪ್ ನಡುವೆ ಬ್ರೇಕ್ ತೆಗೆದುಕೊಳ್ಳುತ್ತಿದ್ದೇವು,  ಆದರೆ ಈಗ ಅದಕ್ಕೆ ಸಮಯವಿಲ್ಲ, ನಾವು ಆಸ್ಪತ್ರೆಗೆ ತಲುಪಿ ಮತ್ತೆ ವಾಪಾಸಾಗುತ್ತಿದ್ದೇವೆ, 

ಶಂಕರ್ ಮಾಜಿಗೆ 5 ಹೆಣ್ಣು ಮಕ್ಕಳು ಮತ್ತು 1 ಗಂಡು ಮಗುವಿದೆ, ಕೊರೋನಾ ಮೊದಲ ಅಲೆಯಿಂದ ಇಲ್ಲಿಯವರೆಗೆ ನಾನು ನನ್ನ ಕುಟುಂಬವನ್ನು ಭೇಟಿ ಮಾಡಿಲ್ಲ, ಮೊದಲ ಲಾಕ್ ಡೌನ್ ಸಮಯದಲ್ಲಿ ನಾನು ಇತರರಿಗಿಂತ ಭಿನ್ನವಾಗಿ ಉಳಿದಿದ್ದೇನೆ ಎಂದು ಹೇಳಿದ್ದಾರೆ.

ಪ್ರತಿ ಸಲ ನನ್ನ ಮಕ್ಕಳು ಕರೆ ಮಾಡಿದಾಗ ನಾನು ವಾಪಸ್ ಹೋಗಬೇಕು ಎನಿಸುತ್ತದೆ, ಆದರೆ ಕರ್ತವ್ಯಕ್ಕೆ ನನ್ನ ಮೊದಲ ಆದ್ಯತೆ ಎಂದು ಶಂಕರ್ ಮಾಜಿ ಹೇಳಿದ್ದಾರೆ.

ನಾನು ಕಳೆದ ಆರು ತಿಂಗಳ ಹಿಂದೆ ಈ ಕೆಲಸಕ್ಕೆ ಸೇರಿದೆ, ಆದರೆ ಇಷ್ಟೊಂದು ತೀವ್ರರೀತಿಯ ಸಮಸ್ಯೆ ನೋಡಿರಲಿಲ್ಲ, ಪರಿಸ್ಥಿತಿ ಹೀಗಾಗುತ್ತದೆ ಎಂದು ನಾವು ಊಹಿಸಿಯೇ ಇರಲಿಲ್ಲ, ಆಸ್ಪತ್ರೆ ಬಳಿ ರೋಗಿಗಳನ್ನು ನೋಡಿದಾಗ ನಮಗೆ ವಿಶ್ರಾಂತಿ ಇಲ್ಲ ಎಂದು ದೂರುವುದನ್ನು ಮರೆತು ಬಿಡುತ್ತೇವೆ ಎಂದು ಮೊಹಮದ್ ಹಕೀಕತ್ ತಿಳಿಸಿದ್ದಾರೆ.

SCROLL FOR NEXT