ಮಾಜಿ ಸಚಿವ ಎ ಎಚ್ ವಿಶ್ವನಾಥ್ 
ರಾಜ್ಯ

ಜಿಂದಾಲ್ ಗ್ರೂಪ್ ಗೆ 3,666 ಎಕರೆ ಭೂಮಿ ಮಾರಲು ಸರ್ಕಾರ ನಿರ್ಧಾರ: ಬಿಜೆಪಿ ನಾಯಕ ಹೆಚ್. ವಿಶ್ವನಾಥ್ ವಿರೋಧ!

ಸರ್ಕಾರದ 3,666 ಎಕರೆ ಭೂಮಿಯನ್ನು ಮನಸೋ ಇಚ್ಛೆ ಬೆಲೆಗೆ ಜಿಂದಾಲ್ ಗ್ರೂಪ್ ಗೆ ಸಂಪೂರ್ಣವಾಗಿ ಮಾರಾಟ ಮಾಡುವ ನಿರ್ಧಾರವನ್ನು ಬಿಜೆಪಿ ನಾಯಕ ಎ ಎಚ್ ವಿಶ್ವನಾಥ್ ವಿರೋಧಿಸಿದ್ದು ಸಚಿವ ಸಂಪುಟ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೈಸೂರು: ಸರ್ಕಾರದ 3,666 ಎಕರೆ ಭೂಮಿಯನ್ನು ಮನಸೋ ಇಚ್ಛೆ ಬೆಲೆಗೆ ಜಿಂದಾಲ್ ಗ್ರೂಪ್ ಗೆ ಸಂಪೂರ್ಣವಾಗಿ ಮಾರಾಟ ಮಾಡುವ ನಿರ್ಧಾರವನ್ನು ಬಿಜೆಪಿ ನಾಯಕ ಎ ಎಚ್ ವಿಶ್ವನಾಥ್ ವಿರೋಧಿಸಿದ್ದು ಸಚಿವ ಸಂಪುಟ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನಕ್ಕೆ ಅನುಮೋದನೆ ನೀಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆಯಬೇಕು ಎಂದು ಸಚಿವರನ್ನು ವಿಶ್ವನಾಥ್ ಅವರು ಒತ್ತಾಯಿಸಿದ್ದು ಹಲವರ ಹುಬ್ಬೇರುವಂತೆ ಮಾಡಿದೆ. ಸರ್ಕಾರದ ತರಾತುರಿ ನಿರ್ಧಾರ ಹಲವರನ್ನು ಸಂಶಯಕ್ಕೀಡುಮಾಡಿದೆ.

ಪ್ರತಿ ಎಕರೆಗೆ 1.7 ಲಕ್ಷ ರೂಪಾಯಿಗಳೆಂದು ಕೈಗೆ ಸಿಕ್ಕಿದ ಬೆಲೆಗೆ ಏಕೆ ಒಬ್ಬ ಉದ್ಯಮಿಗೆ ಸರ್ಕಾರ ಮಾರಾಟ ಮಾಡುತ್ತಿದೆ, 1995ರ ಮಾರ್ಗಸೂಚಿ ಪ್ರಕಾರ ಮಾರುಕಟ್ಟೆ ಬೆಲೆಯೇ 70 ಲಕ್ಷ ರೂಪಾಯಿಗಳಿದೆ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಸಚಿವ ಸಂಪುಟ ಸದಸ್ಯರು ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಕೇಳಿರುವ ಬಿಜೆಪಿ ನಾಯಕ ವಿಶ್ವನಾಥ್ ಪ್ರಶ್ನಿಸಿದ್ದಾರೆ.

ಸರ್ಕಾರ ಜಂಟಿ ಶಾಸನ ಸಮಿತಿಯನ್ನು ರಚಿಸಿ ಅದು ಭೂಮಿಯ ಬಳಕೆ, ಜಿಂದಾಲ್ ಕಂಪೆನಿಯಿಂದ ಸರ್ಕಾರಕ್ಕೆ ಬರಬೇಕಾದ ಬಾಕಿ ಮೊತ್ತ ಮತ್ತು ಜಿಂದಾಲ್ ಮತ್ತು ಸರ್ಕಾರದ ನಡುವೆ ಆದ ಒಪ್ಪಂದ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT