ಸಾಂದರ್ಭಿಕ ಚಿತ್ರ 
ರಾಜ್ಯ

ಕೋವಿಡ್ ಕರ್ಫ್ಯೂ: ಸೂಪರ್ ಮಾರ್ಕೆಟ್ ಗಳಲ್ಲಿರುವ ಮದ್ಯದಂಗಡಿ ತೆರೆಯಲು ಅವಕಾಶ ಇಲ್ಲ

14 ದಿನಗಳ ಲಾಕ್‌ಡೌನ್‌ ಘೋಷಿಸಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಬೆಳಗ್ಗೆ 6ರಿಂದ 10ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ.

ಬೆಂಗಳೂರು: 14 ದಿನಗಳ ಲಾಕ್‌ಡೌನ್‌ ಘೋಷಿಸಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಬೆಳಗ್ಗೆ 6ರಿಂದ 10ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ.

ಈ ಕುರಿತು ಮಂಗಳವಾರ ಆದೇಶ ಹೊರಡಿಸಿದ್ದು, ಎಲ್ಲಸ್ಟಾಂಡ್‌ ಅಲೋನ್‌ ಸಿಎಲ್‌-2, ಸಿಎಲ್‌-8, ಸಿಎಲ್‌-8ಎ, ಸಿಎಲ್‌-11, ಸಿಎಲ್‌-16 ಮತ್ತು ವೈನ್‌ ಬೊಟಿಕ್‌ ಸನ್ನದುಗಳಲ್ಲಿ ಮದ್ಯ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇತರೆ ಸನ್ನದುದಾರರು ಎಂಆರ್‌ಪಿ ದರದಲ್ಲಿಯೇ ಮದ್ಯವನ್ನು ಪಾರ್ಸೆಲ್‌ ರೂಪದಲ್ಲಿ ಮಾರಾಟ ಮಾಡಬಹುದು.

ಮದ್ಯ ಮಾರಾಟ ಸನ್ನದು ಹೊಂದಿರುವ ರೆಸ್ಟೋರೆಂಟ್‌ ಗಳಲ್ಲಿ ಗ್ರಾಹಕರಿಗೆ ಊಟ, ತಿಂಡಿ ಪಾರ್ಸೆಲ್‌ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮೈಕ್ರೋ ಬ್ರಿವರಿಗಳಲ್ಲಿ ಬಿಯರ್‌ ಅನ್ನು ಸೆರಾಮಿಕ್‌ ಗ್ಲಾಸ್‌ ಅಥವಾ ಸ್ಟೀಲ್‌ ಕಂಟೈನರ್‌ಗಳಲ್ಲಿ ಗರಿಷ್ಠ ಎರಡು ಲೀಟರ್‌ವರೆಗೆ ಮಾರಾಟ ಮಾಡಬಹುದು, ಒಂದು ವೇಳೆ ಬಾರ್ ನ ಆವರಣದಲ್ಲಿ ಮಧ್ಯ ಸೇವನೆಗೆ ಅವಕಾಶ ನೀಡಿದರೇ ಅಂತಹ ಶಾಪ್ ಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಆದೇಶಿಸಲಾಗಿದೆ.

ಮಾಲ್‌ಗಳ ಒಳಗೆ ಮದ್ಯದಂಗಡಿಗಳು ಮತ್ತು ಸೂಪರ್‌ಮಾರ್ಕೆಟ್‌ಗಳನ್ನು ಮಾರಾಟ ಮಾಡುವ ಚಿಲ್ಲರೆ ಮಾರಾಟದ ಬಿಯರ್ (ಆರ್‌ವಿಬಿ) ಪರವಾನಗಿ ಹೊಂದಿರುವ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

SCROLL FOR NEXT