ಕರ್ನಾಟಕ: ದಕ್ಷಿಣ ಕನ್ನಡದಲ್ಲಿ ಕೆರೆಗೆ ಬಿದ್ದು ತಾಯಿ, ಮಗು ಸಾವು: ರಾಮನಗರದಲ್ಲಿ ಕೊಚ್ಚಿ ಹೋದ ಯುವಕ
ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿಯೂ ಮೃತಪಟ್ಟಿರುವ ದಾರುಣ ಘಟನೆ ಸುಳ್ಯ ತಾಲ್ಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಡೆದಿದೆ.
ದಕ್ಷಿಣಕನ್ನಡ: ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿಯೂ ಮೃತಪಟ್ಟಿರುವ ದಾರುಣ ಘಟನೆ ಸುಳ್ಯ ತಾಲ್ಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಡೆದಿದೆ.
ಕೆಮ್ರಾಜೆ ಗ್ರಾಮದ ಮಾಪಲಕಜೆಯ ಸಂಗೀತಾ ಮತ್ತು ಅವರ ಮಗು ಮೃತ ದುರ್ದೈವಿಗಳು. ತೋಟದಲ್ಲಿನ ಕೆರೆಯ ಬಳಿ ಮಗು ಕಾಲು ಜಾರಿ ಬಿದ್ದಾಗ ರಕ್ಷಿಸಲು ಸಂಗೀತಾ ಕೂಡ ಕೆರೆಗೆ ಹಾರಿದ್ದಾರೆ. ಆದರೆ, ಈಜು ಬಾರದ ಹಿನ್ನೆಲೆಯಲ್ಲಿ ಮಗುವಿನೊಂದಿಗೆ ತಾಯಿಯೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಆಯ ತಪ್ಪಿ ನದಿಗೆ ಬಿದ್ದು ಕೊಚ್ಚಿ ಹೋದ ಯುವಕ
ರಾಮನಗರ: ವೃಷಭಾವತಿ ನದಿಗೆ ಯುವಕನೋರ್ವ ಆಯ ತಪ್ಪಿ ಬಿದ್ದು ಕೊಚ್ಚಿ ಹೋಗಿರುವ ಘಟನೆ ತಾಲ್ಲೂಕಿನ ಬಿಡದಿ ಹೋಬಳಿಯ ಚೌಕಹಳ್ಳಿ ಗ್ರಾಮದ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ. ಚೌಕಹಳ್ಳಿ ನಿವಾಸಿ ಕೌಶಿಕ್ ರೆಡ್ಡಿ (26) ನದಿಯಲ್ಲಿ ಬಿದ್ದ ಯುವಕ.
ಕೌಶಿಕ್ ಬೆಳಿಗ್ಗೆ 7.30ರ ಸುಮಾರಿಗೆ ವಾಕಿಂಗ್ ಮುಗಿಸಿಕೊಂಡು ಬಂದು ಸೇತುವೆ ಮೇಲೆ ಕುಳಿತುಕೊಳ್ಳುವಾಗ ಆಯತಪ್ಪಿ ವೃಷಭಾವತಿ ನದಿಗೆ ಬಿದ್ದಿದ್ದಾನೆ ಎನ್ನಲಾಗಿದೆ.