ಸಾಂದರ್ಭಿಕ ಚಿತ್ರ 
ರಾಜ್ಯ

ದೇಶದಲ್ಲಿ ಅತಿ ಹೆಚ್ಚು ಚಿರತೆ ಹೊಂದಿರುವ ಎರಡನೇ ರಾಜ್ಯ ಕರ್ನಾಟಕ!

ದೇಶದಲ್ಲಿಯೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ, ಮಧ್ಯಪ್ರದೇಶದಲ್ಲಿ 3,421 ಕರ್ನಾಟಕದಲ್ಲಿ 1,783  ಮಹಾರಾಷ್ಟ್ರದ ಕಾಡಿನಲ್ಲಿ 1,690 ಚಿರತೆಗಳಿವೆ. 

ಹುಬ್ಬಳ್ಳಿ: ದೇಶದಲ್ಲಿಯೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ, ಮಧ್ಯಪ್ರದೇಶದಲ್ಲಿ 3,421 ಕರ್ನಾಟಕದಲ್ಲಿ 1,783  ಮಹಾರಾಷ್ಟ್ರದ ಕಾಡಿನಲ್ಲಿ 1,690 ಚಿರತೆಗಳಿವೆ. 

ಕಳೆದ ವಾರ ನವದೆಹಲಿಯಲ್ಲಿ ಬಿಡುಗಡೆಯಾದ ಭಾರತದ ವನ್ಯಜೀವಿ ಸಂಸ್ಥೆ ಮಾಹಿತಿ ಪ್ರಕಾರ, 2018 ರಲ್ಲಿ ಭಾರತದಲ್ಲಿ  ಹುಲಿ ಮೀಸಲು ಪ್ರದೇಶದಲ್ಲಿ 12,852 ಚಿರತೆಗಳಿದ್ದವು ಎಂಬುದನ್ನು ತಿಳಿಸುತ್ತದೆ. ಚಿರತೆಗಳ ಜನಸಂಖ್ಯೆಯನ್ನು ಕ್ಯಾಮೆರಾ ಟ್ರ್ಯಾಪ್‌ಗಳನ್ನು ಬಳಸಿ ಅಂದಾಜು ಮಾಡಲಾಯಿತು.

ಕರ್ನಾಟಕದಲ್ಲಿ, ಈಗ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಎಂದು ಕರೆಯಲ್ಪಡುವ ದಾಂಡೇಲಿ ಮತ್ತು ಅನಾಶಿ ಹುಲಿ ಪ್ರದೇಶಗಳು 221 ಚಿರತೆಗಳಿವೆ ಎಂದು ದಾಖಲಿಸಿವೆ. ಈ ಪ್ರದೇಶವು 23-25 ಹುಲಿಗಳನ್ನು ಹೊಂದಿದೆ ಮತ್ತು ಇದು ಕರ್ನಾಟಕದ ಅತಿದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿದೆ. 

ಹುಲಿಗಳಿಗಿಂತ ಭಿನ್ನವಾಗಿ, ಚಿರತೆಗಳು ವಿವಿಧ ಅರಣ್ಯ ಪ್ರದೇಶಗಳಲ್ಲಿರುವ ಮಾಂಸಾಹಾರಿಗಳು. ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳು ಉತ್ತಮ ಸಂಖ್ಯೆಯ ಚಿರತೆಗಳನ್ನು ದಾಖಲಿಸಿವೆ. 

ಚಹಾ ಮತ್ತು ಕಾಫಿ ಎಸ್ಟೇಟ್‌ಗಳಲ್ಲಿ ಕಂಡುಬರುವ ಈ ದೊಡ್ಡ ಬೆಕ್ಕುಗಳ ಹೊಂದಾಣಿಕೆಯ ನಡವಳಿಕೆಯನ್ನು ವರದಿಯು ತೋರಿಸುತ್ತದೆ. ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶಗಳ ವಿಭಜಿತ ಕಾಡುಗಳಲ್ಲಿ ಚಿರತೆಗಳು ಕಂಡುಬಂದಿವೆ. 

ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅತ್ಯಂತ ಕಷ್ಟಕರವಾದ ಭೂಪ್ರದೇಶಗಳಲ್ಲಿ ಒಂದಾಗಿದೆ. ಇದು ಭೀಮಗಡ್ ವನ್ಯಜೀವಿ ಅಭಯಾರಣ್ಯ ಮತ್ತು ಗೋವಾದ ಭಗವಾನ್ ಮಹಾವೀರ್ ವನ್ಯಜೀವಿ ಅಭಯಾರಣ್ಯವನ್ನು ಕೂಡ ಒಳಗೊಂಡಿದೆ. ಇಲ್ಲಿ ಚಿರತೆ ಗಣತಿ ಮಾಡುವುದು ಕಷ್ಟಕರವಾಗಿದ್ದು, ಚಿರತೆ ಗಣತಿ ಮಾಡಿದ ಯಶಸ್ಸು ಇಲ್ಲಿನ ಸಿಬ್ಬಂದಿಗೆ ಸಲ್ಲಲಿದೆ.

ಮಾನವರೊಂದಿಗೆ ಜಾಗವನ್ನು ಹಂಚಿಕೊಳ್ಳುವ ಚಿರತೆಗಳ ಮೇಲೆ ಗಮನವಿರಬೇಕು ಮತ್ತು ಸಂಘರ್ಷವನ್ನು ಎದುರಿಸಲು ಪೂರ್ವಭಾವಿ ಕ್ರಮಗಳ ಪ್ರಾಮುಖ್ಯತೆ ಅಗತ್ಯ ಎಂದು ವನ್ಯಜೀವಿ ಸಂರಕ್ಷಣಾ ಸೊಸೈಟಿಯ (ಡಬ್ಲ್ಯೂಸಿಎಸ್) ಡಾ ವಿದ್ಯಾ ಆತ್ರೇಯ ಸಲಹೆ ನೀಡಿದ್ದಾರೆ.

ಭಾರತದಾದ್ಯಂತ 26,838 ಸ್ಥಳಗಳಲ್ಲಿ ಕ್ಯಾಮರಾ ನಿಯೋಜಿಸಲಾಗಿದ್ದು, ಇದರ ಪರಿಣಾಮವಾಗಿ 34,858,623 ವನ್ಯಜೀವಿಗಳ ಛಾಯಾಚಿತ್ರಗಳು ದಾಖಲಾಗಿದ್ದು ಅದರಲ್ಲಿ 51,777 ಚಿರತೆಗಳಿವೆ. ಒಟ್ಟು 5,240 ವಯಸ್ಕ ಚಿರತೆ ಫೋಟೋಗಳನ್ನು ಸೆರೆಹಿಡಿಯಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

SCROLL FOR NEXT